Get Updates
Get notified of breaking news, exclusive insights, and must-see stories!

ಮೋದಿ ಪಾತ್ರದ ಬಗ್ಗೆ ತನಿಖೆ ನಡೆಸಿ: ಕೋರ್ಟ್

SC orders probe into Modi's role in Gujarat riots
ನವದೆಹಲಿ, ಏ. 27 : 2002 ರಲ್ಲಿ ನಡೆದ ಗೋಧ್ರಾ ನರಮೇಧದ ಹಿಂದೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಪಾತ್ರ ಏನಿತ್ತು ಅನ್ನುವುದರ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಗೋಧ್ರಾ ಹತ್ಯಾಕಾಂಡದಲ್ಲಿ ಅಂದಿನ ಬಿಜೆಪಿ ಸರಕಾರದ ಸಂಪೂರ್ಣ ಕೈವಾಡವಿದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಆಡಳಿತ ಯಂತ್ರ ಗಲಭೆಗೆ ಪೂರ್ಣ ಪ್ರಮಾಣದ ಸಹಕಾರ ನೀಡಿದೆ. ಆದ್ದರಿಂದ ಪ್ರಕರಣದ ತನಿಖೆ ನಡೆಸಬೇಕು ಎಂದು ಸಮಾಜ ಸೇವಕಿ ತೀಸ್ತಾ ಸೆಟಲ್ವಾಡ್ ಹಾಗೂ ಮೃತ ಸಂಸದರೊಬ್ಬರ ಪತ್ನಿ ಸುಪ್ರಿಂಕೋರ್ಟ್ ಮೊರೆ ಹೋಗಿದ್ದರು.

ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಈ ಸಂಬಂಧ ಮೂರು ತಿಂಗಳಲೊಳಗೆ ಸಂಪೂರ್ಣ ವರದಿ ನೀಡುವಂತೆ ರಾಘವನ್ ಸಮಿತಿಗೆ ಆದೇಶ ನೀಡಿದೆ. ಅಲ್ಲದೇ ಮೋದಿ ಸರಕಾರದಲ್ಲಿರುವ ಕ್ಯಾಬಿನೆಟ್ ಸಚಿವರ, ಮೂರು ಶಾಸಕರು, ಮೂರು ಮಂದಿ ವಿಶ್ವ ಹಿಂದೂ ಪರಷತ್ ಕಾರ್ಯಕರ್ತರು ಮತ್ತು ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸುವ೦ತೆ ಆದೇಶ ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಮಾಜ ಸೇವಕಿ ತೀಸ್ತಾ ಸೆಟತ್ವಾಡ್, ಇದು ನಮಗೆ ಆರಂಭಿಕ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಏಳು ವರ್ಷಗಳ ನಂತರ ಮತ್ತೆ ವಿಚಾರಣೆ ನಡೆಸಲು ಮಾನ್ಯ ನ್ಯಾಯಾಲಯ ಅದೇಶ ನೀಡುವ ಮೂಲಕ ಮಾನವ ಹಕ್ಕುಗಳನ್ನು ಎತ್ತಿಹಿಡಿದಿದೆ. ಇದು ಗೋಧ್ರಾ ಹತ್ಯಾಕಾಂಡದಲ್ಲಿ ಮಡಿದವರಿಗೆ ಸದ್ಯದ ಜಯ ಎಂದು ಖಂಡಿತವಾಗಿ ಹೇಳಬಹುದು ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಗುಜರಾತ ಭೇಟಿ ನೀಡಿದ್ದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ಗುಜರಾತ ಐತಿಹಾಸಿಕವಾಗಿ ಭವ್ಯ ಇತಿಹಾಸವನ್ನು ಹೊಂದಿದೆ. ಆದರೆ, ಇಂದು ಕೋಮು ಶಕ್ತಿಗಳ ಕಪಿ ಮುಷ್ಠಿಯಲ್ಲಿ ನಲುಗತೊಡಗಿರುವುದು ದುರಂತ ಎಂದು ಟೀಕಿಸಿದ್ದರು. ಎನ್ ಡಿಎ ದೇಶ ವಿಭಜನೆಯಲ್ಲಿ ತೊಡಗಿದೆ. ಈ ಕಾರಣಕ್ಕಾಗಿ ಆ ಪಕ್ಷಕ್ಕೆ ಮತ ನೀಡಬೇಡಿ ಎಂದು ಪ್ರಧಾನಿ ಮತದಾರಲ್ಲಿ ಮನವಿ ಮಾಡಿಕೊಂಡಿದ್ದರು. 2002ರಲ್ಲಿ ಗೋಧ್ರಾ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 59 ಕರಸೇವಕರನ್ನು ಸಜೀವ ದಹನ ಮಾಡಲಾಗಿತ್ತು. ಆನಂತರ ಗುಜರಾತನಲ್ಲಿ ಭೀಕರ ಗಲಭೆಗಳು ಉಂಟಾದವು. ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆದವು. ಆ ಘಟನೆಯಲ್ಲಿ ಮೋದಿ ಸರಕಾರದ ಕೈವಾಡವಿರುವ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.

(ಏಜೆನ್ಸೀಸ್)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+