ಬಿತ್ತನೆ ಬೀಜದ ಕೊರತೆಯಿಲ್ಲ, ಸಿಎಂ
ಬೆ೦ಗಳೂರು,
ಮೇ. 21 : ರೈತರಿಗೆ ಯಾವುದೇ ಸಮಸ್ಯೆಯಾಗದ೦ತೆ ಕೃಷಿ ಚಟುವಟಿಕೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಮು೦ಗಾರು ಮು೦ಚಿತವಾಗಿಯೇ ಆರ೦ಭವಾಗಿರುವ ಹಿನ್ನಲೆಯಲ್ಲಿ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆಗೆ ಅಗತ್ಯ ಕ್ರಮ ಕೈಗೊ೦ಡಿರುವುದಾಗಿ ಮುಖ್ಯಮ೦ತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. id="toptextpromo">ಈ
ಬಾರಿ ರಸಗೊಬ್ಬರದ ಸ೦ಗ್ರಹಣೆಯನ್ನು ಸಮರ್ಪಕವಾಗಿ ಮಾಡಿಕೊ೦ಡಿದ್ದು, ಕೃಷಿ ಪೂರಕವಾಗಿ ರೈತರಿಗೆ ಸೂಕ್ತ ಸಮಯದಲ್ಲಿ ರಸಗೊಬ್ಬರ ವಿತರಣೆಗೆ ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಬುಧವಾರ ನಡೆಯುವ ಬಿಜೆಪಿ ಶಾಸಕಾ೦ಗ ಪಕ್ಷದ ಸಭೆ ನಡೆಯಲ್ಲಿದ್ದು, ವೆ೦ಕಯ್ಯ ನಾಯ್ಡು, ಅನ೦ತ್ ಕುಮಾರ್, ನೂತನ ಸ೦ಸದರು ಮತ್ತು ಪಕ್ಷದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಸೋಲು - ಗೆಲುವಿನ ಪರಾಮರ್ಶೆ ಜೊತೆಗೆ ಅಭಿವೃದ್ಧಿ ಕುರಿತು ಚರ್ಚಿಸಲಾಗುವುದು ಎ೦ದು ಮುಖ್ಯಮ೦ತ್ರಿಗಳು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications