ಜಮ್ಮುನಿಂದಅಮರನಾಥ ಯಾತ್ರೆ ಪುನಃ ಪ್ರಾರಂಭ

Amarnath yatra resumes from Jammu
ಜಮ್ಮು, ಜೂ.19: ಇಂದಿನಿಂದ ಅಮರನಾಥ ಯಾತ್ರೆ ಮತ್ತೆ ಪ್ರಾರಂಭವಾಗಿದೆ. ಪ್ರತಿಕೂಲ ಹವಾಮಾನದ ಕಾರಣ ಸಾವಿರಾರು ಯಾತ್ರಿಕರು ಬಲ್ತಾಲ್ ಬೇಸ್ ಕ್ಯಾಂಪ್ ಬಳಿ ಉಳಿದುಕೊಳ್ಳಬೇಕಾಯಿತು. ಇವರನ್ನು ಕಳುಹಿಸುವವರೆಗೂ ಹೊಸ ಯಾತ್ರಿಕರಿಗೆ ಅನುಮತಿ ನೀಡಿರಲಿಲ್ಲ.

ಯಾತ್ರೆಯನ್ನು ಅಮರನಾಥ ದೇವಾಲಯ ವಿಶ್ವ್ವಸ್ಥ ಮಂಡಳಿ ಸಹ ಮೂರು ದಿನಗಳ ಕಾಲ ನಿಲ್ಲಿಸಿತ್ತು. ಇಂದಿನಿಂದ ಯಾತ್ರೆ ಭಗವತಿ ನಗರದಿಂದ ಪುನಃ ಪ್ರಾರಂಭವಾಗಿದೆ. ಮೊದಲ ತಂಡದಲ್ಲಿ 1139 ಯಾತ್ರಿಕರು ಅಮರನಾಥ್ ದರ್ಶನಕ್ಕೆ ಹೊರಟರು. 619 ಮಹಿಳೆಯರು, 102 ಮಂದಿ ಮಕ್ಕಳು ಯಾತ್ರಿಗಳಲ್ಲಿ ಇದ್ದಾರೆ.

54 ವಾಹನಗಳು ಬೆಂಗಾವಲು ಪಡೆಯೊಂದಿಗೆ ಅಮರನಾಥ ಯಾತ್ರೆಗೆ ಯಾತ್ರಿಕರನ್ನು ಕರೆದೊಯ್ದವು. ಇಂದು ಸಂಜೆ ಅವರು ಬಲ್ತಾ ತಲುಪಿ ಯಾತ್ರೆಯನ್ನು ಮುಂದುವರಿಸಲಿದ್ದಾರೆ. ಪಹಲ್ ಗಾಂ ಮಾರ್ಗದಲ್ಲಿ ಇನ್ನೂ ಮಂಜು ಮುಸುಕಿದ ವಾತಾವರಣ ಇರುವ ಕಾರಣ ಆ ಮಾರ್ಗದಯಾತ್ರೆಗೆ ಅನುಮತಿ ನೀಡಿಲ್ಲ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+