ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಹಂದಿಜ್ವರವಿಲ್ಲ : ವೈದ್ಯರು

By Staff
|
Google Oneindia Kannada News

ನವದೆಹಲಿ, ಮೇ. 5 : ಹಂದಿಜ್ವರಕ್ಕೆ ಸಂಬಂಧಿಸಿದಂತೆ ವ್ಯಾಪಕ ಕಟ್ಟಿನಿಟ್ಟಿನ ಕ್ರಮಗಳನ್ನು ಕೈಗೊಂಡ ಹಿನ್ನೆಲೆಯಲ್ಲಿ ಭಾರತ ಹಂದಿಜ್ವರ ಪತ್ತೆಯಾಗಿಲ್ಲ. ಈ ಕುರಿತು ಪರೀಕ್ಷಿಸಲಾದ ಮೂವರು ಹಂದಿಜ್ವರದಿಂದ ಬಳಲುತ್ತಿಲ್ಲ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಅಮೆರಿಕದಿಂದ ಹಾಗೂ ಇನ್ನೊಬ್ಬ ಕೆನಡಾದಿಂದ ಬಂದಿರುವ ಭಾರತೀಯ ವ್ಯಕ್ತಿಗಳನ್ನು ವೈದ್ಯರು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ತೀವ್ರ ಪರೀಕ್ಷೆಗೆ ಒಳಪಡಿಸಿದ್ದರು. ಆದರೆ, ಹಂದಿಜ್ವರಕ್ಕೆ ಕಾರಣವಾಗಿರುವ ಎಚ್ 1 ಎನ್ 1 ವೈರಸ್ ಈ ಮೂವರಲ್ಲಿ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ರಾಷ್ಟ್ರೀಯ ಸಾಂಕ್ರಾಮಿಕ ರೋಗ ನಿರೋಧಕ ಸಂಸ್ಥೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.

ಅಮೆರಿಕ ಹಾಗೂ ಮೆಕ್ಸಿಕೋ ದೇಶಗಳಲ್ಲಿ ಹಂದಿಜ್ವರ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಭಾರಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು. ದೇಶದ 12 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಜ್ಞರ ವೈದ್ಯರನ್ನು ನೇಮಿಸಿ ಪ್ರಯಾಣಿಕರ ತಪಾಸಣೆಗೆ ನಿಯೋಜಿಸಿತ್ತು. ಅಲ್ಲದೇ ವಿವಿಧ ರಾಜ್ಯಗಳ ಆರೋಗ್ಯ ಇಲಾಖೆಗೆ ಸ್ಪಷ್ಟ ಮಾಹಿತಿ ಹಂದಿಜ್ವರ ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಲಾಗಿತ್ತು.

(ಏಜನ್ಸೀಸ್)

ಹಂದಿಜ್ವರ ತಡೆಗೆ ಅಗತ್ಯ ಕ್ರಮ : ಅಶೋಕ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X