109554hd kumarswamyಉತ್ತರಕರ್ನಾಟಕದಲ್ಲಿ ಇನ್ನೊಂದು ಅಧಿವೇಶನ/news/2009/01/15/border-town-belgaum-geared-up-for-second-session.htmlಬೆಳಗಾವಿ ನಗರ ಎರಡನೇ ಬಾರಿ ಅಧಿವೇಶನ(ಜ. 16 ರಂದು)ಕ್ಕೆ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ. ಕಳೆದ 2006 ಸೆಪ್ಟೆಂಬರ್ 28 ರಂದು ಅಂದಿನ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೆಂಗಳೂರಿನಿಂದ ಆಚೆ ಪ್ರಥಮ ಬಾರಿಗೆ ಅಧಿವೇಶನ ನಡೆಸಿ ಸೈ ಎನಿಸಿಕೊಂಡಿದ್ದರು. ಇಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಎರಡನೇ ಬಾರಿಗೆ ಗಡಿ ನಗರ 34081http://kannada.oneindia.com/img/2009/01/15-belgaum-session1.jpg109554hd kumarswamyಮದುವಣಗಿತ್ತಿಯಂತೆ ಸಂಭ್ರಮಿಸುತ್ತಿರುವ ಬೆಳಗಾವಿ/news/2009/01/16/stage-set-for-winter-belgaum-legislature-session.htmlಬೆಳಗಾವಿ, ಜ. 16 : 10 ದಿನಗಳ ಕಾಲ ನಡೆಯಲಿರುವ ವಿಧಾನ ಮಂಡಲದ ಅಧಿವೇಶನ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಚೆನ್ನಮ್ಮ ವೃತ್ತದಿಂದ ಜೀರಿಗೆ ಸಭಾಂಗಣದವರೆಗೆ ಭವ್ಯ ಮೆರವಣಿಗೆ ಆರಂಭವಾಗಿದೆ. ಮುಖ್ಯಮಂತ್ರಿ ಡಾ ಬಿಎಸ್ ಯಡಿಯೂರಪ್ಪ ಮೆರವಣಿಗೆಯ ನೇತೃತ್ವ ವಹಿಸಿದ್ದಾರೆ. ಈ ಮೂಲಕ ಬೆಳಗಾವಿ ನಗದಲ್ಲಿ ಹಬ್ಬದ ವಾತಾವರಣ ಹಾಗೂ ಸಂಭ್ರಮದ ದೃಶ್ಯಗಳು ಎಲ್ಲೆಲ್ಲೂ ಕಂಡುಬರತೊಡಗಿವೆ. ಈ ಮಧ್ಯೆ 34096http://kannada.oneindia.com/img/2009/01/16-session-banner1.jpg109554hd kumarswamyಮಾಯಾವತಿ ಪಿಎಂ ಆಗಲು ಅಭ್ಯಂತರವಿಲ್ಲ, ಎಚ್ಡಿಕೆ/news/2009/03/13/mayavathi-is-fit-for-pm-post-hd-kumarswamy.htmlಬೆಂಗಳೂರು, ಮಾ. 13 : ತನ್ನನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಹಿಡಿದಿರುವ ಪಟ್ಟಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸಹಮತ ಸೂಚಿಸಿದ್ದಾರೆ. ಈ ವಿಷಯದಲ್ಲಿ ಮೊದಲಿನಿಂದಲೂ ಮಾಯಾವತಿ ಅವರಿಗೆ ಜೆಡಿಎಸ್ ಬೆಂಬಲ ಸೂಚಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಯಾವತಿ ಅವರು 35196http://kannada.oneindia.com/img/2009/03/13-kumaraswami2.jpg109554hd kumarswamyಅಶೋಕ್ ಖೇಣಿ ವಿರುದ್ಧ ದೇವೇಗೌಡ ಸ್ಪರ್ಧೆ!!!/news/2009/03/20/hd-devegowda-likes-to-contest-against-ashok-kheny.htmlಬೆಂಗಳೂರು, ಮಾ. 20 : ನೈಸ್ ಸಂಸ್ಥೆಯ ಅಶೋಕ್ ಯಾವ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದರೆ, ಅದೇ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವೆ ಎಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಮರು ಸವಾಲು ಹಾಕಿದ್ದಾರೆ. ಈ ಮೂಲಕ ನೈಸ್ ಕಾರಿಡಾರ್ ರಸ್ತೆಗೆ ಮಾತ್ರ ಸೀಮಿತವಾಗಿದ್ದ ದೇವೇಗೌಡ-ಖೇಣಿ ಜಗಳ ರಾಜಕೀಯದೊಳಗೆ ಪ್ರವೇಶ ಪಡೆದುಕೊಂಡಂತಾಗಿದೆ. ಈ ಹಿಂದೆ ಖೇಣಿ ದೇವೇಗೌಡರ ವಿರುದ್ಧ ಸ್ಪರ್ಧಿಸುವುದಾಗಿ 35381http://kannada.oneindia.com/img/2009/03/20-hd-devegowda9.jpg109554hd kumarswamyಯಡಿಯೂರಪ್ಪ, ಅನಂತ್ ಕಳ್ಳ-ಮಳ್ಳ, ಎಚ್ಡಿಕೆ/news/2009/03/20/hd-kumarswamy-critisises-ananthkumar-ls-poll09.htmlಬೆಂಗಳೂರು, ಮಾ. 20 : ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ನಾನು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಹಕ್ಕ-ಬುಕ್ಕರು ಇದ್ದ ಹಾಗೆ ಎನ್ನುವ ಅನಂತಕುಮಾರ್ ಹೇಳಿಕೆಗೆ ತೀವ್ರವಾಗಿ ಆಕ್ಷೇಪಿಸಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಈ ಇಬ್ಬರು ಕಳ್ಳ-ಮಳ್ಳರು ಎಂದು ಲೇವಡಿ ಮಾಡಿದ್ದಾರೆ. ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ 35387http://kannada.oneindia.com/img/2009/03/20-kumaraswami2.jpg36612jdsಪ್ರವಾಹ ಪರಿಹಾರ:ದೇವೇಗೌಡ ಗಪ್ ಚುಪ್/news/2009/10/13/hd-devegowda-yet-to-visit-flood-hit-areas.htmlಬೆಂಗಳೂರು, ಅ. 13 : ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ರಾಷ್ಟ್ರೀಯ ದುರಂತ ಮನ ಕಲಕುವಂತಿದೆ. ಲಕ್ಷಾಂತರ ಮಂದಿ ವಸತಿ ಹೀನರಾಗಿದ್ದಾರೆ. ಕೋಟ್ಯಂತರ ರುಪಾಯಿಗಳ ಸಂಪನ್ಮೂಲ ನಾಶವಾಗಿದೆ. ರೈತ ಬದುಕು ದುಸ್ತರವಾಗಿದೆ. ಮನೆ ಮಠ ಕಳೆದುಕೊಂಡ ಜನತೆ ಸರಕಾರ ನೀಡುವ ಸವಲತ್ತಿಗಾಗಿ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕಾಯುತ್ತಿದ್ದಾರೆ. ಆದರೆ, ಕರ್ನಾಟಕದ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ಮಾತ್ರ ಮಹಾರಾಷ್ಟ್ರ 39671http://kannada.oneindia.com/img/2009/10/13-hd-devegowda11.jpg36612jdsಗಿರಿ ಗುಹೆ ದುರಸ್ತಿ ಸ್ಥಗಿತ; ಕಾವಲು ನೇಮಕಕ್ಕೆ ಆಗ್ರಹ/news/2009/10/14/jds-demand-for-security-to-bababudangiri-cave.htmlಚಿಕ್ಕಮಗಳೂರು, ಅ.13: ಇಲ್ಲಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿ ದರ್ಗಾ ಗುಹೆಯ ಮೇಲ್ಛಾವಣಿ ದುರಸ್ತಿ ಕಾಮಗಾರಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಧಾರ್ಮಿಕ ದತ್ತ್ತಿ ಇಲಾಖೆಗೆ ವರದಿ ಸಲ್ಲಿಸಲು ಮುಂದಾಗಿದೆ. ದುರಸ್ತಿ ಕಾರ್ಯ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಗುಹೆಯ ರಕ್ಷಣೆಗಿರುವ ಕಾವಲುಗಾರರಿಗಿಂತ ಹೆಚ್ಚುವರಿ ಪಡೆ ಅವಶ್ಯ ಎಂದು ಸ್ಥಳೀಯ ಜೆಡಿಎಸ್ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.ಅಪೆಕ್ಸ್ ನ್ಯಾಯಾಲಯದ ಪಿಡಿ ದಿನಕರನ್ ನೇತೃತ್ವದ 39689http://kannada.oneindia.com/img/2009/10/14-dattapeetha.jpg36612jdsನೋಟು ಎಣಿಸಿಯೆಣಿಸಿ ಯಡ್ಡಿ ಸುಸ್ತು/news/2009/10/14/bsy-tired-after-counting-cash-hd-revanna.htmlಬೆಂಗಳೂರು ಅ 14 : ಮುಖ್ಯಮಂತ್ರಿಗಳು ಬೇಗ ಗುಣಮುಖರಾಗಿ ಜಿಂದಾಲ್ ಆಸ್ಪತ್ರೆಯಿಂದ ಬಿಡುಗಡೆಯಾಗಲಿ ಎಂದು ಹಾರೈಸುತ್ತೇನೆ. ಪಾದಯಾತ್ರೆಯಲ್ಲಿ ಸಿಎಂ 700 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿದ್ದಾರೆ. ಇದೇನು ಸಾಮಾನ್ಯವೇ, ನೋಟುಗಳನ್ನು ಎಣಿಸಿ ಎಣಿಸಿ ಪಾಪ ಅವರಿಗೆ ಆಯಾಸವಾಗಿದೆ ಹೀಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ ಡಿ ರೇವಣ್ಣ ಲೇವಡಿ ಮಾಡಿದ್ದಾರೆ.ದೇಶವೇ ತಲೆ 39694http://kannada.oneindia.com/img/2009/10/14-hd-revanna1.jpg36612jdsಕರೆದಾಗಲೆಲ್ಲ ಹಿಂಬಾಲಿಸಬೇಕೆ : ದತ್ತ ಆಕ್ರೋಶ/news/2009/10/19/jds-not-be-part-of-all-party-delegation-to-delhi.htmlಬೆಂಗಳೂರು, ಅ. 19 : ಹೆಚ್ಚಿನ ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ದೆಹಲಿಗೆ ಇಂದು ಹೋಗುತ್ತಿರುವ ಸರ್ವಪಕ್ಷಗಳ ನಿಯೋಗದಲ್ಲಿ ಭಾಗವಹಿಸದಿರಲು ಜೆಡಿಎಸ್ ನಿರ್ಧರಿಸಿದೆ.ಈ ವಿಷಯವನ್ನು ತಿಳಿಸಿರುವ ಜೆಡಿಎಸ್ ನಾಯಕ ವೈಎಸ್ ವಿ ದತ್ತ ಅವರು, ಪ್ರತಿಪಕ್ಷಗಳನ್ನು ಈ ನಿಟ್ಟಿನಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರಕ್ಕೆ ಸಲ್ಲಿಸುತ್ತಿರುವ 39747http://kannada.oneindia.com/img/2009/10/19-ysv-datta1.jpg36612jdsರಾಜಕೀಯವಾಗಿ ಮಾಜಿಯಾಗಲಾರೆ : ದೇವೇಗೌಡ/news/2009/10/23/i-am-still-active-politician-hd-devegowda.htmlಕಡೂರು, ಅ. 23 : ನನ್ನ ರಾಜಕೀಯ ಜೀವನದಲ್ಲಿ ಬಹಳಷ್ಟು ಏರುಪೇರುಗಳನ್ನು ಕಂಡಿದ್ದೇನೆ. ನಾನು ಪ್ರಧಾನಿಯಾಗಿ ಮಾಜಿಯಾಗಿದ್ದೇನೆ ಹೊರತು ರಾಜಕಾರಣದಿಂದಲ್ಲ. ಸಕ್ರಿಯ ರಾಜಕೀಯದಿಂದ ಮಾಜಿಯಾಗಲಾರೆ. ಪಕ್ಷದಲ್ಲಿದ್ದು ಪಕ್ಷದ ಕತ್ತು ಕುಯ್ಯೂವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಗುಡುಗಿದರು. ಕಡೂರಿನ ಪ್ರವಾಸಿ ಮಂದಿರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ 39819http://kannada.oneindia.com/img/2009/10/23-deve-gowda4e.jpg124510upaಸಾಂಗ್ಲಿಯಾನಾ, ಕುನ್ನೂರು ಕಾಂಗ್ರೆಸ್ ಸೇರ್ಪಡೆ/news/2009/01/21/expelled-ktaka-bjp-leaders-join-congress.htmlನವದೆಹಲಿ, ಜ. 21 : ಯುಪಿಎ ಸರ್ಕಾರಕ್ಕೆ ಬೆಂಬಲ ನೀಡಿ ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿ ಅಮಾನತುಗೊಂಡಿದ್ದ ಮನೋರಮಾ ಮಧ್ವರಾಜ್, ಎಚ್ ಟಿ ಸಾಂಗ್ಲಿಯನಾ ಮತ್ತು ಮಂಜುನಾಥ್ ಕುನ್ನೂರು ಇಂದು ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡರು.ಕಳೆದ ವರ್ಷ ಜುಲೈ 22 ರಂದು ಲೋಕಸಭೆಯಲ್ಲಿ ಗೊತ್ತುವಳಿ ಪರವಾಗಿ ಮತ ಚಲಾಯಿಸಿದ್ದರು. ಮನೋರಮಾ ಮಧ್ವರಾಜ್ 34195http://kannada.oneindia.com/img/2009/01/21-sangliyana-congress.jpg124510upaಶ್ರೀಸಾಮಾನ್ಯನಿಗೆ ನೋವಾಗದಂತೆ ಲಾಲೂ ಬಜೆಟ್/news/2009/02/13/my-budget-will-not-hurt-common-man-lalu.htmlನವದೆಹಲಿ, ಫೆ.13 : ಕೇಂದ್ರ ಸರ್ಕಾರದ ಕೊನೆಯ ರೈಲ್ವೆ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ. ರೈಲ್ವೆ ಸಚಿವ ಲಾಲು ಪ್ರಸಾದ ಯಾದವ್ ಇಂದು ಸಂಸತ್ತಿನಲ್ಲಿ ತಮ್ಮ ಕೊನೆಯ ಬಜೆಟ್ ಮಂಡಿಸಲಿದ್ದಾರೆ. ಇತ್ತೀಚೆಗೆ ಭಯೋತ್ಪಾದನೆ ಮೀತಿಮೀರಿರುವ ಹಿನ್ನೆಲೆಯಲ್ಲಿ ಇಲಾಖೆಗೆ ಇನ್ನಷ್ಚು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಆರನೇ ಬಜೆಟ್ ಮಂಡಿಸುತ್ತಿರುವ ಲಾಲು 34622http://kannada.oneindia.com/img/2009/02/13-laloo1e.jpg124510upa8 ಆಸ್ಕರ್ ಪ್ರಶಸ್ತಿ ಯಪಿಎ ಸರಕಾರದ ಸಾಧನೆ, ಕಾಂಗ್ರೆಸ್/news/2009/02/24/congress-counts-8oscars-as-part-of-upa-achievement.htmlನವದೆಹಲಿ, ಫೆ. 24 : ಪ್ರಶಸ್ತಿ ಗೆಲ್ಲಲು ಉತ್ತಮ ಕತೆ, ಚಿತ್ರಕತೆ, ಸಂಗೀತ, ನಿರ್ದೇಶನ ಮಾತ್ರ ಇದ್ದರೆ ಸಾಕೇ ಕೇಂದ್ರದಲ್ಲಿ ಉತ್ತಮ ಸರ್ಕಾರವೂ ಬೇಕು ? ಸೋಮವಾರ ಸ್ಲಂಡಾಗ್ ಮಿಲೇನಿಯರ್ ಚಿತ್ರ ಎಂಟು ಆಸ್ಕರ್ ಪ್ರಶಸ್ತಿ ಗಳಿಸಿದ್ದನ್ನು ಕಾಂಗ್ರೆಸ್ ತನ್ನ ಪಕ್ಷದ ಸಾಧನೆ ಎಂದು ಬಿಂಬಿಸತೊಡಗಿದೆ. ಕಳೆದ ಎನ್ ಡಿ ಎ ಸರಕಾರ ಲೋಕಸಭಾ ಚುನಾವಣೆಯ ಸಮಯದಲ್ಲಿ 34835http://kannada.oneindia.com/img/2009/02/24-abhishek-singhvi1.jpg124510upaಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg124510upaಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpgnews"> ಯುಪಿಎಗೆ ಬೆಂಬಲ : ಕುಮಾರಣ್ಣ ಕೇಂದ್ರ ಮಂತ್ರಿ ? | HD Kumarswamy | JDS | UPA | Sonia Gandhi | Congress | Third Front | Lok Sabha election 2009 | ಯುಪಿಎಗೆ ಬೆಂಬಲ : ಕುಮಾರಣ್ಣ ಕೇಂದ್ರ ಮಂತ್ರಿ ? - Kannada Oneindia

ಯುಪಿಎಗೆ ಬೆಂಬಲ : ಕುಮಾರಣ್ಣ ಕೇಂದ್ರ ಮಂತ್ರಿ ?

HD Kumaraswamy
ಫಲಿತಾಂಶಕ್ಕೆ ಮೂರು ದಿನ ಬಾಕಿ ಉಳಿದಿದೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ತೆರೆಮರೆಯಯಲ್ಲಿ ನಾಟಕ ಶುರು ಮಾಡಿದ್ದಾರೆ. ತೃತೀಯ ರಂಗ ಬರಕತ್ತಾಗುವುದಿಲ್ಲ ಎಂದು ಗಮನಿಸಿದ ಗೌಡರು ತಮ್ಮ ಪುತ್ರ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಮೇಡಮ್ ಸೋನಿಯಾ ಬಳಿ ಕಳುಹಿಸಿ ವ್ಯವಹಾರ ಕುದುರಿಸಲು ಆರಂಭಿಸಿದ್ದಾರೆ.

*ಮೃತ್ಯುಂಜಯ ಕಲ್ಮಠ


ಆಕಸ್ಮಾತಾಗಿ ಯುಪಿಎ ಅಧಿಕಾರಕ್ಕೆ ಬಂದಲ್ಲಿ ಸರಕಾರದಲ್ಲಿ ಸಚಿವ ಸ್ಥಾನ ಹೊಡೆದುಕೊಳ್ಳಬೇಕು ಎನ್ನುವುದು ಗೌಡರ ತಂತ್ರಗಾರಿಕೆ. ಇದರೊಂದಿಗೆ ರಾಜ್ಯಕಾಂಗ್ರೆಸ್ ನಾಯಕರ ಮೇಲೆ ತಮ್ಮ ಹಿಡಿತದಲ್ಲಿಟ್ಟಕೊಳ್ಳುವುದು. ಜೊತೆಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಪ್ರತಿಸ್ಪರ್ಧಿಯಾಗಿ ನಿಲ್ಲುವುದು ಕೂಡಾ ಅವರ ದೂರಾಲೋಚನೆ. ಒಟ್ಟಿನಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳಿಗೆ ಮುಗಿಸುವ ಕೆಲಸ ಇದಾಗಿದೆ.

ದಾಬಾಸ್ ಪೇಟೆಯಲ್ಲಿ ತೃತೀಯ ರಂಗದ ಸಮಾವೇಶ ಏರ್ಪಡಿಸಿದ ಗೌಡರು, ಅಂದು ವೀರಾವೇಶದಿಂದ ಮಾತನಾಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ಸೇತರ ಸರಕಾರ ರಚಿಸಲು ತೃತೀಯ ರಂಗವನ್ನು ರಚಿಸಲಾಗಿದೆ. ಈ ಎರಡು ಒಕ್ಕೂಟಗಳ ನೇತೃತ್ವದ ಸರಕಾರದ ದುರಾಡಳಿತದಿಂದ ದೇಶದ ಜನತೆ ಬೇಸತ್ತು ಹೋಗಿದ್ದಾರೆ ಆದ್ದರಿಂದ ಮೂರನೇ ಒಕ್ಕೂಟದ ಕಡೆಗೆ ಮತದಾರ ದೃಷ್ಟಿ ಹಾಯಿಸಿದ್ದಾರೆ ಎಂದು ಭಾಷಣ ಬಿಗಿದಿದ್ದರು.


ಆದರೆ, ನಾಲ್ಕನೇ ಹಂತದ ಮತದಾನ ಕೊನೆಗೊಳ್ಳುತ್ತಿದ್ದಂತೆಯೇ ದಿಲ್ಲಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಯಿತು. ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಕಾಂಗ್ರೆಸ್ ಓಲೈಸತೊಡಗಿತು. ಇತ್ತ ತೃತೀಯ ರಂಗದಲ್ಲಿದ್ದ ತೆಲಂಗಾಣ ರಾಷ್ಟ್ರೀಯ ಸಮಿತಿ, ತೆಲುಗು ದೇಶಂ ಪಕ್ಷಗಳು ಎನ್ ಡಿಎ ದತ್ತ ಮುಖ ಮಾಡತೊಡಗಿದವು. ಹಳೆ ಗಂಡನ ಪಾದವೇ ಗತಿ ಎಂಬಂತೆ ಎಡಪಕ್ಷಗಳು ದಿನಕ್ಕೊಂದು ಹೇಳಿಕೆ ನೀಡತೊಡಗಿದವು. ಎಡಪಕ್ಷಗಳ ಮುಖಂಡ ಪ್ರಕಾಶ್ ಕಾರಟ್ ಅವರಂತೂ ಪಲಿತಾಂಶದ ನಂತರ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಹೇಳುವ ಮೂಲಕ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.

ತೃತೀಯರಂಗ ಎಲ್ಲ ಪಕ್ಷಗಳು ಒಂದೊಂದು ಪಕ್ಷದೊಂದಿಗೆ ಗುರುತಿಸಿಕೊಳ್ಳತೊಡಗುತ್ತಿದ್ದಂತೆಯೇ ಗೌಡರ 50 ವರ್ಷಗಳ ರಾಜಕೀಯ ಅನುಭವ ಕೆಲಸ ಮಾಡತೊಡಗಿತು. ಸುಮ್ಮನಿದ್ದರೇ ಏನೂ ಗಿಟ್ಟಲ್ಲ. ಏನಾದರೂ ಉಪಾಯ ಮಾಡಲೆಬೇಕು ಎಂದು ತಮ್ಮ ಪುತ್ರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರನ್ನು ಸೋನಿಯಾಗಾಂಧಿ ಕಳಿಸಿ ಯುಪಿಎ ಸರಕಾರಕ್ಕೆ ನಮ್ಮ ಬೆಂಬಲವಿದೆ ಎಂಬುದನ್ನು ಖಾತ್ರಿಪಡಿಸಿದ್ದಾರೆ. ಈ ಮೂಲಕ ದಿಲ್ಲಿಯಲ್ಲಿ ತನ್ನ ಸ್ಥಾನವನ್ನು ಗಟ್ಟಿಮಾಡಿಕೊಂಡ ಗೌಡರು, ಮುಂಬರುವ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ಕುಮಾರಸ್ವಾಮಿ ಮಂತ್ರಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಮಂಗಳವಾರ ರಾತ್ರಿ 8 ಗಂಟೆಯ ಹೊತ್ತಿಗೆ ಕುಮಾರಸ್ವಾಮಿ ಸೋನಿಯಾ ಗಾಂಧಿ ಭೇಟಿ ತೆರಳಿದ್ದಾರೆ. ಕಳ್ಳನ ಮನಸ್ಸು ಹುಳ್ಳುಳ್ಳಗೆ ಎನ್ನುವಂತೆ ತಮ್ಮ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ ಕುಮಾರಸ್ವಾಮಿ, ಮಾಧ್ಯಮದವರಿಂದ ತಪ್ಪಿಸಿಕೊಳ್ಳಲು ಮುಖ ಮುಚ್ಚಿಕೊಂಡಿದ್ದಾರೆ. ರಹಸ್ಯವಾಗಿ ಭೇಟಿ ಮಾಡಬೇಕು ಎಂದುಕೊಂಡಿದ್ದ ಗೌಡರ ತಂತ್ರವನ್ನು ಮಾಧ್ಯಮದ ಮಿತ್ರರು ವಿಫಲಗೊಳಿಸಿದ್ದಾರೆ. ಎನ್ ಡಿಟಿವಿ ಮುಖ್ಯ ವರದಿಗಾರ್ತಿ ಬರ್ಕಾ ದತ್ತಾ ಅವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇದೊಂದು ಸೌಹಾರ್ದ ಭೇಟಿ. ದಿಲ್ಲಿ ಸರಕಾರದ ಬಗ್ಗೆ ಮಾತುಕತೆ ನಡೆಸಿಲ್ಲ. ಕರ್ನಾಟಕದ ಸಮಸ್ಯೆಯ ಬಗ್ಗೆ ಮಾತನಾಡಿದ್ದೇನೆ. ನಾವು ಇನ್ನೂ ತೃತೀಯರಂಗದಲ್ಲಿಯೇ ಇದ್ದೇವೆ ಹೀಗೆ ಏನೇನೋ ಹೇಳಿದರು.

ರಾಜ್ಯದ ಸಮಸ್ಯೆಗಳನ್ನು ಚರ್ಚೆ ಮಾಡಲು ಇದು ಈ ಸೂಕ್ತ ಸಮಯವಾ ? ಕೊನೆಯ ಹಂತದ ಚುನಾವಣೆ ನಡೆಯುತ್ತಿದೆ. ಎಲ್ಲರ ಮನಸ್ಸು ಫಲಿತಾಂಶದತ್ತ ಇದೆ. ಈ ಸಮಯದಲ್ಲಿ ಕರ್ನಾಟಕದ ಸಮಸ್ಯೆಗಳನ್ನು ಚರ್ಚಿಸಲು ಸೋನಿಯಾ ಮನಸ್ಸು ಮಾಡಲು ಸಾಧ್ಯವಾ ? ಸದ್ಯ ರಾಜ್ಯದಲ್ಲಿ ಅಂಥ ಗಂಭೀರ ಸಮಸ್ಯೆ ಉಂಟಾಗಿರುವುದಾದರೂ ಏನೂ ? ಸರಿ ನಿಮ್ಮ ಹಾಗೇ ಹೇಳಿಕೆಯಂತೆ ಬರುವುದಾದರೆ, ಸೋನಿಯಾ ಗಾಂಧಿ ಭೇಟಿಗೆ ತೆರಳಿದ್ದು ತಪ್ಪಿಲ್ಲ.

ಆದರೆ, ಮಾದ್ಯಮದವರ ಕಣ್ಣು ತಪ್ಪಿಸಲು ಮುಖ ಮುಚ್ಚಿಕೊಂಡು ಕಳ್ಳನ ಹಾಗೆ ಹೋಗುವ ಅವಶ್ಯಕತೆ ಇತ್ತೇ ? ನಂತರ ನೀವು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ತಡವರಿಸಿದ್ದು ಏಕೆ ? ರಾಜ್ಯದ ಸಮಸ್ಯೆಯನ್ನು ಚರ್ಚಿಸಲು ಇದು ಸಕಾಲವಾ ? ನಿಮಗೆ ರಾಜ್ಯದ ಬಗ್ಗೆ ಅಂಥ ಪ್ರಾಮಾಣಿಕ ಕಳಕಳಿ ಇದ್ದಿದ್ದರೆ, ರಾಜ್ಯದಲ್ಲಿ ಈ ಹಿಂದೆ ಅನೇಕ ಸಮಸ್ಯೆಗಳು ಉಂಟಾಗಿದ್ದವು, ರಸಗೊಬ್ಬರ ಸಮಸ್ಯೆ, ಮಂಗಳೂರು ಪಬ್ ದಾಳಿ, ಚರ್ಚೆ ಮೇಲಿನ ದಾಳಿ ಸೇರಿ ಅನೇಕ ಸಮಸ್ಯೆಗಳು ತೆಲೆದೋರಿದ್ದವು. ಅಂದು ಸೋನಿಯಾ ಭೇಟಿ ಮಾಡಬೇಕು ಅಂತ ನಿಮಗೆ ಅನ್ನಿಸಲಿಲ್ಲವೇ ? ಸುಳ್ಳು ಬಹಳ ದಿನ ನಡೆಯುವುದಿಲ್ಲ ಎನ್ನುವುದು ತಮಗೂ ಕೂಡಾ ಗೊತ್ತಿರುವ ಸಂಗತಿಯಲ್ಲವೇ. ಹಾಗಿದ್ದರೂ ಕೂಡಾ ಸುಳ್ಳ ಸರಮಾಲೆಯೇಕೆ. ಧೈರ್ಯದಿಂದ ಹೇಳಿ, ಯುಪಿಎ ಸರಕಾರಕ್ಕೆ ಜೆಡಿಎಸ್ ಬೆಂಬಲ ನೀಡಲಿದೆ ಅಂತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+