ದಿಲ್ಲಿ ಏಳು ಕ್ಷೇತ್ರಗಳು ಕೈ ಪಾಲು
ದೆಹಲಿ, ಮೇ. 16 : ರಾಜಧಾನಿ ದೆಹಲಿಯ 7 ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸುವ ಮೂಲಕ ಮತ್ತೆ ತನ್ನ ಪಾರುಪತ್ಯೆವನ್ನು ಮೆರೆದಿದ್ದು, ಈ ಫಲಿತಾಂಶದಿಂದ ಬಿಜೆಪಿಗೆ ಭಾರಿ ಮುಖಭಂಗ ಎನ್ನಲಾಗಿದೆ.
ಚಾಂದನಿಚೌಕ್ ನಲ್ಲಿ ಕಪಿಲ್ ಸಿಬಲ್, ಪೂರ್ವ ದಿಲ್ಲಿಯಲ್ಲಿ ಸಂದೀಪ್ ದೀಕ್ಷಿತ್, ಪಶ್ಚಿಮ ದಿಲ್ಲಿಯಲ್ಲಿ ಮಹಾಬಲ ಮಿಶ್ರಾ, ಈಶಾನ್ಯ ದಿಲ್ಲಿಯಲ್ಲಿ ಜೆ ಪಿ ಅಗರ್ ವಾಲ್, ಉತ್ತರ ದಿಲ್ಲಿಯಲ್ಲಿ ರಮೇಶ ಕುಮಾರ್, ವಾಯುವ್ಯ ದಿಲ್ಲಿಯಲ್ಲಿ ಕೃಷ್ಣ ತೀರ್ಥ ಗೆಲುವು ಸಾಧಿಸಿದ್ದಾರೆ. ಈ ಎಲ್ಲ ಅಭ್ಯರ್ಥಿಗಳು 10 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಪ್ರಜ್ಞಾವಂತರ ಮತಕ್ಷೇತ್ರ ಎಂದೇ ಖ್ಯಾತವಾಗಿರುವ ದಿಲ್ಲಿಯಲ್ಲಿ ಬಿಜೆಪಿ ಪಕ್ಷ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಭಾರಿ ಆತ್ಮವಿಶ್ವಾಸದಿಂದ ಬೀಗಿತ್ತು. ಆದರೆ, ಅದನ್ನು ಹುಸಿಗೊಳಿಸಿದ ಮತದಾರ, ಲೋಕಸಭೆ ಚುನಾವಣೆಯಲ್ಲಿ ಮತ್ತೆ ಪ್ರಗತಿಪರ ಒಕ್ಕೂಟಕ್ಕೆ ಜೈ ಎಂದಿದ್ದಾರೆ.
ದೇಶದೆಲ್ಲಡೆ ಯುಪಿಎ ಪರ ಗಾಳಿ ಜೋರಾಗಿ ಆರಂಭವಾಗಿದ್ದು, ಮತ್ತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರಕ್ಕೆ ಬರುವುದು ಬಹುತೇಕ ನಿಶ್ಚಿತ ಎನ್ನುವ ವಾತಾವರಣ ಸೃಷ್ಟಿಯಾಗಿದೆ.
(ದಟ್ಸ್ ಕನ್ನಡ ವಾರ್ತೆ)
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ












Click it and Unblock the Notifications