ಕಾಂಗ್ರೆಸ್ ಸೋತಿದ್ದು ಏಕೆ ? ಸೋನಿಯಾ

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಪಿಸಿಸಿ ಅಧ್ಯಕ್ಷೆ ಆರ್ ವಿ ದೇಶಪಾಂಡೆ ಅವರನ್ನು ಶನಿವಾರ ನೇರವಾಗಿ ಕೇಳಿದ ಪ್ರಶ್ನಿಯಿದೆ. ಬಿಜೆಪಿಯ ಹಣ ಬಲವನ್ನು ಸರಿಗಟ್ಟಲು ಸಾಧ್ಯವಾಗಲಿಲ್ಲ ಎಂದು ವಿವರಿಸಿರುವುದಾಗಿ ದೇಶಪಾಂಡೆ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು. ಕಲೆದ ಹತ್ತಾರು ವರ್ಷಗಳಿಂದ ಪ್ರದೇಶ ಕಾಂಗ್ರೆಸ್ ಸಮಿತಿಯನ್ನು ಪುನರ್ ರಚಿಸಿಲಿಲ್ಲ. ಪುನರ್ ಸಂಘಟನೆಗೆ ಕೈಹಾಕಬೇಕು ಎಂಬ ಅಂಶವನ್ನು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಜಾತ್ಯಾತೀತ ದಳದ ಜೊತೆ ಮೈತ್ರಿ ಮಾಡಿಕೊಳ್ಳುವುದು ಕಾಂಗ್ರೆಸ್ಸಿಗ ಅನಿವಾರ್ಯ ಅಲ್ಲ ಎಂದು ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆಗಿರುವ ಅನ್ಯಾಯ ಸರಿಪಡಿಸಲು ಇನ್ನೂ ಕಾಲಾವಕಾಶ ಇದೆ ಎಂಬ ಅರ್ಥದ ಮಾತುಗಳನ್ನು ಮೊಯ್ಲಿ ಆಡಿದ್ದಾರೆ. ಶನಿವಾರ ದೆಹಲಿಯ ಕರ್ನಾಟಕ ಭವನದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮೊಯ್ಲಿ ಈ ಮಾತುಗಳನ್ನಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications