ವರುಣ್ ಗಾಂಧಿ ಏಪ್ರಿಲ್ 21 ರಂದು ನಾಮಪತ್ರ
ಪಿಲಿಭಿತ್, ಏ. 21 : ಭಾರತೀಯ ಜನತಾ ಪಕ್ಷದ ವಿವಾದಾತ್ಮಕ ಯುವಮುಖಂಡ ವರುಣ್ ಗಾಂಧಿ ಇಂದು ಪಿಲಿಭಿತ್ ಲೋಕಸಭೆ ಕ್ಷೇತ್ರದಿಂದ ಇಂದು ನಾಮಪತ್ರ ಸಲ್ಲಿಸುವ ಸಾದ್ಯತೆಗಳಿವೆ. ವರುಣ್ ಅವರೊಂದಿಗೆ ಬಿಜೆಪಿ ಹಿರಿಯ ನಾಯಕರು ಪಾಲ್ಗೂಳ್ಳುವ ಸಾಧ್ಯತೆ ಇದೆ.
ಕಳೆದ ತಿಂಗಳು ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿ ಜೈಲು ಸೇರಿದ್ದ ವರುಣ್ ನಂತರ ಪೆರೋಲ್ ಮೂಲಕ ಬಿಡುಗಡೆಯಾಗಿದ್ದರು. ಪ್ರಚೋದನಕಾರಿ ಭಾಷಣ ಮಾಡುವುದಿಲ್ಲ ಎಂದು ಸುಪ್ರಿಂಕೋರ್ಟ್ ಗೆ ವರುಣ್ ಗಾಂಧಿ ಮುಚ್ಚಳಿಕೆ ಬರೆದುರಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವರುಣ್ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದೆ.
ಅಲ್ಲದೇ ಇನ್ನೊಂದು ಸಲ ವಿವಾದಕ್ಕೆ ಸಿಲುಕದಿರಲು ಬಿಜೆಪಿ ನಿರ್ಧರಿಸಿದ್ದು, ವರುಣ್ ಜೊತೆಗೆ ಅನೇಕ ಹಿರಿಯ ಮುಖಂಡರು ಇರುತ್ತಾರೆ. ವರುಣ್ ಗಾಂಧಿ ಬಿಡುಗಡೆಯಿಂದ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ್ದರು. ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಕಾರಿ ಹೇಳಿಕೆ ಸಂಬಂಧಿಸಿದಂತೆ ವರುಣ್ ವಿರುದ್ದ ಉತ್ತರ ಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications