ಎಚ್ಡಿಕೆ ಕೇಂದ್ರ ಮಂತ್ರಿಯಾಗುವುದು ಅನುಮಾನ

Kumaraswamy
ಬೆಂಗಳೂರು, ಮೇ. 19 : ಯುಪಿಎ ಸೇರಲು ಕಾಂಗ್ರೆಸ್ ಕಡೆಯಿಂದ ಬುಲಾವ್ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳುತ್ತಿದ್ದಾರೆ. ಆದರೆ, ಆ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ನಿರ್ಧಾರ ಜೆಡಿಎಸ್ ಪರವಿಲ್ಲ ಎಂಬ ಸುದ್ದಿಯೊಂದು ನವದೆಹಲಿಯಿಂದ ಬಂದಿದೆ. ಭಾನುವಾರದಿಂದ ದಿಲ್ಲಿಯಲ್ಲಿ ಠಿಕಾಣಿ ಹೂಡಿರುವ ಕುಮಾರಸ್ವಾಮಿ, ಕಾಂಗ್ರೆಸ್ ಪಕ್ಷದ ಕರ್ನಾಟಕ ಉಸ್ತುವಾರಿ ಗುಲಾಮ್ ನಬಿ ಅಜಾದ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಕೇಂದ್ರದ ಮಂತ್ರಿಗಿರಿ ಕುಮಾರಸ್ವಾಮಿ ಅವರಿಂದ ಕೈತಪ್ಪು ಸಾಧ್ಯತೆಯೇ ಹೆಚ್ಚಾಗಿದೆ. ಯುಪಿಎಗೆ 11 ಸ್ಥಾನ ಬೇಕಿದೆ. ಸಚಿವ ಸ್ಥಾನದ ಮೇಲೆ ಆಸಕ್ತಿ ಇಲ್ಲದ ಸಾಕಷ್ಟು ಜನ ಯುಪಿಎಗೆ ಬೆಂಬಲ ನೀಡಲು ಮುಂದೆ ಬಂದಿವೆ. ಜೆಡಿಎಸ್ ಗೆ ಒಂದು ಕ್ಯಾಬಿನೆಟ್ ಸ್ಥಾನ ಕೊಟ್ಟ 3 ಸಂಸದರ ಬೆಂಬಲ ಪಡೆಯುವ ಅಗತ್ಯ ಕಾಂಗ್ರೆಸ್ ಪಕ್ಷಕ್ಕಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಕೇವಲ 6 ಸ್ಥಾನಗಳನ್ನು ಗಳಿಸಿದರೂ ಎಲ್ಲರೂ ಕೂಡಾ ಹಿರಿಯ ಮುಖಂಡರೆ ಆಗಿದ್ದಾರೆ. ಹೀಗಾಗಿ ಎರಡು ಕ್ಯಾಬಿನೆಟ್, ಒಂದು ರಾಜ್ಯಸಚಿವ ಸ್ಥಾನ ಸಿಗಬಹುದು. ಸದ್ಯ ರಾಜ್ಯಕ್ಕೆ ಎರಡು ಕ್ಯಾಬಿನೆಟ್ ಗಿಂತ ಹೆಚ್ಚು ದೊರೆಯುವ ಅವಕಾಶವಿಲ್ಲ.

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು 5 ಉಪಚುನಾವಣೆಗಳನ್ನು ಬಿಟ್ಟರೆ 4-5 ವರ್ಷ ದೊಡ್ಡ ಚುನಾವಣೆಗಳಿಲ್ಲ. ಹೀಗಾಗಿ ಕುಮಾರಸ್ವಾಮಿಗೆ ಸಚಿವ ಸ್ಥಾನ ನೀಡಿದರೆ ಅಷ್ಟು ವರ್ಷದ ನಂತರ ಫಲ ನೀಡಿತೇ ? ಪಕ್ಷ ಬಲಪಡಿಸಲು ಕಾಂಗ್ರೆಸ್ ಸಂಸದರಿಗೆ ಸಚಿವ ಸ್ಥಾನ ನೀಡಬೇಕೆ ಹೊರತು ಜೆಡಿಎಸ್ ಗೆ ಅಲ್ಲ ಎಂದು ಕಾಂಗ್ರೆಸ್ ನಾಯಕರು ಯೋಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಸಿದ್ದರಾಮಯ್ಯ ಕೂಡಾ ಕುಮಾರಸ್ವಾಮಿ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ತೀವ್ರ ವಿರೋಧಿ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ದೇವೇಗೌಡರ ತಂತ್ರಗಾರಿಕೆ ಕೈಕೊಡುವ ಸಾಧ್ಯತೆ ಇದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+