ಚಪ್ಪಲಿ ಎಸೆತಕ್ಕೆ ದೇವೇಗೌಡ ಕ್ಷಮೆ ಕೇಳಲಿ : ಸಿಎಂ

ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ ಎಂ ಸಿದ್ದೇಶ್ ಪರ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡ ನಂತಪ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್ ಬಲ ಕುಗ್ಗುತ್ತಿದೆ. ಸೋಲುವ ಹತಾಶೆಯಿಂದ ಅಪ್ಪ-ಮಕ್ಕಳು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಹಾಸನ ಖಾದಿ ಮಂಡಲಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮೂಲಕ ತಮ್ಮ ಮೇಲೆ ಹಲ್ಲೆ ಪ್ರಯತ್ನ ಮಾಡಿದ್ದಾರೆ. ಈ ಕೃತ್ಯದ ಹಿಂದಿರುವ ಆಪರಾಧಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಬೆಂಬಲ ಪಡೆದು ಅಧಿಕಾರ ಅನುಭವಿಸಿ ನಂತರ ಅಧಿಕಾರ ಬಿಟ್ಟುಕೊಡದೇ ವಂಚನೆ ಮಾಡಿದರು. ಆದರೆ, ಜನತೆ ಕೈಹಿಡಿದು ಅಧಿಕಾರ ನೀಡಿದ್ದಾರೆ. ಅದನ್ನು ಸಹಿಸಿಕೊಳ್ಳಲು ಅಪ್ಪ-ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ ಎಂದು ಲೇವಡಿ ಮಾಡಿದರು.
ಸಿ ಎಂ ವಿರುದ್ಧ ಕುಮಾರ್ ಆಕ್ರೋಶ
ಚೆನ್ನರಾಯಪಟ್ಟಣದಲ್ಲಿ ತಮ್ಮ ಮೇಲೆ ಚಪ್ಪಲಿ ಎಸೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ವಿರುದ್ಧ ಆರೋಪ ಮಾಡುತ್ತಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿದಂಬರಂ, ಮನಮೋಹನ್ ಸಿಂಗ್, ಅಡ್ವಾಣಿ ಮೇಲೆ ಚಪ್ಪಲಿ ಎಸೆದಿರುವುದಕ್ಕೂ ದೇವೇಗೌಡರ ಕುಟುಂಬವೇ ಕಾರಣ ಎಂದು ಹೇಳಲಿಲ್ಲವಲ್ಲ ಎಂದು ವ್ಯಂಗ್ಯವಾಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications