ಪ್ರವರ್ಗ 2ಬಿ ಗೊಂದಲ : ಕೆ ಸುಬ್ಬಯ್ಯ ಅಮಾನತು
ಬೆಂಗಳೂರು, ಜೂ.12 : ಸಾದರ ಲಿಂಗಾಯತ ಜನಾಂಗವನ್ನು ಪ್ರವರ್ಗ 2 ಬಿ ಸೇರಿಸಿ ಅನಾವಶ್ಯಕ ಗೊಂದಲಕ್ಕೆ ಕಾರಣರಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಕೆ ಸುಬ್ಬಯ್ಯ ಅವರನ್ನು ಅಮಾನತು ಮಾಡಲಾಗಿದೆ.
ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ವರ್ಗೀಕರಣ ಕುರಿತಂತೆ ಸಂಬಂಧಪಟ್ಟ ಸಂಸ್ಥೆಗೆ ಸರ್ಕಾರದ ತೀರ್ಮಾನದಂತೆ ಹಿಂಬರಹ ನೀಡದೆ ತಪ್ಪಾದ ಹಿಂಬರಹ ನೀಡುವ ಮೂಲಕ ಅನಾವಶ್ಯಕ ಗೊಂದಲ ಉಂಟು ಮಾಡಿರುವುದು ಹಾಗೂ ಸದರಿ ಹಿಂಬರಹ ನೀಡುವಾಗ ಹಿರಿಯ ಅಧಿಕಾರಿಗಳ ಅನುಮೋದನೆ ಪಡೆದಿರುವುದಿಲ್ಲ ಎಂಬ ಅಂಶವು ಸರ್ಕಾರದ ಗಮನಕ್ಕೆ ಬಂದಿರುವುದರಿಂದ ಇಲಾಖಾ ವಿಚಾರಣೆ ಕಾಯ್ದಿಟ್ಟು ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications