ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲು ನಿಶ್ಚಿತ

ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಮುಖ್ಯಮಂತ್ರಿ ಸೇರಿದಂತೆ ಬಹುತೇಕ ಸಚಿವರಿಗೆ ಆಡಳಿತದಲ್ಲಿ ಹಿಡಿತವಿಲ್ಲ. ಆಡಳಿತ ಕುಸಿದಿದೆ. ಭ್ರಷ್ಟಾಚಾರ ಹೆಚ್ಚಳ. ಕುಂಠಿತ ಅಭಿವೃದ್ಧಿ ಕಾರ್ಯ ಮುಂತಾದವುಗಳಿಂದ ಬಿಜೆಪಿಗೆ ಮುಂದಿನ ಚುನಾವಣೆಯ ಹೊತ್ತಿಗೆ ಬಾರಿ ಪ್ರಮಾಣದ ಆಡಳಿತ ವಿರೋಧಿ ಅಲೆ ಉಂಟಾಗಲಿದೆ ಎಂದು ಸಿದ್ದು ಹೇಳಿದರು.
ಇದೆಲ್ಲಕ್ಕೆ ಪುಟವಿಟ್ಟಂತೆ ಈಗ ಅಸಮಾಧಾನ ಉಂಟಾಗಿದೆ. ಜನತಾ ದಳದಲ್ಲಿದ್ದ ಅನುಭದಿಂದ ಹೇಳುವುದಾದರೆ ಒಂದು ಬಾರಿ ಅಸಮಾಧಾನ ಆರಂಭವಾದರೆ ಅದು ಮುಕ್ತಾಯಗೊಳ್ಳುವುದು ಸರಕಾರ ಪತನದ ನಂತರವೇ. ನೀವೇನೇ ಕ್ರಮ ಕೈಗೊಂಡರೂ, ನಾಯಕತ್ವ ಬದಲಾವಣೆ ಮಾಡಿದರೂ ಅಸಮಾಧಾನ ಶಮನವಾಗುವುದೇ ಇಲ್ಲ. ಆದರೆ, ಈಗ ಬಿಜೆಪಿಯಲ್ಲಿ ಉಂಟಾಗಿರುವ ಅಸಮಾಧಾನದ ಲಾಭ ಪಡೆದು ಕಾಂಗ್ರೆಸ್ ಸರಕಾರ ಉರುಳಿಸುವ ಪ್ರಯತ್ನ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications