27815bjpಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg27815bjpಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg27815bjpಅರಭಾವಿ ಬಾಲಚಂದ್ರ ಜಾರಕಿಹೊಳಿ ದಿಗ್ವಿಜಯ/news/2008/12/30/assembly-poll-bjp-wins-arabhavi-with-big-margin.htmlಬೆಳಗಾವಿ. ಡಿ. 30 : ಅಪರೇಷನ್ ಕಮಲದ ಮೂಲದ ಜೆಡಿಎಸ್ ಶಾಸಕ ಸ್ಝಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ವಿಧಾನಸಭೆ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಅವರು ಅರಭಾವಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗುವುದರೊಂದಿಗೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗಿದೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಹಾಗೂ 33761http://kannada.oneindia.com/img/2008/12/30-balchandra-jarkiholi1e.jpg27815bjpಹುಕ್ಕೇರಿ: ಬಿಜೆಪಿಯ ಕತ್ತಿ ಭರ್ಜರಿ ಜಯ/news/2008/12/30/hukkeri-by-election-umesh-katti-bjp-victory.htmlಬೆಂಗಳೂರು. ಡಿ. 30 : ಅರಭಾವಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬೆನ್ನಲ್ಲೇ ಹುಕ್ಕೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ ಕತ್ತಿ 67,689 ಮತಗಳ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹುಕ್ಕೇರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಧೂಳಿಪಟವಾಗಿದ್ದು, ಉಮೇಶ್ ಕತ್ತಿ ಮತ್ತೆ ತನ್ನ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ. ಕಾರವಾರದಲ್ಲಿ ಆನಂದ ಅಸ್ನೋಟಿಕರ್, ದೇವದುರ್ಗದಲ್ಲಿ ಶಿವನಗೌಡ ನಾಯಕ ಗೆಲುವಿನ 33762http://kannada.oneindia.com/img/2008/12/30-umesh-katti1e.jpg27815bjpಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು/news/2008/12/30/bjp-victory-karwar-doddaballapur-devadurga-by-poll.htmlಬೆಂಗಳೂರು, ಡಿ. 30 : ಬಿಜೆಪಿಯ ಗೆಲುವಿನ ಅಭಿಯಾನ ಮುಂದುವರಿದಿದ್ದು, ಕಾರವಾರ, ದೊಡ್ಡಬಳ್ಳಾಪುರ ಹಾಗೂ ದೇವದುರ್ಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಸಚಿವ ಆನಂದ ಅಸ್ನೋಟಿಕರ್, ಶಿವನಗೌಡ ನಾಯಕ ಹಾಗೂ ಜೆ ನರಸಿಂಹಸ್ವಾಮಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.ಒಂದು ಮಾತಿಗೆ ದೇವದುರ್ಗದಲ್ಲಿ ಗೆಲುವು ಸಾಧಿಸುವ ಅಭ್ಯರ್ಥಿಗಳು ಸಂಪುಟ ಸ್ಥಾನ ಗ್ಯಾರಂಟಿ ಎನ್ನುವ ಮಾತಿದೆ. ಆಪರೇಷನ್ ಕಮಲದ ಮೂಲಕ ಬಿಜೆಪಿ 33763http://kannada.oneindia.com/img/2008/12/30-anand-asnotikar1e.jpg236259rajnath singhಬಿಜೆಪಿಯಲ್ಲಿ ಸ್ವಜನ ಪಕ್ಷಪಾತ; ಭುಗಿಲೆದ್ದ ಅಸಮಾಧಾನ/news/2009/03/05/yeddyurappas-son-raghavendra-debut-ls-polls.htmlಬೆಂಗಳೂರು, ಮಾ.5:ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆಯಲ್ಲಿ ಏಕಪಕ್ಷೀಯ ತೀರ್ಮಾನ, ಕುಟುಂಬ ರಾಜಕಾರಣಕ್ಕೆ ಆಸ್ಪದ ಹಾಗೂ ನಿಗಮ ಮಂಡಳಿ ಅಧ್ಯಕ್ಷರ ನೇಮಕದಲ್ಲಿ ಸ್ವಜನ ಪಕ್ಷಪಾತ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಇತ್ಯಾದಿ ಕಾರಣಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಹಿರಿಯ ಮುಖಂಡರ ಮಾತಿಗೆ ಮನ್ನಣೆ ನೀಡದೇ, ಮುಖ್ಯಮಂತ್ರಿ ಯಡಿಯೂರಪ್ಪ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿರುವುದರಿಂದ ಪಕ್ಷದ ವಲಯದಲ್ಲಿ ಭಿನ್ನಮತ ಭುಗಿಲೆದ್ದಿದೆ. 34992http://kannada.oneindia.com/img/2009/03/05-raghavendra1.jpg236259rajnath singhರಾಜನಾಥ್ ವಿರುದ್ಧ ಜೈಟ್ಲಿ ಮುನಿಸು, ಸಭೆಗೆ ಗೈರು/news/2009/03/13/arun-jaitley-skips-bjp-election-meeting.htmlನವದೆಹಲಿ, ಮಾ. 13 : ಚುನಾವಣೆ ಸಮೀಪಿಸುತ್ತಿರುವ ಈ ಗಳಿಗೆಯಲ್ಲಿ ಶಿಸ್ತಿನ ಪಕ್ಷ ಎಂದು ಹೆಗ್ಗಳಿಕೆ ಹೊಂದಿರುವ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ವೈಮನಸ್ಸು ಸ್ಫೋಟಗೊಂಡಿದೆ. ಬಿಜೆಪಿ ಪಕ್ಷದ ಕೇಂದ್ರ ಚುನಾವಣೆ ಸಮಿತಿ ಇಂದು ಕರೆದಿದ್ದ ಮಹತ್ವದ ಸಭೆಗೆ ಹಿರಿಯ ನಾಯಕ ಅರುಣ್ ಜೈಟ್ಲಿ ಗೈರಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ದೆಹಲಿ, ಆಂಧ್ರಪ್ರದೇಶ 35198http://kannada.oneindia.com/img/2009/03/13-arun-jaitley2.jpg236259rajnath singhರಾಜನಾಥ್ ನಿವಾಸಕ್ಕೆ ಜೈಟ್ಲಿ ದಿಢೀರ್ ಭೇಟಿ/news/2009/03/19/jaitley-meets-bjp-president-rajnath.htmlನವದೆಹಲಿ, ಮಾ. 19 : ಈಶಾನ್ಯ ರಾಜ್ಯಗಳ ಸಂಘಟಕರಾಗಿ ಸುಧಾಂಶು ಮಿತ್ತಲ್ ನೇಮಕದಿಂದ ಬೇಸರಗೊಂಡು ಪಕ್ಷದ ಎಲ್ಲ ಚಟುವಟಿಕೆಗಳಿಂದ ತಟಸ್ಥರಾಗಿ ಉಳಿದಿದ್ದ ಅರುಣ್ ಜೈಟ್ಲಿ ಇಂದು ದಿಢೀರ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ. ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಲು ನಿರಾಕರಿಸಿದರಾದರೂ ಸ್ವಲ್ಪ ಮಟ್ಟಿಗೆ ಮತ್ತೆಗಾಗಿರುವುದು 35355http://kannada.oneindia.com/img/2009/03/19-arun-jaitley2.jpg236259rajnath singhಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ/news/2009/04/03/bjp-releases-ls-election-manifesto.htmlನವದೆಹಲಿ, ಏ. 3 : ತೀವ್ರ ಟೀಕೆ ಟಿಪ್ಪಣಿಗಳ ನಂತರ ಕೊನೆಗೂ ಭಾರತೀಯ ಜನತಾ ಪಕ್ಷ ತನ್ನ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ್ತದೆ ಹಳೆಯ ಆಲದ ಮರಕ್ಕೆ ಜೋತು ಬಿದ್ದಿರುವ ಬಿಜೆಪಿ, ರಾಮಮಂದಿರ ನಿರ್ಮಿಸಿಯೇ ಸಿದ್ಧ ಎಂದು ಹೇಳಿದೆ. ಅಕ್ಕಿ ರಾಜಕೀಯಕ್ಕೆ ಮುಂದಾಗಿರುವ ಕೇಸರಿ ಪಡೆ, 2 ರುಪಾಯಿ ದರದಲ್ಲಿ 35704http://kannada.oneindia.com/img/2009/04/03-advani-lk2.jpg236259rajnath singhಉಗ್ರರ ಮಟ್ಟ ಹಾಕಲು ಸೇನೆ ರವಾನೆ, ಬಿಜೆಪಿ/news/2009/04/14/if-voted-to-power-bjp-will-send-troops-to-pak.htmlಗಯಾ (ಬಿಹಾರ್), ಏ. 14 : ವಿವಿಧ ರಾಜಕೀಯ ಪಕ್ಷಗಳು ಮತ ಪಡೆಯಲು ತರತರಹದ ಆಮಿಷಗಳನ್ನು ಮತದಾರರಿಗೆ ಒಡ್ಡುವುದು ಸಹಜ. ಆದರೆ, ಭಾರತೀಯ ಜನತಾ ಪಕ್ಷ ಒಂದು ಹೆಜ್ಜೆ ಮುಂದೆ ಇರಿಸಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಭಯೋತ್ಪಾದಕರ ನಿರ್ನಾಮಕ್ಕೆ ಭಾರತೀಯ ಸೈನಿಕರನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಭರವಸೆ ನೀಡಿದ್ದಾರೆ. ಪಾಕಿಸ್ತಾನ 35929http://kannada.oneindia.com/img/2009/04/14-rajnath-singh1e.jpg156366mrutyunjaya kalmatಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ/news/2009/01/15/border-town-belgaum-geared-up-for-second-session.htmlಬೆಳಗಾವಿ ನಗರ ಎರಡನೇ ಬಾರಿ ಅಧಿವೇಶನ(ಜ. 16 ರಂದು)ಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಕಳೆದ 2006 ಸೆಪ್ಟೆಂಬರ್ 28 ರಂದು ಅಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನಿಂದ ಆಚೆ ಪ್ರಥಮ ಬಾರಿಗೆ ಅಧಿವೇಶನ ನಡೆಸಿ ಸೈ ಎನಿಸಿಕೊಂಡಿದ್ದರು. ಇಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎರಡನೇ ಬಾರಿಗೆ ಗಡಿ ನಗರ 34081http://kannada.oneindia.com/img/2009/01/15-belgaum-session1.jpg156366mrutyunjaya kalmatಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ/mixed-bag/lifestyle/2009/0208-valentines-day-celebrations-ktaka-sriram-sene.htmlವ್ಯಾಲೆಂಟೈನ್ ಡೇ ಇನ್ನೇನು ಸಮೀಪಿಸುತ್ತಿದೆ. ಅನೇಕ ದಿನಗಳಿಂದ ಮುಚ್ಚಿಟ್ಟಿಕೊಂಡಿದ್ದು ಪ್ರೀತಿ ನಿವೇದಿಸಿಕೊಳ್ಳಲು ಇದೊಂದು ಸಕಾಲ. ದೇಶದ್ಯಾಂತ ಯುವಜನತೆ ಈ ದಿನಕ್ಕಾಗಿ ಕಾತುರದಿಂದ ಕಾಯತೊಡಗಿದೆ. ಏನಾದರೂ ಸರಿ ಮಗಾ (ಕಣೆ), ಅವಳಿ(ನಿ)ಗೆ ತನ್ನ ಪ್ರೀತಿಯನ್ನು ಹೇಳಿಕೊಂಡು ಬಿಡುವೆ ಎನ್ನುವ ಸಾವಿರಾರು ಮನಸ್ಸುಗಳು ಈ ದಿನವನ್ನು (ಫೆ.14) ಎದುರು ನೋಡುತ್ತಿವೆ. *ಮೃತ್ಯುಂಜಯ ಕಲ್ಮಠಪ್ರೇಮಿಗಳ ದಿನ ಯಾವ ದೇಶದ್ದು, ಎಲ್ಲಿಂದ ಬಂತು, 34540http://kannada.oneindia.com/img/2009/02/08-red-rose-bunch1.jpg156366mrutyunjaya kalmatರ‌್ಯಾಗ್ ಮಾಡುವವರಿಗೆ ಯಾವ ಶಿಕ್ಷೆ ನೀಡಬೇಕು? /news/2009/03/11/punish-those-who-rag-brutally-life-term-or-death.html*ಮೃತ್ಯುಂಜಯ ಕಲ್ಮಠರ‌್ಯಾಗಿಂಗ್ ಸಮಾಜಕ್ಕೆ ಅಂಟಿರುವ ಬಹುದೊಡ್ಡ ಪಿಡುಗು. ಇದರ ಭೀಕರತೆಗೆ ನೂರಾರು ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ಆಯಾ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ಕಾನೂನು ಜಾರಿಗೊಳಿದರೂ ಇನ್ನೂ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರಿಂದ ಪೋಷಕರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ರ‌್ಯಾಗಿಂಗ್ ಎಂದ ತಕ್ಷಣ ಬೆಚ್ಚಬೀಳುವ ಅನೇಕ ವಿದ್ಯಾರ್ಥಿಗಳು ನಮ್ಮ ಕಣ್ಮುಂದೆ 35150http://kannada.oneindia.com/img/2009/03/11-rape-victim1.jpg156366mrutyunjaya kalmatಲೋಕಸಭೆ: ಕರ್ನಾಟಕದಲ್ಲಿ ಗೆಲ್ಲುವ ಕುದುರೆಗಳು /news/2009/04/05/ls-election-who-will-win-in-karnataka.htmlಲೋಕಸಭೆ ಮತದಾನದ ದಿನಾಂಕಗಳು ಸನ್ನಿಹಿತವಾಗತೊಡಗಿವೆ. ರಾಜ್ಯದ ಐದು ಮಂದಿ ಮಾಜಿ ಮುಖ್ಯಮಂತ್ರಿಗಳು ಅಖಾಡದಲ್ಲಿದ್ದಾರೆ. ತಂತ್ರಜ್ಞಾನ ಕ್ಷೇತ್ರದ ಪ್ರಮುಖರು, ವೈದ್ಯರು, ಉದ್ಯಮಿದಾರರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿದ್ದರೂ ಹೇಳಿಕೊಳ್ಳವ ಮಟ್ಟಿಗಾದರೂ ಹುರಿಯಾಳು ಆಗಿದ್ದಾರೆ. ಇದರ ಜೊತೆಗೆ ಅಪರೇಷನ್ ಕಮಲದ ಮೂಲಕ ಬಿಜೆಪಿ ಸೇರ್ಪಡೆಗೊಂಡಿರುವ ಕಾಂಗ್ರೆಸ್ಸಿನ ಕೆಲ ಅತ್ಯಂತ ಹಿರಿಯ ರಾಜಕಾರಣಿಗಳು ಬಿಜೆಪಿ ಮೂಲಕ ತಮ್ಮ ಅದೃಷ್ಟವನ್ನು ಒರೆಗೆ ಹಚ್ಚಿದ್ದಾರೆ.*ಮೃತ್ಯುಂಜಯ ಕಲ್ಮಠ 35740http://kannada.oneindia.com/img/2009/04/05-bjp-logo2.jpg156366mrutyunjaya kalmatಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?/news/2009/04/11/siddaramaiah-may-appoint-for-kharges-post.html*ಮೃತ್ಯುಂಜಯ ಕಲ್ಮಠಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ 35886http://kannada.oneindia.com/img/2009/04/11-siddaramaiah2e.jpgnews"> ಅಡ್ವಾಣಿಯವರೇ ಹಿಂದುತ್ವ ಕೈಬಿಡಿ | LK Advani | BJP | Rajnath Singh | Mrutyunjaya Kalmat | Congress | Loksabha Election 2009 | Rahul Gandhi | Varun Gandhi | ಅಡ್ವಾಣಿಯವರೇ ಹಿಂದುತ್ವ ಕೈಬಿಡಿ - Kannada Oneindia

ಅಡ್ವಾಣಿಯವರೇ ಹಿಂದುತ್ವ ಕೈಬಿಡಿ

Advaniji leave your mother card for Hindutva
*ಮೃತ್ಯುಂಜಯ ಕಲ್ಮಠ

ಭಾರತೀಯ ಜನತಾ ಪಕ್ಷಕ್ಕೆ ಏನಾಗಿದೆ. ಒಂದು ಲೋಕಸಭೆ ಚುನಾವಣೆಯಲ್ಲಿ ಸೋಲುಂಡರೆ ಪಕ್ಷದ ಆಯುಷ್ಯ ಕೊನೆಗೊಳ್ಳುತ್ತಾ ? ಆ ಪಕ್ಷದಲ್ಲಿರುವ ನಾಯಕರಿಗೆ ಇನ್ನ್ಯಾವತ್ತೂ ಈ ದೇಶದ ಅಧಿಕಾರದ ಗದ್ದುಗೆಯ ಮೇಲೆ ಕೂರುವ ಅವಕಾಶ ಸಿಗುವುದಿಲ್ವಾ ? ಉಕ್ಕಿನ ಮನುಷ್ಯ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಬರೀ 82 ವರ್ಷ, ಇನ್ನೈದು ವರ್ಷ ಅವರ ವಯಸ್ಸು ಗಟ್ಟಿಯಾಗಿರುವುದಿಲ್ವಾ ? ಅವರನ್ನು ಪ್ರಧಾನಿ ಆಗಿಸಲು ಶ್ರಮಿಸೋದು ಬೇಡವಾ ? ಆಗಿರುವ ತಪ್ಪನ್ನು ತಿದ್ದಿಕೊಳ್ಳುವುದು ಬೇಡವಾ ? ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಪ್ರತ್ಯಾರೋಪಕ್ಕೆ ಇಳಿದರೆ ಸಮಸ್ಯೆ ಬಗೆಹರಿಯುತ್ತಾ ? ಚುನಾವಣೆ ತಂತ್ರಗಾರಿಕೆ ಹೆಣೆದವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಿದರೆ ಉದ್ಭವಿಸಿರುವ ಎಲ್ಲ ಸಮಸ್ಯೆಗಳು ಸರಿಹೋಗುತ್ತವೆಯಾ ? ಏಕೋ ಅತೀ ಶಿಸ್ತಿನ ಪಕ್ಷ ? ಎಂದು ಗುರುತಿಸಿಕೊಂಡಿದ್ದ ಬಿಜೆಪಿ ಎಂದು ರಾಷ್ಟ್ರೀಯತೆ ಸಾರುವ ಪಕ್ಷದ ಸ್ಥಿತಿ ಚಿತ್ರಾನ್ನವಾಗಿ ಪಾತಾಳ ತಲುಪಿದ್ದು ಅಯ್ಯೋ ಅನಿಸುತ್ತದೆ ಅಲ್ಲವೇ.

ಕಾಂಗ್ರೆಸ್ ಪಕ್ಷದ ಕೆಲ ಪ್ರಮುಖ ತೀರ್ಮಾನಗಳು, ಆದೇಶಗಳನ್ನು ನಿಮಗೆ ನೆನಪಿಸುವೆ. ಅಮರನಾಥ್ ದೇವಾಲಯಕ್ಕೆ ಭೂಮಿ ನೀಡಿದ್ದಕ್ಕಾಗಿ ಕಾಶ್ಮೀರ ಹೊತ್ತಿ ಉರಿಯಿತು. ಆಗ ಜಮ್ಮು ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಗುಲಾಮ್ ನಬಿ ಅಜಾದ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಮುಂಬೈ ಭಯೋತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಮಂತ್ರಿಯಾಗಿದ್ದ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ವಿಲಾಸ್ ರಾವ್ ದೇಶಮುಖ್, ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಜಗದೀಶ್ ಟೈಟ್ಲರ್ ಹೈಕಮಾಂಡ್ ಆದೇಶದ ಮೇಲೆ ವಾಪಸ್ಸು ಪಡೆದುಕೊಂಡರು. ಅದು ಆ ಪಕ್ಷದ ನಾಯಕರಿಗೆ ಅನಿವಾರ್ಯವಿತ್ತು.

