ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್ಸಿಪಿ ಕೈಬಿಟ್ಟ ಕಾಂಗ್ರೆಸ್, ಏಕಾಂಗಿ ಸ್ಪರ್ಧೆಗೆ ಚಿಂತನೆ

By Staff
|
Google Oneindia Kannada News

Vilas rao deshmukh
ಮುಂಬೈ, ಜೂ. 9 : ಕಾಂಗ್ರೆಸ್ ನಾಯಕ ಪವನರಾಜೇ ನಿಂಬಾಲ್ಕರ್ ಕೊಲೆಗೆ ಸಂಬಂಧಿಸಿದಂತೆ ಎನ್ ಸಿಪಿ ಸಂಸದ ಪದಮ್ ಸಿನ್ಹಾ ಪಾಟೀಲ್ ಅವರನ್ನು ಸಿಬಿಐ ಪೊಲೀಸರು ಬಂಧಿಸಿರುವುದು ಮಹಾರಾಷ್ಟ್ರ ರಾಜಕಾರಣದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್-ಎನ್ ಸಿಪಿ ನೇತೃತ್ವದ ಸರಕಾರದ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಮುಗಿಬಿದ್ದಿದ್ದು, ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಎನ್ ಸಿಪಿ ಮೇಲೆ ಬಾಂಬ್ ಎಸೆದಿರುವ ಕಾಂಗ್ರೆಸ್ ನಾಯಕರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಎನ್ ಸಿಪಿ ಮೈತ್ರಿ ಇಲ್ಲ ಎನ್ನುವ ಹೇಳಿಕೆ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಸಚಿವ ವಿಲಾಸ್ ರಾವ್ ದೇಶಮುಖ್, ಕಾಂಗ್ರೆಸ್ ನಾಯಕ ಪವನರಾಜೇ ನಿಂಬಾಲ್ಕರ್ ಅವರ ಕೊಲೆ ಪ್ರಕರಣದಲ್ಲಿ ಎನ್ ಸಿಪಿ ಸಂಸದ ಪದಮ್ ಸಿನ್ಹಾ ಪಾಟೀಲ್ ಬಂಧನಕ್ಕೊಳಗಾಗಿರುವುದು ದುರದೃಷ್ಟಕರ. ಈ ಪ್ರಕರಣ ಸರಕಾರದ ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರಿದೆ. ಇದು ಮುಂಬರುವ ಚುನಾವಣೆಗಳ ಮೇಲೂ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳು ಇರುವುದರಿಂದ ಎನ್ ಸಿಪಿ ಮೈತ್ರಿಯನ್ನು ಕಡಿದುಕೊಳ್ಳುವ ಚಿಂತನೆ ನಡೆಸಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಅಖಾಡಕ್ಕೆ ಇಳಿಯಲಿದೆ ಎಂದು ಹೇಳಿದರು.

ಅತ್ತ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಸರಕಾರದ ವಿರುದ್ದ ಪ್ರತಿಭಟನೆ ಮುಂದುವರೆಸಿದ್ದು, ಗೃಹ ಸಚಿವರ ರಾಜಿನಾಮೆಗೆ ಆಗ್ರಹಿಸುತ್ತಿವೆ. ಆದರೆ, ಎನ್ ಸಿಪಿ ನಾಯಕ ಶರದ್ ಪವಾರ್ ಮಾತ್ರ ಬಂಧನಕ್ಕೊಳಗಾಗಿರುವ ಪದಮ್ ಸಿನ್ಹಾ ಪಾಟೀಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲು ಸುತರಾಂ ಒಪ್ಪುತ್ತಿಲ್ಲ. ಅದು ಕಾನೂನು ವಿಚಾರವಾಗಿದ್ದರಿಂದ ಅದರಲ್ಲಿ ನಾವು ತೆಲೆ ಹಾಕುವುದಿಲ್ಲ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಮಾತ್ರ ಮುಂದಾಲೋಚನೆ ಮಾಡಿ ಎನ್ ಸಿಪಿಯೊಂದಿಗಿನ ಮೈತ್ರಿ ಕಡಿದುಕೊಳ್ಳಲು ಸಿದ್ಧತೆ ನಡೆಸಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X