ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂ.ದಕ್ಷಿಣದ 'ಪ್ರಜ್ಞಾವಂತ' ಮತದಾರರೆಲ್ಲ ಎಲ್ಲಿ?

By Staff
|
Google Oneindia Kannada News

ಬೆಂಗಳೂರು, ಏ. 23 : ನಗರ ಪ್ರದೇಶಗಳಲ್ಲಿ ಪ್ರಜ್ಞಾವಂತ ಮತದಾರರು ಮತ ಚಲಾಯಿಸುವುದಿಲ್ಲ ಎನ್ನುವ ಮಾತು ಮತ್ತೊಮ್ಮೆ ಸಾಬೀತಾಗಿದೆ. ರಾಜ್ಯದ ಅತ್ಯಂತ ಸುಶಿಕ್ಷಿತ ಕ್ಷೇತ್ರ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ 12 ಗಂಟೆ ವೇಳೆಗೆ ಮತದಾನ ಆಗಿದ್ದು ಶೇ. 15 ಮಾತ್ರ. ಪತ್ರಿಕೆಗಳು, ವಾಹಿನಿಗಳು, ಸರ್ಕಾರ ಒಟ್ಟಾಗಿ ಸೇರಿ ಏನೇ ಬಡಕೊಂಡರೂ ವಿದ್ಯಾವಂತ ಮತದಾರ ಮಾತ್ರ ಮನೆ ಬಿಟ್ಟು ಕದಲುತ್ತಿಲ್ಲ.

ಘಟಾನುಘಟಿಗಳ ಸ್ಪರ್ಧೆಯಿಂದಾಗಿ ಇಡೀ ರಾಷ್ಟ್ರದ ಗಮನ ಸೆಳೆದಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಕೃಷ್ಣ ಭೈರೇಗೌಡ, ಬಿಜೆಪಿಯಿಂದ ಅನಂತ ಕುಮಾರ್, ಜೆಡಿಎಸ್ ಪರವಾಗಿ ಪ್ರೊ.ರಾಧಾಕೃಷ್ಣ, ಪಕ್ಷೇತರನಾಗಿ ಕ್ಯಾಪ್ಟನ್ ಗೋಪಿನಾಥ್ ಮತ್ತು ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಕಣದಲ್ಲಿದ್ದಾರೆ. ಈ ಐವರೂ ಭರ್ಜರಿಯಾಗಿ ಮತಯಾಚಿಸಿದ್ದರೂ ಮಧ್ಯಾಹ್ನದವರೆಗೆ ಹೆಚ್ಚಿನ ಜನ ಮತಗಟ್ಟೆಯತ್ತ ಬರದಿರುವುದು ಆಶ್ಚರ್ಯ ತಂದಿದೆ. ಮಧ್ಯಾಹ್ನದ ನಂತರ ಸಂಖ್ಯೆ ವೃದ್ಧಿಸಬಹುದೆಂದು ನಿರೀಕ್ಷಿಸಲಾಗಿದೆ.

ಬೀದರ್ ವಿಧಾನಸಭೆ ಕ್ಷೇತ್ರದ ಮರುಮತದಾನದಲ್ಲಿ ಶೇ. 25ರಷ್ಟು ಮತದಾನವಾಗಿದೆ. ಮತದಾನದ ದೃಷ್ಟಿಯಿಂದ ಉತ್ತರ ಕರ್ನಾಟಕ ಮಂದಿ ಭಾರಿ ಹುರುಪು-ಹುಮ್ಮಸ್ಸಿನಿಂದ ಮತ ಚಲಾಯಿಸುತ್ತಿರುವುದು ಕಂಡುಬಂದಿದೆ. ಬೆಂಗಳೂರು ಉತ್ತರದಲ್ಲಿ ಸದಾಶಿವನಗರದಲ್ಲಿ ಹಕ್ಕು ಚಲಾಯಿಸಿದ ಲೋಕಾಯುಕ್ತ ನ್ಯಾಯಮೂರ್ತಿ ಎಂ ಸಂತೋಷ ಹೆಗ್ಡೆ, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಎಲ್ಲರೂ ಮತದಾನ ಮಾಡಲೇಬೇಕು ಎಂದು ಸಲಹೆ ನೀಡಿದರು.

ಮಧ್ಯಾಹ್ನ 12ರವರೆಗೆ ವಿವಿಧೆಡೆ ಆಗಿರುವ ಮತದಾನ ಶೇಕಡವಾರು ಅಂಕಿಅಂಶ

ಬೆಂಗಳೂರು ಗ್ರಾಮಾಂತರ - ಶೇ. 16
ಕೋಲಾರ - ಶೇ. 19
ಬೆಳಗಾವಿ - ಶೇ. 14
ಚಿತ್ರದುರ್ಗ - ಶೇ. 13
ತುಮಕೂರು - ಶೇ. 16
ಚಿಕ್ಕಮಗಳೂರು - ಶೇ. 20

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X