ಲೋಕಾಯುಕ್ತರ ವಿರುದ್ಧದ ಕೇಸ್ ವಾಪಸ್ಸು

ಕಳೆದ ಮೇ 31 ರಂದು ಮಳೆಯಲ್ಲಿ ಕೊಚ್ಚಿ ಹೋದ ಅಭಿಷೇಕ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವೈಯಕ್ತಿಕ ಆಪಾದನೆ ಮಾಡಿದ್ದಾರೆ ಎಂದು ಆರೋಪಿಸಿ ಬಿಬಿಎಂಪಿ ಆಯುಕ್ತ ಡಾ.ಎಸ್. ಸುಬ್ರಹ್ಮಣ್ಯ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಲಿಂಗರಾಜಪುರ ಬಳಿಯ ಮಳೆ ನೀರಿನ ದೊಡ್ಡ ಮೋರಿಯಲ್ಲಿ ಮೇ.31 ರಂದು ಕೊಚ್ಚಿಹೋದ ಬಾಲಕ ಅಭಿಷೇಕ್‌ನ ಮನೆಗೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಇತ್ತೀಚೆಗೆ ತೆರಳಿ ಸಾಂತ್ವನ ಹೇಳಿದ್ದರು.
ಬಿಬಿಎಂಪಿ ಕಾರ್ಯ ವೈಖರಿಗೆ ಲೋಕಾಯುಕ್ತರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ, ಲೋಕಾಯುಕ್ತರು ಇಡೀ ವ್ಯವಸ್ಥೆಯೊಂದನ್ನೇ ತರಾಟೆಗೆ ತೆಗೆದುಕೊಂಡಿಲ್ಲ. ತಮ್ಮ ವಿರುದ್ಧ ದೋಷಾರೋಪಣೆ ಮಾಡಿ ನೋವುಂಟು ಮಾಡಿದ್ದಾರೆ ಎಂದು ಬಿಬಿಎಂಪಿ ಆಯುಕ್ತರು 5 ನೇ ಎಸಿಎಂಎಂ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಿಸಿದ್ದರು.
ಲೋಕಾಯುಕ್ತರು, ಡಾ. ಸುಬ್ರಹ್ಮಣ್ಯ ಈ ಪ್ರಕರಣ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಅವರಿಗೆ ಮಾನವೀಯತೆ ಇಲ್ಲ' ಎಂದಿದ್ದಾರೆ. ಇದು ಯಾವುದೇ ವ್ಯಕ್ತಿಯ ವರ್ಚಸ್ಸು ಕುಗ್ಗಿಸುವ ಮಾತಾಗಿದೆ. ಹೀಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತರ ಪರ ವಕೀಲರು ತಿಳಿಸಿದ್ದಾರೆ. ಮನಸ್ಸಿಗೆ ನೋವಾಗಿದೆ ಈ ಬಗ್ಗೆ ಡಾ. ಸುಬ್ರಹ್ಮಣ್ಯ ಅವರ ಗಮನ ಸೆಳೆದಾಗ, ಲೋಕಾಯುಕ್ತರ ದೋಷಾರೋಪದಿಂದ ಮನಸ್ಸಿಗೆ ಬಹಳ ಬೇಸರವಾಗಿದೆ ಎಂದಿದ್ದರು.
ಮೋರಿಯಲ್ಲಿ ಬಿದ್ದು ಅಭಿಷೇಕ್ ಪ್ರಾಣ ಹೋಗಿದ್ದಕ್ಕೆ ನನಗೂ ತೀವ್ರ ದುಃಖವಾಗಿದೆ. ಆತನ ಪತ್ತೆಗೆ ಅಂದು ರಾತ್ರಿಯಿಂದಲೇ ತೀವ್ರ ಯತ್ನ ನಡೆಸಲಾಗಿದೆ. ಆದರೆ, ನನ್ನೊಬ್ಬನನ್ನೇ ಹೊಣೆಯಾಗಿಸಿ ದೂಷಿಸಿದ್ದು ಸರಿ ಕಾಣಲಿಲ್ಲ' ಎಂದು ಪ್ರತಿಕ್ರಿಯಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications