ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿಲ್ ಅಂಬಾನಿ ಹತ್ಯೆಗೆ ಸಂಚು ?

By Staff
|
Google Oneindia Kannada News

Anil ambani
ಮುಂಬೈ, ಏ. 25 : ಅಣ್ಣ ತಮ್ಮಂದಿರ ಜಗಳ ಬೀದಿಗೆ ಬಂದ ಬೆನ್ನಲ್ಲೇ ರಿಲೈಯನ್ಸ್ ಇಂಡಸ್ಟ್ರೀಸ್ ಇಬ್ಭಾಗ ಮಾಡಿ ತನ್ನದೇ ಹೊಸ ಉದ್ಯಮ ಕಟ್ಟಿಕೊಂಡಿರುವ ಅನಿಲ್ ಅಂಬಾನಿ ಅವರ ಹತ್ಯೆ ಮಾಡುವ ಸಂಚೊಂದು ಬೆಳಕಿಗೆ ಬಂದಿದೆ. ಅನಿಲ್ ಅಂಬಾನಿ ಶುಕ್ರವಾರ ಪ್ರಯಾಣಿಸುತ್ತಿದ್ದ ಕ್ಯಾಪ್ಟರ್ ನ ಇಂಧನ ಟ್ಯಾಂಕ್ ನಲ್ಲಿ ಕಲ್ಲು ಮತ್ತು ಮರಳು ಪತ್ತೆಯಾಗಿದ್ದು, ಕ್ಯಾಪ್ಟರ್ ಅನ್ನು ಆಗಸದಲ್ಲೇ ಪತನಗೊಳಿಸುವ ಸಂಚು ಇದಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು 4 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಘಟನೆ ಕುರಿತು ಆಘಾತ ವ್ಯಕ್ತಪಡಿಸಿರುವ ಅನಿಲ್ ಅಂಬಾನಿ ಒಡೆತನದ ಎಡಿಎಜಿ ಕಂಪನಿ ಉದ್ಯಮದಲ್ಲಿನ ಹಗೆತನವೇ ಇದಕ್ಕೆ ಕಾರಣ ಎಂದು ಆರೋಪಿಸಿದೆ. ಪ್ರಕರಣದ ಎಡಿಎಜಿ ಹಾಗೂ ಕ್ಯಾಪ್ಟರ್ ನಿರ್ವಹಣೆಯ ಹೊಣೆ ಹೊತ್ತಿದ್ದ ಏರ್ ವರ್ಕ್ಸ್ ಸಂಸ್ಥೆ ದೂರು ದಾಖಲಿಸಿದೆ. ಅನಿಲ್ ಅಂಬಾನಿ 13 ಸೀಟು ಸಾಮರ್ಥ್ಯದ ಬೆಲ್ 412 ಎಂಬ ಕ್ಯಾಪ್ಟರ್ ಹೊಂದಿದ್ದಾರೆ. ಅದು ಅವರ ಸ್ವಂತದ್ದು, ಇದರ ನಿರ್ವಹಣೆಯನ್ನು ಮುಂಬೈನ ಏರ್ ವರ್ಕ್ಸ್ ಸಂಸ್ಥೆ ಹೊತ್ತಿದೆ. ಈ ಕ್ಯಾಪ್ಟರ್ ನಲ್ಲಿ ಅನಿಲ್ ಪ್ರತಿ ಗುರುವಾರ, ಶುಕ್ರವಾರ ಹಾಗೂ ಶನಿವಾರ ಮುಂಬೈ ಹೊರವಲಯದ ನಾವಿ ಮುಂಬೈನಲ್ಲಿರುವ ನಾಲೆಡ್ಜ್ ಸಿಟಿಗೆ ಅಧಿಕಾರಿಗಳೊಂದಿಗೆ ತೆರಳುತ್ತಾರೆ.

ಶುಕ್ರವಾರ ಎಂಗಿನಂತೆ ಅನಿಲ್ ಅಂಬಾನಿ ಹೋಗಬೇಕಿದ್ದರಿಂದ ಮುಂಬೈ ವಿಮಾನ ನಿಲ್ದಾಣದಲ್ಲಿದ್ದ ಕ್ಯಾಪ್ಟರ್ ಅನ್ನು ಅಣಿಗೊಳಿಸಲು ಸೂಚಿಸಲಾಗಿದೆ. ಆದರೆ, ಗುರುವಾರ ಸಂಜೆ ಕ್ಯಾಪ್ಟರ್ ಅನ್ನು ಏರ್ ವರ್ಕ್ಸ್ ಸಂಸ್ಥೆಯ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದಾಗ ಅದರಲ ಇಂಧನ ಟ್ಯಾಂಕ್ ನಲ್ಲಿ ಕೆಂಪು ಮರಳು ಮತ್ತು ಕಲ್ಲು ಪತ್ತೆಯಾಗಿದೆ. ಈ ಕೆಂಪು ಮರಳು ಇಂಧನದ ಜೊತೆ ಸೇರಿದಾಕ್ಷಣ ಗಟ್ಟಿಯಾಗುತ್ತದೆ, ಒಂದು ವೇಳೆ ಕ್ಯಾಪ್ಟರ್ ಇದೇ ಸ್ಥಿತಿಯಲ್ಲಿ ಹಾರಾಟ ನಡೆಸಿದ್ದರೆ ಇಂಧನ ಟ್ಯಾಂಕ್ ನಲ್ಲಿದ್ದ ಮರಳು ಎಂಜಿನ್ ಗೆ ಹೋಗಿ ಕ್ಯಾಪ್ಟರ್ ಆಗಸದಲ್ಲೇ ಅಪಘಾತಕ್ಕೀಡಾಗುವ ಸಾಧ್ಯತೆ ಹೆಚ್ಚಾಗಿತ್ತು ಎಂದು ಮೂಲಗಳು ತಿಳಿಸಿವೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X