ಇಂಜಿನಿಯರಿಂಗ್ ಸೀಟು ಶುಲ್ಕ ಇಳಿಕೆ, ಸಿಎಂ
ಬೆಂಗಳೂರು, ಮೇ. 8 : ಪ್ರಸಕ್ತ ಸಾಲಿನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸರಕಾರ ಮುಂದಾಗಿದ್ದು, ಶೇ. 50 ರಷ್ಟು ಸರಕಾರಿ ಕೋಟಾ ಸೀಟುಗಳಲ್ಲಿ 25 ಸಾವಿರ ರುಪಾಯಿ ಬದಲು 15 ಸಾವಿರ ರುಪಾಯಿ ಶುಲ್ಕ ಇಳಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಶಿಕ್ಷಣ ಇಲಾಥೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಉನ್ನತ ಶಿಕ್ಷಣ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಪ್ರಯತ್ನದ ಫಲವಾಗಿ ಕೇಂದ್ರದಿಂದ 160 ಕೋಟಿ ರುಪಾಯಿ ಅನುದಾನ ದೊರೆತಿದೆ. ಅದೇ ರೀತಿ ಯುಜಿಸಿಯಿಂದಲೂ ರಾಜ್ಯದ 21 ಕಾಲೇಜು ಅಭಿವೃದ್ಧಿಗೆ 63 ಕೋಟಿ ರುಪಾಯಿ ಅನುದಾನ ದೊರೆಕಿದೆ.
ಈ ಹಣವನ್ನು ಹಿಂದುಳಿದ ಪ್ರದೇಶಗಳಲ್ಲಿರುವ ಕಾಲೇಜುಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಬಳಲಾಗುತ್ತಿದೆ. ರಾಜ್ಯದಲ್ಲಿನ 182 ಹೊಸ ಪದವಿ ಕಾಲೇಜುಗಳ ಕಟ್ಟಡ ನಿರ್ಮಾಣ ಆರಂಭವಾಗಿದೆ. ಇನ್ನೂ 64 ಕಾಲೇಜುಗಳಿಗೆ ನಿವೇಶನ ಸಿಕ್ಕಿಲ್ಲ. ಆದಷ್ಟು ಬೇಗ ನಿವೇಶನ ಪಡೆದು ಕಟ್ಟಡ ನಿರ್ಮಾಣಕ್ಕೆ ಮುಂದಾಗುತ್ತೇವೆ ಎಂದರು. ವೃತ್ತಿ ಶಿಕ್ಷಣ ಕೋರ್ಸ್ ಗಳಿಗೆ ನಡೆಸುವ ಸಾಮಾನ್ಯ ಪ್ರವೇಸ ಪರೀಕ್ಷೆ (ಸಿಇಟಿ) ರದ್ದು ಮಾಡುವ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಐಟಿ ಮಂದಿಗೆ ಧೈರ್ಯ ತುಂಬಿದ ಸಿಎಂ
ಭಾಗ್ಯಲಕ್ಷ್ಮಿ ಯೋಜನೆ ನಿಲ್ಲದು - ಸಿಎ೦












Click it and Unblock the Notifications