ಅದಿರಲಿ. ಕಳೆದ ಲೋಕಸಭೆ ಚುನಾವಣೆಯಲ್ಲಿ ಮುಂದಿನ ಪ್ರಧಾನಿ ಎಂದು ಎರಡನೇ ಅವಧಿಗೆ ಮನಮೋಹನ್ ಸಿಂಗ್ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದಾಗ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಬಲ ನಾಯಕ ಪ್ರಣಬ್ ಮುಖರ್ಜಿ ಕೂಡಾ ನಾಯಕರ ನಿರ್ಧಾರಕ್ಕೆ ತಲೆಬಾಗಿದರು. ಲಾಲು ಜೊತೆಗೆ ಮುನಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷ ಚುನಾವಣೆ ಪೂರ್ವದಲ್ಲಿ ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ರಾಹುಲ್ ಗಾಂಧಿ ಓಲೈಸಲು ನಿಂತರು. ಇಡೀ ಕಾಂಗ್ರೆಸ್ ಅವರ ಹಿಂದೆ ನಿಂತಿತು. ಆಗ ತುಸು ಅಸಮಾಧಾನ ವ್ಯಕ್ತಪಡಿಸಿದ ನಮ್ಮವರೇ ಆದ ವೀರಪ್ಪ ಮೊಯ್ಲಿ ಅವರನ್ನು ಪಕ್ಷದ ವಕ್ತಾರ ಸ್ಥಾನದಿಂದ ಏಕಾಏಕಿ ಕಿತ್ತು ಹಾಕಿದರು. ಈ ಎಲ್ಲ ತೀರ್ಮಾನಗಳು ಪಕ್ಷ ಅಧ್ಯಕ್ಷೆ ಸೋನಿಯಾ ಗಾಂಧಿ ತೆಗೆದುಕೊಂಡರು. ಅಷ್ಟೇ ಏಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಅತ್ಯಂತ ತಳಮಟ್ಟಕ್ಕೆ ಇಳಿದಿದೆ. ಆದರೂ ಕೂಡಾ ಒಬ್ಬರಿಗೊಬ್ಬರು ಕೆಸರೆರಚಾಟ ಇಲ್ಲ. ಇಷ್ಟಾದರೂ ಆ ಪಕ್ಷದ ನಾಯಕರು ಕಮಕ್ ಕಿಮಕ್ ಅನ್ನಲ್ಲ ಬಿಡಿ. ಅಲ್ಲೇನಿದ್ದರೂ ದಿಲ್ಲಿಯ 10, ಜನಪಥ್ ರಸ್ತೆಯಿಂದ ಬರುವ ಆದೇಶವೇ ಅಂತಿಮ.

