ಜೂ.1 ರಿಂದ 3ರವರೆಗೆ ವಿಶೇಷ ಲಸಿಕಾ ಮೇಳ

ಗುಲಬರ್ಗಾ, ಮೇ. 7 : ಗುಲ್ಬರ್ಗಾ ನಗರದಲ್ಲಿ ಸುಮಾರು 5,000 ಮಕ್ಕಳು ಸೂಕ್ತ ಲಸಿಕೆಯಿಂದ ವಂಚಿತರಾಗಿದ್ದು, ಇಂಥ ಮಕ್ಕಳನ್ನು ಪತ್ತೆ ಹಚ್ಚಿ, ಒಂದು ತಿಂಗಳೊಳಗೆ ಎಲ್ಲಾ ಮಕ್ಕಳಿಗೆ ರೋಗನಿರೋಧಕ ಲಸಿಕೆ ಹಾಕಲು ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಘಟಕ ಹಾಗೂ ಜಿಲ್ಲಾ ಆಡಳಿತದ ಸಂಯುಕ್ತಾಶ್ರಯದಲ್ಲಿ ವಿಶೇಷ ಮೇಳ ಹಮ್ಮಿಕೊಳ್ಳಲಾಗಿದೆ.

ಬುಧವಾರ ನಡೆದ 'ಆರೋಗ್ಯ ಬಡ್ತಿ' ಸಭೆಯಲ್ಲಿ ಮಾತನಾಡಿದ ಹೆಚ್‌ಕೆಎಡಿಬಿ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು, ಜಿಲ್ಲೆಯಲ್ಲಿ ಆರೋಗ್ಯ ಸೂಚ್ಯಂಕ ಕೆಳಮಟ್ಟದಲ್ಲಿದ್ದು, ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದರು. ಗುಲಬರ್ಗಾ ನಗರದಲ್ಲಿ 85 ಸಾವಿರ ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದ್ದು, 80 ಸಾವಿರ ಮಕ್ಕಳಿಗೆ ನಿಯಮಿತವಾಗಿ ಕಾಲ ಕಾಲಕ್ಕೆ ಚಚ್ಚುಮದ್ದು ಹಾಕಲಾಗಿದೆ.

ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ, ವಿಶೇಷ ಮೇಳ ಹಮ್ಮಿಕೊಂಡು ಲಸಿಕೆ ವಂಚಿತ ಮಕ್ಕಳನ್ನು ಗುರುತಿಸಿ, ಶೇಕಡ 100 ಮಕ್ಕಳಿಗೆ ಲಸಿಕೆ ಮಾಡಬೇಕಾಗಿದೆ. ಈ ಮೇಳದಲ್ಲಿ ಗುಲ್ಬರ್ಗಾ ಮಹಾನಗರ ಪಾಲಿಕೆ, ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಪಾಲ್ಗೊಳ್ಳಬೇಕು ಎಂದು ಅವರು ತಿಳಿಸಿದರು. ಗುಲ್ಬರ್ಗಾ ನಗರದಲ್ಲಿ ಜೂನ್ 1 ರಿಂದ 3 ರವರೆಗೆ ಈ ಕಾರ್ಯಾಚರಣೆ ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಲಸಿಕೆ ವಂಚಿತ ಮಕ್ಕಳನ್ನು ಮಹಾನಗರ ಪಾಲಿಕೆಯು ಗುರುತಿಸಬೇಕಿದ್ದು, ಪತ್ತೆ ಹಚ್ಚುವ ಕಾರ್ಯಕ್ಕೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವಂತೆ ಅವರು ಸೂಚಿಸಿದರು. (ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+