ಜಾಫರ್ ಷರೀಫ್ ಗೆ ಪುತ್ರ ವಿಯೋಗ
ಬೆಂಗಳೂರು, ಏ. 20 : ದೀರ್ಘ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಸಿ. ಕೆ ಜಾಫರ್ ಷರೀಫ್ ಅವರ ಪುತ್ರ ಅಬ್ದುಲ್ ಕರೀಂ ಸೋಮವಾರ ನಿಧನ ಹೊಂದಿದರು.
ಕಿಡ್ನಿ ತೊಂದರೆಯಿಂದ ಬಳುಲುತ್ತಿದ್ದ ಕರೀಂ, ಕೆಲವು ತಿಂಗಳಿಂದ ನಗರದ ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ತಂದೆ- ತಾಯಿ ಸೇರಿದಂತೆ ಅಪಾರ ಬಂದು ಬಳಗವನ್ನು ಕರೀಂ ಅಗಲಿದ್ದಾರೆ. ಕರೀಂ ನಿಧನಕ್ಕೆ ಕಾಂಗ್ರೆಸ್ ನಾಯಕರು ಶೋಕ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications