ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಿ ಹಲಸು ಮೇಳಕ್ಕೆ ರೈತರ ನೀರಸ ಪ್ರತಿಕ್ರಿಯೆ

By * ವರದಿ : ಬಿದರೆ ಪ್ರಕಾಶ್, ಗುಬ್ಬಿ
|
Google Oneindia Kannada News

Jack fruit Mela in Gubbi
ಗುಬ್ಬಿ, ಜೂ. 9 : ಹಲಸಿನ ಹಣ್ಣು ಹಣ್ಣಾಗಿ ಬಳಕೆಯಾಗುವುದರ ಜತೆಗೆ ಆಹಾರವಾಗಿಯೂ ಬಳಕೆಯಾಗಬೇಕು ಎಂದು ಸಾವಯುವ ಕೃಷಿ ತಜ್ಞ ಎ.ಪಿ ಚಂದ್ರಶೇಕರ್ ತಿಳಿಸಿದರು. ತಾಲೂಕಿನ ನಿಟ್ಟೂರು ಶ್ರೀ ವಿನಾಯಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತೋಟಗಾರಿಕಾ ಇಲಾಖೆ, ತಿಪಟೂರಿನ ಬೈಫ್ ಗ್ರಾಮೀಣಾಭಿವೃದ್ದಿ ಸಂಸ್ಥೆ, ಹಾಗೂ ತಾಲೂಕಿನ ಹಲಸು ಬೆಳೆಗಾರರ ಸಹಯೋಗದಲ್ಲಿ ನಡೆದ ಹಲಸು ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ತೆಂಗು ಆಡಿಕೆಗಳಂತೆ ಪರಿಸರದ ನೀರನ್ನು ಖಾಲಿ ಮಾಡದೆ ಯಾವುದೇ ಆರೈಕೆಯಿಲ್ಲದೆ, ಗೊಬ್ಬರವಿಲ್ಲದೆ ಬೆಳೆಯುವ ಹಲಸು ರೈತನ ನಿಜವಾದ ಕಲ್ಪವೃಕ್ಷ, ಹಲಸಿನಿಂದ ತಯಾರಿಸಿದ ಪ್ರತಿಯೊಂದು ಪದಾರ್ಥವೂ ಮಾನವನ ಉಪಯೋಗಕ್ಕೆ ಬರುತದೆ, ಸೊಪ್ಪು ದನಗಳಿಗೆ ಹಾಗೂ ಮೇಕೆಗೆ ಆಹಾರವಾಗಿ ಬಳಕೆಯಾಗುತದೆ, ಇನ್ನು ಹಲಸಿನಿಂಧ ತಯಾರಾಗುವ ಹಪ್ಪಳ, ಸಂಡಿಗೆ, ಬೀಜದಿಂದ ಮಾಡುವ ತಿನಿಸುಗಳು ಆರೋಗ್ಯಕ್ಕೂ ಪೂರಕ, ರಾಸಾಯಿನಿಕ ರಹಿತವಾದ ಹಲಸು ಎಲ್ಲರಿಗೂ ಆರೋಗ್ಯಕರವಾದ ಹಣ್ಣಾದರೆ, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತರುವ ಇದು ರೈತನಿಗೆ ವರ ಎಂದರು.

ನೇರ ಮಾರಾಟ : ಹಲಸು ಬೆಳೆದ ರೈತನು ಇಂದು ಮಧ್ಯವರ್ತಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದಾನೆ, ಕೊಬರಿ ಅಡಿಕೆಗೆ ಇದ್ದಹಾಗೆ ತೆಂಗಿಗೂ ಪ್ರತ್ಯೇಕವಾದ ಮಾರುಕಟ್ಟೆ ಸೌಲಭ್ಯವನ್ನು ಸರಕಾರ ಕಲ್ಪಿಸಬೇಕು, ಇದರಿಂದ ರೈತನು ತಾನು ಬೆಳೆದ ಹಲಸನ್ನು ನೇರವಾಗಿ ಮಾರಾಟ ಮಾಡಲು ಸಾಧ್ಯವಾಗುತ್ತದೆ ಹಾಗೆಯೇ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಹಲಸಿನ ಉತ್ಪನ್ನಗಳನ್ನು ತಯಾರಿಸುವುದಕ್ಕೆ ಆದ್ಯತೆ ಕೊಡಬೇಕು, ಸರಕಾರ ಸಾಲುಮರಗಳಲ್ಲಿ ಹಲಸಿನ ಮರಗಳನ್ನು ಬೆಳೆಸುವ ಯೋಜನೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಮೇಳವನ್ನು ಉದ್ಘಾಟಿಸಿ ಮತಾನಾಡಿದ ಜಿಲ್ಲಾ ತೋಟಗಾರಿಕಾ ನಿರ್ದೇಶಕ ದೇವರಾಜಪ್ಪ ಮಿಶ್ರ ಬೆಳೆಯಾಗಿ ಹಲಸನ್ನು ಬೆಳೆಸದೆ ಪ್ರತ್ಯೇಕವಾಗಿ ಹಲಸು ಬೆಳೆಯುವ ರೈತರಿಗೆ ಸರಕಾರದ ಸಹಾಯಧನವಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಆಯೋಜಕ ಸಾವಯುವ ಕೃಷಿಕ ಡಾ.ಜಿ.ಎಂ.ಪರಮಶಿವಯ್ಯ ಮಾತನಾಡಿ ಆರೋಗ್ಯಕರವಾದ ಹಲಸ್ನು ಬೆಳೆಯಲು ರೈತರಿಗೆ ಉತ್ತೇಜನ ಹಾಗೂ ಆರೋಗ್ಯಕರವಾದ ಹಲಸನ್ನು ಸೇವಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಹಲಸಿನ ಮೇಳವನನು ಹಮ್ಮಿಕೊಳ್ಳಲಾಗಿದೆ. ಸರಕಾರ ಹಲಸು ಬೆಳೆಯ ಮಾರಾಟಕ್ಕೆ ಪ್ರತ್ಯೇಕವಾದ ಸೌಲಭ್ಯಗಳನ್ನು ರೈತನಿಗೆ ಕಲ್ಪಿಸುವತ್ತ ಗಮನಹರಿಸಬೇಕು ಎಂದರು.

ಸಾವಯುವ ಕೃಷಿಕ ಗುರುಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದ ಮೇಳದಲ್ಲಿ ಬೈಫ್ ಸಂಸ್ಥೆಯ ನಿರ್ದೇಶಕ ವೈ.ಎ.ಠಾಕೂರ್, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೃಷಿ ವಿಶ್ವವಿದ್ಯಾಲಯದ ಸದಾಶಿವಪ್ಪ, ಶ್ಯಾಮಲಮ್ಮ ಪ್ರಾಂಶುಪಾಲ ನಾಗರಾಜು, ಮುಂತಾದವರು ಭಾಗವಹಿಸಿದ್ದರು. ಕಿಡಿನೇತ್ರ ಸ್ವಾಗತಿಸಿದರು. ಬೈಫ್ ಸಂಸ್ಥೆಯ ಆನಂದಕುಮಾರ್ ವಂದಿಸಿದರು. ಎಂ.ಎನ್.ಕುಲಕರ್ಣಿ ನಿರೂಪಿಸಿದರು.

ದುಬಾರಿ : ಕಳೆದ ವಾರ ತಿಪಟೂರಿನ ಬಿಳಿಗೆರೆಯಲ್ಲಿ ನಡೆದ ಎಳನೀರು ಮೇಳದಲ್ಲಿ ಇದೇ ಸಂಘಟನೆ ರೈತರ ನೆರವಿನಿಂದ ಕೇವಲ 5 ರೂಗೆ ಒಂದು ಎಳನೀರಿನಂತೆ ಮಾರಾಟದ ವ್ಯವಸ್ಥೆ ಮಾಡಿತ್ತು. ಆದರೆ ನಿಟ್ಟೂರನಲ್ಲಿ ನಡೆದ ಹಲಸಿನ ಮೇಳದಲ್ಲಿ ಬೆಂಗಳೂರಿಗಿಂತಲೂ ದುಬಾರಿ ದರದಲ್ಲಿ ಅಂದರೆ ಒಂದು ಹಲಸಿನ ತೊಳೆಗೆ 5 ರೂನಂತೆ ಮಾರಾಟ ಮಾಡಿದ್ದು ಮೇಳಕ್ಕೆ ಬಂದಿದ್ದ ಸಾರ್ವಜನಿಕರಿಗೆ ಬೇಸರ ತರಿಸಿತು. ಇದರ ಜತೆಗೆ ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿದ ಆಯೋಜಕರು ಸ್ಥಳೀಯರನ್ನೇ ವಿಶ್ವಾಸ ತೆಗೆದುಕೊಳ್ಳದೆ ಮಾಡಿದ ಈ ಮೇಳದಲ್ಲಿ ನಿರೀಕ್ಷೆಯಷ್ಟು ರೈತರು ಭಾಗವಹಿಸಲೇ ಇಲ್ಲ. ಪ್ರತಿವಾರ ತಾಲೂಕಿನ ಚೇಳೂರಿನಲ್ಲಿ ನಡೆಯುವ ಸಂತೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹಲಸಿನ ಹಣ್ಣು ಮಾರಾಟಕ್ಕೆ ಬಂದರೆ ಈ ಮೇಳದಲ್ಲಿ ಬಂದಿದ್ದು 300ರಿಂದ 400 ಹಲಸಿನಹಣ್ಣು ಮಾತ್ರ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X