ಅಡ್ವಾಣಿಯಿಂದ ರಾಜಕೀಯ ಸನ್ಯಾಸ ಇಂಗಿತ?

ನರೇಂದ್ರ ಮೋದಿ ಮುಂದಿನ ಪ್ರದಾನಿ ಹುದ್ದೆಯ ಅಭ್ಯರ್ಥಿ ಎಂದು ಕೆಲವು ನಾಯಕರು ತಮ್ಮ ಅಭಿಪ್ರಾಯ ಮಂಡಿಸಿರುವ ಬೆನ್ನಲ್ಲೇ ಅಡ್ವಾಣಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವುದು ಉಪಾಪೋಹಕ್ಕೆ ಎಡೆಮಾಡಿಕೊಟ್ಟಿದೆ. ಔಟ್ ಲುಕ್ ಹಿಂದಿ ಆವೃತ್ತಿಗೆ ನೀಡಿರುವ ಸಂದರ್ಶನದಲ್ಲಿ ಅಡ್ವಾಣಿ ಈ ಸುಳಿವು ನೀಡಿದ್ದಾರೆ.
ಪಾಕಿಸ್ತಾನದ 2 ಪ್ರಮುಖ ಪತ್ರಿಕೆಗಳು ತಮ್ಮ ವೆಬ್ ಸೈಟ್ ನಲ್ಲಿ ಪ್ರಧಾನಿ ಹುದ್ದೆಗೆ ಅಡ್ವಾಣಿ ಎಂಬ ಜಾಹೀರಾತು ಪ್ರಕಟಿಸಿದೆ. ಆದರೆ, ತಕ್ಷಣದಲ್ಲೇ ಈ ವೆಬ್ ಸೈಟ್ ಗಳು ಈ ಜಾಹೀರಾತನ್ನು ತೆಗೆದುಹಾಕಿವೆ. ಜಾಹೀರಾತನ್ನು ಪ್ರಕಟಿಸಿವಂತೆ ನಾವು ಕೇಳಿಕೊಂಡಿಲ್ಲ. ಅವರು ಅಂತರ್ಜಾಲದಿಂದ ಜಾಹೀರಾತು ತೆಗೆದುಕೊಂಡು ಜಾಹೀರಾತು ಪ್ರಕಟಿಸಿದ್ದರೆ ಅದಕ್ಕೆ ನಾವೇನೂ ಮಾಡಲಾಗದು. ಇಂಥ ಕೆಲಸಗಳನ್ನು ಬಿಟ್ಟು ಪಾಕಿಸ್ತಾನವನ್ನು ತಾಲಿಬಾನಿಗಳು ಹಿಡಿತಕ್ಕೆ ತೆಗೆದುಕೊಂಡರೆ ಏನಾಗಬಹುದಗು ಎಂಬುದರ ಬಗ್ಗೆ ಅಲ್ಲಿನ ಮಾಧ್ಯಮ ತಲೆಕೆಡಿಸಿಕೊಳ್ಳಿ ಎಂದು ಬಿಜೆಪಿ ವಕ್ತಾರ ರವಿ ಶಂಕರ ಪ್ರಸಾದ ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications