ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2010ಕ್ಕೆ ರಾಹುಲ್ ಗಾಂಧಿ ಪ್ರಧಾನಮಂತ್ರಿ !

By Staff
|
Google Oneindia Kannada News

Rahul gandhi
ಬೆಂಗಳೂರು, ಮೇ. 26 : 2009ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರ ಗದ್ದುಗೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಯುವನಾಯಕ ರಾಹುಲ್ ಗಾಂಧಿ ಅವರು 2010ರ ವೇಳೆಗೆ ಬಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಿರೋಧ ಪಕ್ಷ ಬಿಜೆಪಿಯ ಸಖ್ಯ ಬೆಳೆಸಿ ಅಧಿಕಾರ ಗದ್ದುಗೆ ಏರುವ ಎಲ್ಲ ಲಕ್ಷಣಗಳೂ ಇವೆ ಜ್ಯೋತಿಷಿ ಯಂ ರತ್ನರಾಜ್ ಜೈನ್ ತಿಳಿಸಿದ್ದಾರೆ.

ತಾತ್ಕಲಿಕವಾಗಿ ಮನಮೋಹನ್ ಪ್ರಧಾನಿಯಾದರೂ 22 ಜುಲೈ 09ರ ಸೂರ್ಯಗ್ರಹಣ ಇವರ ಕರ್ಕ ರಾಶಿಯಲ್ಲಿ ಆಗಿದ್ದು, ಆರೋಗ್ಯ ಕೆಡುವ ಸಂಭವವಿದೆ. ಹಾಗಾಗಿ 2010ರ ವೇಳೆಗೆ ರಾಹುಲ್ ಗಾಂಧಿ ಪ್ರಧಾನಿಯಾಬಹುದು. ಸೌಮ್ಯವಾದಯಾದ, ತಂದೆಯ ಗುಣವನ್ನೇ ಹೋಲುವ ರಾಹುಲ್ ಗಾಂಧಿ ಎಲ್ಲ ಪಕ್ಷಗಳ ಸ್ನೇಹ ಬಯಸತಕ್ಕವರು. ಹೀಗಾಗಿ ಪ್ರಧಾನಿ ಪಟ್ಟ ಇವರಿಗೆ ಒಲಿದು ಬರುವುದರಲ್ಲಿ ಅಚ್ಚರಿಯಿಲ್ಲ.

ರಾಹುಲ್ 19.06,1970 ರಂದು ಬೆಳಗ್ಗೆ 5.50ಕ್ಕೆ ದಿಲ್ಲಿಯಲ್ಲಿ ಜನಿಸಿದರು. ಇವರ ಜನನ ಕುಂಡಲಿ ಪ್ರಕಾರ ನೀಚಭಂಗಯೋಗ ಮತ್ತು ಚಂದ್ರಾಧಿಯೋಗಗಳಿವೆ. ನೀಚಭಂಗಯೋಗದ ಫಲದಂತೆ ರಾಜಕೀಯ ರಂಗದಲ್ಲಿ ಹಂತಹಂತವಾಗಿ ಪ್ರಭಾವಿತರಾಗುವರು. ಚಂದ್ರಾಧಿಯೋಗದ ಫಲದಂತೆ 35ರ ನಂತರ ಉನ್ನತ ಸ್ಥಾನ ಅಲಂಕರಿಸುವವರು.

ಚುನಾವಣೆ ವೇಳೆ ಗುರುವು ನೀಚನಾಗಿದ್ದು, ಗುರುಬಲವಿಲ್ಲದಿದ್ದರೂ ನೀಚಭಂಗಯೋಗದ ಕಾರಣದಿಂದ ದೇಶದ ಉನ್ನತ ಅಧಿಕಾರ ಪಡೆಯುವ ಯೋಗವಿದೆ. ಲಗ್ನದಿಂದ ಲಗ್ನದಲ್ಲಿ ಲಾಭದಲ್ಲಿ ಶನಿ ನೀಚನಾಗಿದ್ದರೂ ಲಗ್ನದಲ್ಲಿ ರಾಜಕೀಯ ವಿರೋಧಿಗಳ ಸ್ನೇಹ ಬೆಳೆಸಿ ಅಧಿಕಾರ ಗದ್ದುಗೆ ಏರುವ ಸಾಧ್ಯತೆ ಇದೆ. ಇವರ ಮತ್ತು ಬಿಜೆಪಿ ಪಕ್ಷದ ಸ್ನೇಹ ವೃಶ್ಚಿಕವಾಗಿದ್ದು, ಮುಂದಿನ ದಿನಗಳಲ್ಲಿ ಭಾರತೀಯ ಜನತಾ ಪಕ್ಷದ ಸ್ನೇಹ ಬೆಳೆಸಿದರೂ ಆಶ್ಚರ್ಯವಿಲ್ಲ.

(ಸ್ನೇಹ ಸೇತು - ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X