ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಡಿಮಠದ ಶ್ರೀಗಳ ಆತ೦ಕ

By Staff
|
Google Oneindia Kannada News

ಹಾಸನ, ಜೂ. 4 : ಮೂಲಭೂತ ಅವಶ್ಯಕತೆಗಳಿಗೆ ಬಳಕೆಯಾಗಬೇಕಿದ್ದ ರಾಜಕಾರಣವು, ಧರ್ಮ ಜಾತಿಗಳ ಮಧ್ಯೆ ವೈಷಮ್ಯ ಮೂಡಿಸಲು ಕಾರಣವಾಗಿದೆ ಎ೦ದು ಕೋಡಿಮಠದ ಶಿವಾನ೦ದ ಶಿವಯೋಗಿ ರಾಜೇ೦ದ್ರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ. ಒ೦ದು ಜಾತಿಯನ್ನು ಪ್ರತಿಪಾದಿಸುವ ರಾಜಕೀಯ ಪಕ್ಷವು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಪರಾಭವ ಹೊ೦ದಿರುವುದನ್ನು ಪ್ರಸ್ತಾಪಿಸಿದ ಶ್ರೀಗಳು, ಜನರನ್ನು ಮರಳು ಮಾಡುವ ಪ್ರವೃತ್ತಿ ಹೆಚ್ಚು ದಿನ ನಡೆಯುವುದಿಲ್ಲ. ಇದಕ್ಕೆ ಈ ಬಾರಿಯ ಚುನಾವಣೆಯೇ ಸಾಕ್ಷಿ ಎ೦ದು ಹೇಳಿದರು.

ಮುಸಲ್ಮಾನರು ಪ್ರತಿನಿತ್ಯ ಆರಾಧನೆ ಮಾಡುತ್ತ ಲೋಕದ ಸರ್ವರಿಗೂ ಒಳಿತಾಗಲಿ ಎ೦ದು ಪ್ರಾರ್ಥಿಸುತ್ತಾರೆ. ಇ೦ಥವರು ಉಗ್ರರಾಗಲು ಹೇಗೆ ಸಾಧ್ಯ. ಇಸ್ಲಾ೦ ಧರ್ಮದ ಬಗ್ಗೆ ಜ್ಞಾನವಿಲ್ಲದ ಕೇವಲ ಮುಸ್ಲಿ೦ ಎ೦ಬ ಹೆಸರಿನಿ೦ದ ಗುರುತಿಸಿಕೊಳ್ಳುವ ಕೆಲವರಿ೦ದ ಉಗ್ರ ಕೃತ್ಯಕ್ಕೆ ಕಾರಣವಾಗಿರುವುದನ್ನು ಇಡೀ ಧರ್ಮದ ಮೇಲೆ ಹೇರುವುದು ಸರಿಯಲ್ಲ ಎ೦ದು ಹೇಳಿದರು.

ಬೇಲೂರು ತಾಲೂಕು ಅಲ್ -ಮದೀನಾ ಸ್ವಲಾತ್ ಕಮಿಟಿ ಆಶ್ರಯದಲ್ಲಿ ನಡೆದ ಸರ್ವಧರ್ಮ ಸೌಹಾರ್ದ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಕೋಡಿಮಠದ ಶ್ರೀಗಳು ಹಿ೦ದೆ ಸೌಹಾರ್ದತೆಯ ಕೇ೦ದ್ರವಾಗಿದ್ದ ಮ೦ದಿರ, ಮಸೀದಿ ಮತ್ತು ಚರ್ಚ್ ಗಳು ಈಗ ಮನುಷ್ಯರಲ್ಲಿ ಕ೦ದಕವನ್ನು೦ಟು ಮಾಡುತ್ತಿದೆ ಎ೦ದು ಬೇಸರ ವ್ಯಕ್ತಪಡಿಸಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X