ಹಾಗಾದರೇ ಬಿಜೆಪಿಗೆ ಏನಾಗಿದೆ. ಕಾಂಗ್ರೆಸ್ ಗೆ ಕೂಡಾ ಸೋಲಿದೆ, ಗೆಲುವಿದೆ. ಎರಡನ್ನು ಸಮಾನಾಗಿ ಹಂಚಿಕೊಳ್ಳುತ್ತಾರೆ. ಹಾಗಾದರೆ ಬಿಜೆಪಿ ನಾಯಕ ಏಕೆ ಹೀಗಾಡುತ್ತಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಪಕ್ಷದ ಸರ್ವೋಚ್ಚ ನಾಯಕ ಲಾಲ್ ಕೃಷ್ಣ ಅಡ್ವಾಣಿ ತಿಂಗಳ ಮೇಲಾದರೂ ಅವರು ಉಗುಳು ನುಂಗುತ್ತಲೇ ಇದ್ದಾರೆ. ದೇಶದ ಜನತೆ ಕೈಹಿಡಿಯಲಿಲ್ಲ ಎಂಬ ನೋವು ಇರಬಹುದು. ಮುಖಭಂಗ ಅನುಭವಿಸಿರುವ ಸಂಕಟ ಇರಬಹುದು, 50 ವರ್ಷ ರಾಜಕೀಯ ಮಾಡಿದರೂ ಪ್ರಧಾನಿ ಆಗುವ ಅವಕಾಶ ಲಭಿಸಲಿಲ್ವಾ ಎಂಬ ಕೊರಗಿರಬಹುದು. ಇದು ಒಂದು ಕಡೆಯಾದರೆ, ಬಿಜೆಪಿಯ ಇತರೆ ನಾಯಕರಾದ ಯಶವಂತ್ ಸಿನ್ಹಾ, ಜಸ್ವಂತ್ ಸಿಂಗ್, ಅರುಣ್ ಜೈಟ್ಲಿ, ರಾಜನಾಥ್ ಸಿಂಗ್, ಅರುಣ್ ಶೌರಿ, ಸುಧೀಂದ್ರ ಕುಲಕರ್ಣಿ ಅವರ ವರ್ತನೆ ನೋಡಿದ್ರೆ, ಇದ್ದುದ್ದರಲ್ಲಿ ಕಾಂಗ್ರೆಸ್ ಪಕ್ಷವೇ ವಾಸಿ ಅನಿಸಲ್ವಾ. ಶಿಸ್ತಿನ ಪಕ್ಷವೆಂದು ಖ್ಯಾತಿ ಹೊಂದಿದ್ದ ಬಿಜೆಪಿಯಲ್ಲಿ ಎಲ್ಲಿದೆ ಶಿಸ್ತು. ಹಿರಿಯ ನಾಯಕ ಅಡ್ವಾಣಿ ಬಾಯ್ಮಿಚ್ಚಿಕೊಂಡಿದ್ದಾರೆ. ಉಳಿದ ಎಲ್ಲ ನಾಯಕರು ಬಾಯಿ ಬೊಂಬಾಯಿ. ಪಕ್ಷದ ಇಮೇಜನ್ನು ಲೆಕ್ಕಿಸದೇ ಸಾರ್ವಜನಿಕವಾಗಿ ಆರೋಪ ಪ್ರತ್ಯಾರೋಪಕ್ಕೆ ಇಳಿದಿದ್ದಾರೆ. ನಿಮ್ಮನ್ನು ಬೆಂಬಲಿಸುವ ಕಾರ್ಯಕರ್ತರಿಗೆ ಯಾವ ಸಂದೇಶ ರವಾನಿಸಿದಂತಾಗುತ್ತದೆ. ಜನರು ನಿಮ್ಮ ಬಗ್ಗೆ ಏನು ಅಂದುಕೊಂಡಾರೂ ಎಂಬ ಭಯವೂ ನಿಮಗಿಲ್ಲವೇ ?

ದೇಶದ ಮತದಾರ ತಂಬಾ ಪ್ರಬುದ್ಧವಾಗಿದ್ದಾನೆ. ಪ್ರತಿ ನಾಯಕರ ಜನ್ಮ ಜಾಲಾಡುವಷ್ಟು ತಿಳುವಳಿಕೆ ಹೊಂದಿದ್ದಾನೆ. ಅದೇ ಕಾರಣಕ್ಕೆ ಎಲ್ ಕೆ ಅಡ್ವಾಣಿ ಅವರು ಪ್ರಧಾನಿ ಆಗಲಿಕ್ಕೆ ಸಾಧ್ಯವಾಗಲಿಲ್ಲ. ಹಿಂದುತ್ವದ ಆಟ ನಡೆಯಲಿಲ್ಲ. ನಡೆಯಲು ಸಾಧ್ಯವೂ ಇಲ್ಲ. ದುರ್ಬಲ ಪ್ರಧಾನಿ, ವಿದೇಶಿ ಮೂಲ, ವರುಣ್ ಗಾಂಧಿ ಹುಚ್ಚಾಟ, ಅಡ್ವಾಣಿ ಜೊತೆಗೆ ನರೇಂದ್ರ ಮೋದಿಯನ್ನು ಪ್ರಧಾನಿ ಎಂದು ಬಿಂಬಿಸಿದ್ದು ಪಕ್ಷದ ಸೋಲಿಗೆ ಪ್ರಮುಖ ಕಾಣಿಕೆ ಸಲ್ಲಿಸಿದವು. ಇದೀಗ ನವದೆಹಲಿಯಲ್ಲಿ ಎರಡು ದಿನದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಶುರುವಾಗಿದೆ. ಮೊದಲನೇ ದಿನದಲ್ಲಿ ಯಶವಂತ್ ಸಿನ್ಹಾ, ಅರುಣ್ ಜೈಟ್ಲಿ ಅನುಪಸ್ಥಿತಿ ಪಕ್ಷದಲ್ಲಿ ಯಾವುದೇ ಸರಿಯಿಲ್ಲ ಅನ್ನುವುದು ದೃಡಪಟ್ಟಿದೆ. ಸೋಲಿನ ಹೊಣೆಗಾರಿಕೆ ಹೊರುವುದಾದರೆ ನಾನೇ ಹೊರುವೆ ಎಂದು ಹೇಳುವ ಮೂಲಕ ಪಕ್ಷದಲ್ಲಿ ಬಿರುಗಾಳಿಯನ್ನು ತಣ್ಣಗಾಗಿಸಲು ರಾಜನಾಥ್ ಸಿಂಗ್ ಪ್ರಯತ್ನಿಸುತ್ತಿದ್ದಾರೆ. ಆದರೆ, ಇಷ್ಟು ಬೇಗ ಭಿನ್ನಮತ ಶಮನವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.

ಇನ್ನೂ ಕಾಂಗ್ರೆಸ್ ಎರಡನೇ ಹಂತದ ನಾಯಕರನ್ನು ತಯಾರು ಮಾಡುತ್ತಿದೆ. ಸ್ವತ ರಾಹುಲ್ ಗಾಂಧಿ ಅವರು ನೇತೃತ್ವ ವಹಿಸಿದರೆ, ಜ್ಯೋತಿರಾಧಿತ್ಯ ಸಿಂಧಿಯಾ, ಜಿತಿನ್ ಪ್ರಸಾದ್, ಸಚಿನ್ ಪೈಲೆಟ್, ಸಂದೀಪ್ ದೀಕ್ಷಿತ, ಕೃಷ್ಣ ಭೈರೇಗೌಡ ಅವರಂತಹ ನಾಯಕರು ನಿಧಾನವಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯಲ್ಲಿ ಸದ್ಯ ನಾಲ್ಕೈದು ನಾಯಕರನ್ನು ಬಿಟ್ಟರೆ ಎರಡನೇ ಹಂತದ ನಾಯಕರು ಕಾಣುತ್ತಿಲ್ಲ. ಲಾಲ್ ಕೃಷ್ಣ ಅಡ್ವಾಣಿ ನಂತರ ಸಮರ್ಥವಾಗಿ ಪಕ್ಷ ನಡೆಸುವ ನಾಯಕರು ಈಗ ಬಿಜೆಪಿ ಇಲ್ಲ ಎನ್ನಬಹುದು. ಹಾಗಾದರೆ, 120 ವರ್ಷ ಇತಿಹಾಸ ಇರುವ ನೂರಾರು ಮುಖಂಡರನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಎದಿರೇಟು ತಿರುಗೇಟು ನೀಡುವವರು ಯಾರು ? ಬಿಜೆಪಿ ಹಿಂದುತ್ವವನ್ನು ಕೈಬಿಡಬೇಕು. ಎರಡನೇ ಹಂತದ ಯುವನಾಯಕರನ್ನು ಬೆಳೆಸುವ ಕೆಲಸ ಆಗಬೇಕು. ಅಲ್ಪಸಂಖ್ಯಾತ ನಾಯಕನನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿಸಿದರೆ, ಕಾಂಗ್ರೆಸ್ ಪಕ್ಷಕ್ಕೆ ತುಸು ಏಟು ನೀಡಬಹುದು. ಇಲ್ಲದಿದ್ದರೆ............... ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+