ನಕ್ಸಲ್ ಯುವತಿ ವಿಜಯಬಾಯಿ ಪೊಲೀಸ್ ಕಸ್ಟಡಿಗೆ

ಮೂಲತಃ ಶಿವಮೊಗ್ಗ ತಾಲ್ಲೂಕಿನ ಬೆಳಲಕಟ್ಟೆ ಗ್ರಾಮದ ವಾಸಿಯಾಗಿರುವ ವಿಜಯಬಾಯಿ ನಕ್ಸಲ್ ನಾಯಕ ಮನೋಹರ್ ಸಂಪರ್ಕಕ್ಕೆ ಬಂದ ನಂತರದಲ್ಲಿ ನಕ್ಸಲ್ ತತ್ತ್ವಗಳಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದಳು. ನಂತರದಲ್ಲಿ ಮನೋಹರ್ ಜೊತೆಗಿನ ಒಡನಾಟ ಪ್ರೀತಿಗೆ ಬದಲಾಯಿತು. ಮನೋಹರ್ ಆರಂಭದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡು ಆ ನಂತರದಲ್ಲಿ ಶಿವಮೊಗ್ಗ ಜಿಲ್ಲಾ ಎಸ್ಪಿಯಾಗಿದ್ದ ಅರುಣ್ ಚಕ್ರವರ್ತಿಯವರ ಮಾರ್ಗದರ್ಶನದಲ್ಲಿ ನಕ್ಸಲ್ ಪ್ರಪಂಚದಿಂದ ಹೊರಕ್ಕೆ ಬಂದಿದ್ದ.
ಎಲ್ಲದನ್ನೂ ಕೈಬಿಟ್ಟಿದ್ದೇನೆ ಎಂದು ಹೇಳಿಕೊಂಡು ಶಿವಮೊಗ್ಗದ ಪತ್ರಿಕೆಯೊಂದರಲ್ಲಿ ಪತ್ರಕರ್ತನಾಗಿ ಸೇವೆ ಸಲ್ಲಿಸತೊಡಗಿದ್ದ. ಈ ಸಂದರ್ಭದಲ್ಲಿ ಪತ್ರಿಕೆಯ ಕೆಲಸಕ್ಕೆಂದು ಬಂದ ಬೆಳಲಕಟ್ಟೆ ಗ್ರಾಮದ ವಿಜಯಬಾಯಿ ಪತ್ರಕರ್ತ ಮನೋಹರ್ನ ಅಂಕಣಗಳಿಗೆ ಮನಸೋತು ನಕ್ಸಲ್ ವಾದದ ಕುರಿತು ಆಸಕ್ತಿ ತೋರಿದಳು. ಈ ಮಧ್ಯೆ ಮನೋಹರ್ ಇದ್ದಕ್ಕಿದ್ದ ಹಾಗೆ ಶಿವಮೊಗ್ಗದಿಂದ ತಲೆಮರೆಸಿಕೊಂಡಿದ್ದ. ಇದೇ ಸಂದರ್ಭದಲ್ಲಿ ವಿಜಯಬಾಯಿ ಸಹ ನಾಪತ್ತೆಯಾಗಿದ್ದಳು.
ಮನೋಹರ್ ಮತ್ತೆ ನಕ್ಸಲ್ ಸಂಪರ್ಕದಲ್ಲಿದ್ದಾನೆ ಎಂಬ ಮಾಹಿತಿಯನ್ನು ಕಲೆ ಹಾಕಿದ ಪೊಲೀಸರು ಮಾವಿನ ಹೊಲ ಎಂಬಲ್ಲಿ ಮನೋಹರ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಬದಲಿಗೆ ಮನೋಹರ್ ನಿಂದಲೂ ಗುಂಡಿನ ದಾಳಿ ಪೊಲೀಸರ ಮೇಲೆ ನಡೆಯಿತು. ಅಂತಿಮವಾಗಿ ಮನೋಹರ್ ಪೊಲೀಸರ ಎನ್ಕೌಂಟರ್ಗೆ ಬಲಿಯಾದ. ಈ ಎನ್ಕೌಂಟರ್ ಸಂದರ್ಭದಲ್ಲಿ ಮನೋಹರ್ ಜೊತೆಗೆ ಆತನ ಪ್ರೇಯಸಿ ವಿಜಯಬಾಯಿ ಸಹ ಇದ್ದಿದ್ದು, ಪೊಲೀಸರ ಮೇಲೆ ಗುಂಡು ಹಾರಿಸಿದ್ದನ್ನು ಪೊಲೀಸ್ ಇಲಾಖೆಯ ಮೂಲಗಳು ದೃಢಪಡಿಸಿದ್ದವು. ಮಾವಿನ ಹೊಲ ಎನ್ಕೌಂಟರ್ ನಂತರ ಈ ವಿಜಯಬಾಯಿಯನ್ನು ಕೊನೆಗೂ ಪೊಲೀಸರು ಬಂಧಿಸಲು ಯಶಸ್ವಿಯಾಗಿದ್ದಾರೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications