ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳದಲ್ಲಿ ಆಂಧ್ರ ಪೊಲೀಸರ ಪುಂಡಾಟಿಕೆ

By Staff
|
Google Oneindia Kannada News

Dharmasthala : CRPF Personnel kills one civilian
ಧರ್ಮಸ್ಥಳ, ಮೇ.1: ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಎದುರಿನ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳು ಮತ್ತು ಆಂಧ್ರದ ಸಿಆರ್ ಪಿಎಫ್ ಪೊಲೀಸರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದು ಗುಂಡು ಹಾರಿಸಿದ ಪರಿಣಾಮ ವ್ಯಕ್ತಿಯೊಬ್ಬ ಸಾವಪ್ಪಿದ ಘಟನೆ ಶುಕ್ರವಾರ ನಡೆದಿದೆ. ಘಟನೆಯಿಂದ ಧರ್ಮಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಗೊಂಡಿದೆ.

ಆಂಧ್ರ ಪೊಲೀಸರ ಗುಂಡಿನ ದಾಳಿಗೆ ಸಾವಪ್ಪಿದವರನ್ನು ಐತಪ್ಪ ಎಂದು ಗುರುತಿಸಲಾಗಿದೆ. ಉದಯ್ ಎಂಬ ವ್ಯಕ್ತಿಯ ಕಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದು ಇನ್ನೂ ಮೂರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ15ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ. ಸ್ಥಳೀಯರ ಆಕ್ರೋಶ ಮುಗಿಲು ಮುಟ್ಟಿದೆ.

ಘಟನೆ ಹೇಗೆ ನಡೆಯಿತು?
ಬೆಳ್ತಂಗಡಿ ಸೇರಿದಂತೆ ಕರ್ನಾಟಕದ ನಕ್ಸಲ್ ಪೀಡಿತ ಪ್ರದೇಶಗಳ ಸಂದರ್ಶನಕ್ಕೆ 90 ಮಂದಿ ಸಿಆರ್ ಪಿಎಫ್ ಪೊಲೀಸರು ಆಗಮಿಸಿದ್ದರು. ಇವರು ಇಂದು ಧರ್ಮಸ್ಥಳದ ದೇವಸ್ಥಾನಕ್ಕೆ ಆಗಮಿಸಿ ಹಿಂತಿರುಗುತ್ತಿರಬೇಕಾದರೆ ದೇವಸ್ಥಾನದ ಎದುರಿನಲ್ಲಿದ್ದ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ಮಕ್ಕಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಕುಪಿತಗೊಂಡ ಸಿಆರ್ ಪಿಎಫ್ ಪೊಲೀಸರು 15ಕ್ಕೂ ಹೆಚ್ಚು ಮಕ್ಕಳಿಗೆ ಏಕಾಏಕಿ ಲಾಠಿ ಪ್ರಹಾರ ಮಾಡಿದರು. ಇದನ್ನು ತಡೆಯಲು ಸ್ಥಳೀಯರು ಮಧ್ಯ ಪ್ರವೇಶಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ನಂತರ ಮದ್ಯದ ಅಮಲಿನಲ್ಲಿದ್ದ ಪೊಲೀಸರು ಎಕೆ47 ಬಂದೂಕಿನಿಂದ ಗುಂಡು ಹಾರಿಸಿದರು. ಈ ಘಟನೆಯಲ್ಲಿ ಐತಪ್ಪ ಎಂಬ ವ್ಯಕ್ತಿಗೆ ಗುಂಡು ತಗುಲಿ ಸ್ಥಳದಲ್ಲೇ ಸಾವಪ್ಪಿದ. ಮತ್ತೊಬ್ಬ ಸ್ಥಳೀಯ ಉದಯ್ ಎಂಬುವವರ ಕಾಲಿಗೆ ಗುಂಡು ತಗುಲಿದೆ. ಮೂರು ಮಂದಿ ಸ್ಥಳೀಯರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಿಂದ ಕುಪಿತಗೊಂಡಿರುವ ಸ್ಥಳೀಯರು ಸಿಆರ್ ಪಿಎಫ್ ಪೊಲೀಸರ ಎರಡು ವಾಹನಗಳಿಗೆ ಮುತ್ತಿಗೆ ಹಾಕಿದರು. ಧರ್ಮಸ್ಥಳದಲ್ಲಿ ಪರಿಸ್ಥಿತಿ ಈಗ ಬಿಗುವಿನಿಂದ ಕೂಡಿದೆ.

ಮಂಗಳೂರು ಜಿಲ್ಲಾಧಿಕಾರಿ ವಿ ಪೊನ್ನುರಾಜ್ ಘಟನಾ ಸ್ಥಳಕ್ಕೆ ಆಗಮಿಸಿದ್ದು ಪರಿಸ್ಥಿತಿಯನ್ನು ತಿಳಿಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಧರ್ಮಸ್ಥಳದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಅಹಿತಕರ ಘಟನೆ ನಡೆಯುತ್ತಿರುವುದು. ಜಿಲ್ಲಾಧಿಕಾರಿಗಳು ಸಿಆರ್ ಪಿಎಫ್ ಪೊಲೀಸರ ಬಳಿ ಇರುವ ಗನ್ ಗಳನ್ನು ಮುಟ್ಟುಗೋಲು ಹಾಕಲು ನಿರ್ಧರಿಸಿದ್ದಾರೆ. ನಾಲ್ಕು ಸಾವಿರಕ್ಕೂ ಹೆಚ್ಚಿನ ಸ್ಥಳೀಯರು ಜಮಾಯಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X