ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ, ಬಂಗಾರಪ್ಪ, ರಾಘು ಮತ ಚಲಾವಣೆ

By Staff
|
Google Oneindia Kannada News

ಬೆಂಗಳೂರು, ಏ. 30: ರಾಜ್ಯದ ಎರಡನೇ ಹಾಗೂ ಅಂತಿಮ ಮತದಾನ ಪ್ರಕ್ರಿಯೆ 11 ಲೋಕಸಭೆ ಕ್ಷೇತ್ರದಲ್ಲಿ ಆರಂಭವಾಗಿದೆ. ಇಂದು ಬೆಳಗ್ಗೆ 7 ರಿಂದ ಆರಂಭವಾದ ಮತದಾನ ಸಂಜೆ 5 ಗಂಟೆಗೆ ಕೊನೆಗೊಳ್ಳಲಿದೆ.

ಮೈಸೂರು ನಲ್ಲಿ ರಾಮದಾಸ್, ತನ್ವೀರ್ ಸೇಠ್, ಉಡುಪಿಯಲ್ಲಿ ಆಸ್ಕರ್ ಫರ್ನಾಂಡಿಸ್, ವಿಎಸ್ ಆಚಾರ್ಯ, ಪೇಜಾವರ ಶ್ರೀಗಳಿಂದ ಮತ ಚಲಾವಣೆ, ಶಿಕಾರಿಪುರದಲ್ಲಿ ಯಡಿಯೂರಪ್ಪ, ಬಿವೈ ರಾಘವೇಂದ್ರ ಸೇರಿದಂತೆ ಸಿಎಂ ಕುಟುಂಬದವರು, ಶಿವಮೊಗ್ಗದಲ್ಲಿ ಡಿಎಚ್ ಶಂಕರಮೂರ್ತಿ, ಮಂಗಳೂರಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತದಾನ ಮಾಡಿದರು. ಚಾಮುಂಡೇಶ್ವರಿ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ. ದಾವಣಗೆರೆಯಲ್ಲಿ ಮತಗಟ್ಟೆ ಬದಲಾವಣೆ. ಚಿಕ್ಕಮಗಳೂರಿನ 3 ಗ್ರಾಮಗಳಿಂದ ಮತದಾನ ಬಹಿಷ್ಕಾರ ಹಾಕಿದ್ದಾರೆ.

ಶೇಕಡಾವಾರು ಮತದಾನ ಮೊದಲ ಎರಡು ಗಂಟೆಗಳಲ್ಲಿ
ಮೈಸೂರು 8%
ಬಾಗಲಕೋಟೆ 8%
ದಾವಣಗೆರೆ 6%
ಹಾವೇರಿ 7%
ಉಡುಪಿ -ಚಿಕ್ಕಮಗಳೂರು 9%
ದಕ್ಷಿಣ ಕನ್ನಡ 9 %
ಮಂಡ್ಯ 12%
ಶಿವಮೊಗ್ಗ 9%
ದಕ್ಷಿಣ ಕನ್ನಡ 9%
ಚಾಮರಾಜ ನಗರ 7%
ಹಾಸನ 9%

ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ, ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ, ಚಿತ್ರನಟ ಅಂಬರೀಷ್, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಬಿ ವೈ ರಾಘವೇಂದ್ರ ಸೇರಿ 11 ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 153 ಅಭ್ಯರ್ಥಿಗಳ ಅಗ್ನಿಪರೀಕ್ಷೆ ಆರಂಭವಾಗಿದೆ.

ಚಾಮರಾಜನಗರ, ಹಾವೇರಿ, ಬಾಗಲಕೋಟೆ, ಮೈಸೂರು, ಮಂಡ್ಯ, ಹಾಸನ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ ಹಾಗೂ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಗುರುವಾರ ಮತದಾನ ನಡೆಯಲಿದೆ. ಒಟ್ಟು 15.5 ಕೋಟಿ ಮಂದಿ ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. ಅದರಲ್ಲಿ 7.67 ಕೋಟಿ ಮಹಿಳಾ ಮತದಾರರಿದ್ದಾರೆ. 11 ಕ್ಷೇತ್ರಗಳಲ್ಲಿ 18,426 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 2,951 ಅತಿಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದೆ. 55 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಸೇರಿ 50 ಸಾವಿರಕ್ಕೂ ಹೆಚ್ಚು ಸರ್ಕಾರಿ ಸಿಬ್ಬಂದಿ ಮತದಾನದ ಉಸ್ತುವಾರಿಯನ್ನು ವಹಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X