ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ ಗಾಂಧಿ ಹೇಳಿಕೆಗೆ ಅಡ್ವಾಣಿ ತೀವ್ರ ವಿರೋಧ

By Staff
|
Google Oneindia Kannada News

Sonia Gandhi must apologise for attacking BJP: Advani
ತಿರುವನಂತಪುರಂ, ಏ. 13 : ವಿದೇಶಿಯ ಭಯೋತ್ಪಾದಕರಿಗಿಂತ ದೇಶಿಯ ಭಯೋತ್ಪಾದಕರಿಂದ (ಬಿಜೆಪಿ, ಆರ್ಎಸ್ಎಸ್) ದೇಶದ ಸಮಗ್ರತೆ ಮತ್ತು ಏಕತೆಗೆ ಧಕ್ಕೆ ಇದೆ ಎಂದು ಚುನಾವಣೆ ಪ್ರಚಾರ ಸಭೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಾಡಿರುವ ಉಗ್ರ ಆರೋಪಕ್ಕೆ ಬಿಜೆಪಿ ಹಿರಿಯ ನಾಯಕ ಹಾಗೂ ಪ್ರಧಾನಮಂತ್ರಿ ಅಭ್ಯರ್ಥಿ ಎಲ್ ಕೆ ಅಡ್ವಾಣಿ ಕೆಂಡಾಮಂಡಲರಾಗಿದ್ದಾರೆ. ಈ ಕೂಡಲೇ ಸೋನಿಯಾ ಗಾಂಧಿ ಕ್ಷಮೆಯಾಚಿಸಬೇಕು ಎಂದು ಅಡ್ವಾಣಿ ಆಗ್ರಹಿಸಿದ್ದಾರೆ.

ಜಾರ್ಖಂಡ್ ನಲ್ಲಿ ಚುನಾವಣೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿರುವ ಅಡ್ವಾಣಿ, ಸೋನಿಯಾ ಗಾಂಧಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಿಂದ ದೇಶದ ಭದ್ರತೆ, ಸಮಗ್ರತೆ ಹಾಗೂ ಏಕತೆಗೆ ಅಪಾಯವಿದೆಯೇ ? ನಾವು ದೇಶಿಯ ಭಯೋತ್ಪಾದಕರೇ ? ಎಂದು ಪ್ರಶ್ನಿಸಿದರು. ಸೋನಿಯಾ ಗಾಂಧಿ ಬಿಜೆಪಿ ಪಕ್ಷ ಹಾಗೂ ಆರ್ ಎಸ್ಎಸ್ ವಿರುದ್ಧ ನೀಡಿರುವ ಗಂಭೀರ ಆರೋಪಕ್ಕೆ ಸ್ಪಷ್ಟ ಕಾರಣ ನೀಡಬೇಕು. ತಪ್ಪಿದ್ದಲ್ಲಿ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

1962 ಮತ್ತು 65 ರಲ್ಲಿ ದೇಶದ ಮೇಲೆ ಯುದ್ಧವಾದಾಗ ಸಂಘ ವರಿವಾರದ ಕಾರ್ಯ ಶ್ಲಾಘನೀಯ. ಇದನ್ನು ಅಂದಿನ ನಾಯಕರಾದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಕೂಡಾ ಮುಕ್ತ ಕಂಠದಿಂದ ಆರ್ ಎಸ್ ಎಸ್ ಕಾರ್ಯವನ್ನು ಪ್ರಶಂಸಿದ್ದಾರೆ. ಕಾಂಗ್ರೆಸ್ ಪಕ್ಷದ ಇತಿಹಾಸವನ್ನು ಸೋನಿಯಾ ಗಾಂಧಿ ಮೊದಲು ತಿಳಿದುಕೊಳ್ಳಲಿ, ಆರ್ ಎಸ್ ಎಸ್ ಹಾಗೂ ಬಿಜೆಪಿ ವಿರುದ್ಧ ಆರೋಪ ಮಾಡಿರುವುದು ಅಕ್ಷ್ಯಮ್ಯ. ಈ ಕೂಡಲೇ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ, ಅವರ ವಿರುದ್ಧ ಆಂದೋಲನ ನಡೆಸಲಾಗುವುದು ಎಂದು ಅಡ್ವಾಣಿ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X