ಜುಲೈ 9 ರಿಂದ 15 ದಿನ ಅಧಿವೇಶನ, ಆಚಾರ್ಯ
ಬೆಂಗಳೂರು, ಜೂ. 12 : ಮಳೆಗಾಲದ ಅದಿವೇಶನವನ್ನು ಜುಲೈ 9 ರಿಂದ 24ರ ವರೆಗೆ ನಡೆಸಲು ತೀರ್ಮಾನಿಸಿ ರಾಜ್ಯ ಸಚಿವ ಸಂಪುಟ ಗುರುವಾರ ತೆಗೆದುಕೊಂಡಿದೆ. 15 ದಿನಗಳ ಕಾಲ ನಡೆಯುವ ಅಧಿವೇಶನನದಲ್ಲಿ 18 ಮಸೂದೆಗಳನ್ನು ಮಂಡಿಸಲಾಗುವುದು ಹಾಗೂ ಬಜೆಟ್ ಗೆ ಅನುಮೋದನೆ ಪಡೆಯಲಾಗುತ್ತದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಹೇಳಿದರು.
ಸಂಪುಟ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರ ಮಾತನಾಡುತ್ತಿದ್ದರು. 2009-10 ರ ಬಜೆಟ್ ನಲ್ಲಿ ತಿಳಿಸಿದಂತೆ ಸ್ಥಳೀಯ ಸಂಸ್ಥೆಗಳ ಮೂಲ ಅಭಿವೃದ್ಧಿಗೆ ಹಣ ನೀಡಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಒಂದು ತಿಂಗಳಲ್ಲಿ ಕ್ರಿಯಾ ಯೋಜನೆಗಳನ್ನು ತಯಾರಿಸಿ ಸರಕಾರದಿಂದ ಅನುಮೋದನೆ ಪಡೆಯಬೇಕು. ಮುಂದಿನ ಮೂರು ವರ್ಷಗಳಲ್ಲಿ ಸ್ಥಳೀಯ ಸಂಸ್ಥೆಗಳ ರಸ್ತೆ ಅಭಿವೃದ್ಧಿ, ಒಳಚರಂಡಿ ವ್ಯವಸ್ಥೆ ಸುಧಾರಣೆಯಾಗಬೇಕು ಎನ್ನುವುದು ಸರಕಾರದ ಚಿಂತನೆಯಾಗಿದೆ ಎಂದರು.
ಸಗರಸಭೆಗೆ ಎರಡು ವರ್ಷಗಳ ಕಾಲ ತಲಾ 15 ಕೋಟಿ ರುಪಾಯಿ, ಪುರಸಭೆಗೆ ತಲಾ ಐದು ಕೋಟಿ ರುಪಾಯಿ ಹಾಗೂ ಪಟ್ಟಣ ಪಂಚಾಯ್ತಿಗೆ ಎರಡು ಕೋಟಿ ರುಪಾಯಿ ನೀಡುತ್ತಿದ್ದೇವೆ. ಸಂಸದರು. ಶಾಸಕರು, ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಆಡಳಿತದಿಂದ ಮಾಹಿತಿ ಪಡೆದು ಆಯಾ ಜಿಲ್ಲೆಗ ಯೋಜನಾ ನಿರ್ದೇಶರ ಮೂಲಕ ಯೋಜನೆಯನ್ನು ಕಳುಹಿಸಬೇಕು. ಈ ಹಣವನ್ನು ಆಯೋಗವು ಸ್ಥಳೀಯ ಸಂಸ್ಥಗಳಿಗೆ ನೀಡುತ್ತಿರುವ ಅನುದಾನದ ಹೊರತಾಗಿ ಸರಕಾರ ನೀಡುತ್ತಿದೆ. ಒಟ್ಟು 1111 ಕೋಟಿ ರುಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications