108819ಸಿದ್ದರಾಮಯ್ಯಕೆಎಸ್ ಅಶ್ವತ್ಥ್ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನ/news/2009/01/14/kannada-actor-ks-ashwath-felicitated-in-bengaluru.htmlಬೆಂಗಳೂರು, ಜ. 14 : ಕನ್ನಡ ಚಿತ್ರರಂಗದ ಹಿರಿಯ ನಟ ಕೆ.ಎಸ್ ಅಶ್ವತ್ಥ್ ಅವರನ್ನು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತಂಜಲಿ ಯೋಗಾಶ್ರಮ ಟ್ರಸ್ಟ್ ನ ಬೆಳ್ಳಿಹಬ್ಬ ಆಚರಣೆಯ ಸಂದರ್ಭದಲ್ಲಿ ಸನ್ಮಾನಿಸಿದರು. ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಯೋಗಿ ಮತ್ತು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವ್ ಸಿಂಗ್ ಅವರು ಉಪಸ್ಥಿತರಿದ್ದರು. ಚಿತ್ರ : ಎಂ.ಎಂ. 34065http://kannada.oneindia.com/img/2009/01/14-ks-ashwath-felicitation.jpg108819ಸಿದ್ದರಾಮಯ್ಯನನ್ನ ತಲೆ ಕತ್ತರಿಸಿ ಸಿದ್ದರಾಮಯ್ಯ ಸವಾಲು/news/2009/04/08/siddaramaiah-criticises-hindutva-and-bjp.htmlಮೈಸೂರು, ಏ. 8 : ನಾನು ಹಿಂದುತ್ವದ ವಿರೋಧಿಸುತ್ತೇನೆ. ನನ್ನ ತಲೆಯನ್ನು ಕಡಿಯುತ್ತೀರಾ ? ಮಂಗಳವಾರ ನಗರದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಹೀಗೆ ಪ್ರಶ್ನಿಸಿದವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ. ಹಿಂದೂತ್ವ ವಿರೋಧಿಸುವವರ ಕೈ, ತಲೆ ಕತ್ತರಿಸು, ತಿಥಿ ಮಾಡಬೇಕಾಗುತ್ತದೆ ಎಂದು ಹೇಳಿಕೆಗೆ ಸಿದ್ದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಾನು ಹಿಂದುತ್ವ ವಿರೋಧಿಸಿದರೆ 35802http://kannada.oneindia.com/img/2009/04/08-siddaramaiah2e.jpg108819ಸಿದ್ದರಾಮಯ್ಯಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?/news/2009/04/11/siddaramaiah-may-appoint-for-kharges-post.html*ಮೃತ್ಯುಂಜಯ ಕಲ್ಮಠಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ 35886http://kannada.oneindia.com/img/2009/04/11-siddaramaiah2e.jpg108819ಸಿದ್ದರಾಮಯ್ಯಪ್ರತಿಪಕ್ಷ ಸ್ಥಾನ ಖರ್ಗೆ ರಾಜೀನಾಮೆ ನೀಡಿಲ್ಲ, ಆರ್ ವಿ/news/2009/04/13/kharge-not-to-resign-his-post-says-deshpande.htmlಕೊಪ್ಪಳ, ಏ. 13 : ಮಹತ್ವದ ವಿದ್ಯಮಾನವೊಂದರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸ್ಥಾನ ಲಭಿಸಲಿದೆ ಎನ್ನುವ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಕೆಪಿಪಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ 35905http://kannada.oneindia.com/img/2009/04/13-kharge2.jpg108819ಸಿದ್ದರಾಮಯ್ಯಜನಾರ್ದನರೆಡ್ಡಿ, ಎಚ್ಡಿಕೆ ಜೈಲಿಗೆ : ಸಿದ್ದರಾಮಯ್ಯ/news/2009/04/14/siddu-breaks-silence-targets-reddy-hdk.htmlಬಿಜಾಪುರ, ಏ. 14 : ಈವರೆಗೂ ಜೈಲಿಗೆ ಕಳಿಸುತ್ತೇವೆ, ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಸಚಿವ ಜನಾರ್ದನರೆಡ್ಡಿ ಹಾಗೂ ಎಚ್ ಡಿ ಕುಮಾರಸ್ವಾಮಿ ಧಮಕಿ ಹಾಕುತ್ತಿದ್ದರು. ಇದೀಗ ಕಾಂಗ್ರೆಸ್ ಕೂಡಾ ಧಮಕಿ ಹಾಕಲು ಶುರು ಮಾಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಜನಾರ್ದನರೆಡ್ಡಿಗೆ ಕೈಗೆ ಕೋಳ ತೋಡಿಸುವುದಾಗಿ 35927http://kannada.oneindia.com/img/2009/04/14-siddaramaiah3.jpg211274ಸೋನಿಯಾಗಾಂಧಿಸೋನಿಯಾಗಾಂಧಿಯಾಗಿ ಕತ್ರೀನಾ ಕೈಫ್/movies/bollywood/2009/02/17-katrina-kaif-to-play-sonia-gandhi.htmlಬಿಕಿನಿ ಬೇಬ್ ಕತ್ರೀನಾ ಕೈಫ್ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿರುವುದಂತೂ ನಿಜ. ಸಲ್ಲು ಮಿಯಾ ಜತೆ ಪ್ರೀತಿಯನ್ನು ತಣ್ಣಗೆ ಸಹಿಸಿಕೊಂಡಿರುವ ಇಂಗ್ಲೀಷ್ ಮೇಡಂ, ಸದ್ಯ ಬಾಲಿವುಡ್ ನ ಬಹು ಬೇಡಿಕೆಯ ನಟಿ. ಅಕ್ಷಯ್ ಕುಮಾರ್ ಜೋಡಿಯಲ್ಲಿ ಸಾಲುಸಾಲು ಹಿಟ್ ಚಿತ್ರಗಳನ್ನು ನೀಡಿದ ನಂತರ, ಸದಭಿರುಚಿಯ ಚಿತ್ರಗಳತ್ತ ಮುಖಮಾಡಿದ್ದಾರೆ. ಅರ್ಥಪೂರ್ಣ ಚಿತ್ರಗಳ ನಿರ್ದೇಶಕ ಪ್ರಕಾಶ್ ಝಾ ಅವರ ಮುಂದಿನ 34705http://kannada.oneindia.com/img/2009/02/17-katrina-kaif-sonia-gandhi2.jpg211274ಸೋನಿಯಾಗಾಂಧಿಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?/news/2009/04/11/siddaramaiah-may-appoint-for-kharges-post.html*ಮೃತ್ಯುಂಜಯ ಕಲ್ಮಠಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ 35886http://kannada.oneindia.com/img/2009/04/11-siddaramaiah2e.jpg211274ಸೋನಿಯಾಗಾಂಧಿಸೋನಿಯಾ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ/news/2009/04/17/sureshkumar-charges-sonia-for-her-slave-remark.htmlತುಮಕೂರು, ಏ. 17 : ಎಲ್ ಕೆ ಅಡ್ವಾಣಿ ಅವರು ತತ್ವ ಸಿದ್ಧಾಂತಕ್ಕಾಗಿ ಗುಲಾಮರಾಗಿದ್ದಾರೆ ಎಂದು ನಾವು ಒಪ್ಪುತ್ತೇವೆ. ಆದರೆ, ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿ ಅವರ ಗುಲಾಮರಾಗಿದ್ದಾರೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆಯೇ ? ಎಂದು ಸಚಿವ ಎಸ್ ಸುರೇಶಕುಮಾರ್ ಪ್ರಶ್ನಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಡ್ವಾಣಿ ಅವರಿಗೆ ಆರ್ಎಸ್ಎಸ್ ಪ್ರೇರಣೆ ಮತ್ತು ಸ್ಫೂರ್ತಿಯಾಗಿದೆ. 36014http://kannada.oneindia.com/img/2009/04/17-suresh-kumar2e.jpg211274ಸೋನಿಯಾಗಾಂಧಿಸೋನಿಯಾ ಭೇಟಿಯ ಮರ್ಮ ಬಿಟ್ಟುಕೊಟ್ಟ ಎಚ್ಡಿಕೆ!/news/2009/05/17/jds-may-consider-supporting-upa.htmlಬೆಂಗಳೂರು, ಮೇ.17: ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಆಹ್ವಾನ ನೀಡಿದ್ದು ಯುಪಿಎ ಒಕ್ಕೂಟ ಸೇರುವಂತೆ ಕರೆ ನೀಡಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ನೊಂದಿಗೆ ಚರ್ಚಿಸಲು ಕುಮಾರಸ್ವಾಮಿ ಭಾನುವಾರ ಸಂಜೆ ದೆಹಲಿಗೆ ದೌಡಾಯಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ದೇವೇಗೌಡ ಅವರ ಮನವೊಲಿಸುವ 36710http://kannada.oneindia.com/img/2009/05/17-hd-kumaraswamy2e.jpg211274ಸೋನಿಯಾಗಾಂಧಿಯುಪಿಎಗೆ ಸಂಪುಟ ವಿಸ್ತರಣೆ; ನಿರೀಕ್ಷೆಯಲ್ಲಿ ಖರ್ಗೆ/news/2009/05/25/mallikarjun-kharge-hopes-for-cabinet-berth.htmlನವದೆಹಲಿ, ಮೇ. 25: ಯುಪಿಎ ಸರ್ಕಾರದ ಸಚಿವ ಸಂಪುಟ ಮಂಗಳವಾರ ವಿಸ್ತರಣೆಗೊಳ್ಳುವ ನಿರೀಕ್ಷೆಯಿದೆ ಖಾತೆ ಹಂಚಿಕೆ ಹಾಗೂ ಸಂಪುಟ ವಿಸ್ತರಣೆ ಸಂಬಂಧ ಮಹತ್ವದ ಮಾತುಕತೆ ನಡೆಸಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ.ಮೊದಲ ಕಂತಿನಲ್ಲಿ ಅವಕಾಶ ತಪ್ಪಿಸಿಕೊಂಡ ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ ಎಚ್ ಮುನಿಯಪ್ಪ 36866http://kannada.oneindia.com/img/2009/05/25-kharge3e.jpg108818ಕೆಪಿಸಿಸಿಗಾಡಫಾದರ್ ಡಿಕೆಶಿ ವಿರುದ್ಧವೇ ತಿರುಗಿ ಬಿದ್ದ ತೇಜಸ್ವಿನಿ /news/2009/03/04/dk-shivakumar-directly-helps-bjps-operation-kamala.htmlಬೆಂಗಳೂರು, ಮಾ. 4 : ಲೋಕಸಭೆ ಚುನಾವಣೆಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಒಡೆದ ಮನೆಯಂತಾಗಿರುವ ರಾಜ್ಯ ಕಾಂಗ್ರೆಸ್ ಮುಖಂಡರ ಭಿನ್ನಾಭಿಪ್ರಾಯಗಳು ಭುಗಿಲೆದ್ದಿವೆ. ಸಂಸದೆ ತೇಜಸ್ವಿನಿ ಅವರು ಕಾಂಗ್ರೆಸ್ ಕಾರ್ಯಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿರುದ್ಧ ಮನಬಂದಂತೆ ಟೀಕಿಸಿದರಲ್ಲದೆ, ಬಿಜೆಪಿ ನಡೆಸಿದ ಆಪರೇಷನ್ ಕಮಲಕ್ಕೆ ಡಿ ಕೆ ಶಿವಕುಮಾರ್ ಅವರ ನೇರ ಕೈವಾಡವಿದೆ ಎಂದು ಗಂಭೀರ ಆರೋಪ 34990http://kannada.oneindia.com/img/2009/03/04-tejesvini-gowda1.jpg108818ಕೆಪಿಸಿಸಿತೇಜಸ್ವಿನಿ ಆರೋಪಕ್ಕೆ ಡಿಕೆಶಿ ಕಿಡಿ ಕಿಡಿ/news/2009/03/05/tejaswini-is-mentally-imbalance-dk-shivakumar.htmlಬೆಂಗಳೂರು, ಮಾ. 5 : ಬಿಜೆಪಿ ನಡೆಸಿದ ಆಪರೇಷನ್ ಕಮಲದ ರೂವಾರಿ ಡಿಕೆ ಶಿವಕುಮಾರ್ ಎಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿರುವ ಸಂಸದೆ ತೇಜಸ್ವಿನಿಗೌಡ ಅವರ ಆರೋಗ್ಯ ಕೈಕೊಟ್ಟಿದೆ. ಹೀಗಾಗಿ ಅವರು ಬೇಕಾಬಿಟ್ಟಿಯಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಯಾವ ರೀತಿಯ ಆರೋಗ್ಯ ಕೈಕೊಟ್ಟಿದೆ ಎಂದು ತಪಾಸಣೆ ಮಾಡಿಸಬೇಕಾಗಿದೆ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. 34996http://kannada.oneindia.com/img/2009/03/05-dkshi2.jpg108818ಕೆಪಿಸಿಸಿಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?/news/2009/04/11/siddaramaiah-may-appoint-for-kharges-post.html*ಮೃತ್ಯುಂಜಯ ಕಲ್ಮಠಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ 35886http://kannada.oneindia.com/img/2009/04/11-siddaramaiah2e.jpg108818ಕೆಪಿಸಿಸಿಕಾಂಗ್ರೆಸ್ ಸೋತಿದ್ದು ಏಕೆ ? ಸೋನಿಯಾ/news/2009/05/24/no-one-will-be-blamed-for-party-debacle-deshpande.htmlಬೆಂಗಳೂರು, ಮೇ. 24 : ಲೋಕಸಭೆ ಚುನಾವಣೆಯಲ್ಲಿ ದೇಶದ್ಯಾಂತ ಜಯಭೇರಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಏಕೆ ದಯನೀಯ ಸ್ಥಿತಿ ತಲುಪಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದೆ. ಸೋಲಿಗೆ ಸೂಕ್ತ ಕಾರಣಗಳನ್ನು ನೀಡಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಪಿಸಿಸಿ ನಾಯಕರನ್ನು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೆಪಿಸಿಸಿ ಅಧ್ಯಕ್ಷೆ ಆರ್ 36857http://kannada.oneindia.com/img/2009/05/24-deshpande-rv1e.jpg108818ಕೆಪಿಸಿಸಿಸಿದ್ದರಾಮಯ್ಯ ಕನಸು ನನಸಾಗುವ ಕಾಲ ಬಂದಿದೆ/news/2009/06/06/siddaramaiah-dream-may-come-true.htmlಬೆಂಗಳೂರು, ಜೂ.6: ವಿರೋಧ ಪಕ್ಷದ ನಾಯಕನ ಹುದ್ದೆಗೆ ಹಲವಾರು ದಿನಗಳಿಂದ ತಹತಹಿಸುತ್ತಿದ್ದ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಡೆಗೂ ಕಾಲ ಕೂಡಿ ಬಂದಿದೆ. ಭಾನುವಾರ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದು ಆಯ್ಕೆಯಾಗಲಿದ್ದಾರೆ. ಹೈಕಮಾಂಡ್ ಭರವಸೆಯಂತೆ ಮಲ್ಲಿಕಾರ್ಜುನ ಖರ್ಗೆ ಅವರಿಂದ ತೆರವಾಗಿರುವ ಸ್ಥಾನಕ್ಕೆ ಸಿದ್ದುರನ್ನು ಆಯ್ಕೆ ಮಾಡುವುದು ಬಹುತೇಕ ಖಚಿತವಾಗಿದೆ. ಆದರೆ ಕಾಂಗ್ರೆಸ್ 37168http://kannada.oneindia.com/img/2009/06/06-siddaramaiah3.jpgnews"> ಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್? | Siddaramaiah | Congress |Sonia Gandhi | Lok Sabha Election 2009 | Mallikarjun Kharge - ಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್? - Kannada Oneindia

ಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?

*ಮೃತ್ಯುಂಜಯ ಕಲ್ಮಠ

Siddaramaiah may appoint for Kharge's post
ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ ಹೈಕಮಾಂಡ್ ಡೊಗ್ಗಿದೆ. ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜೀನಾಮೆ ಪಡೆದುಕೊಂಡಿರುವ ಸುದ್ದಿಗಳು ನವದೆಹಲಿ ಕಾಂಗ್ರೆಸ್ ಕಚೇರಿಯಿಂದ ದಂಡಿದಂಡಿಯಾಗಿ ಬಂದಿವೆ.

ಗುಲ್ಬರ್ಗಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಒಲ್ಲದ ಮನಸ್ಸಿನಿಂದ ಪ್ರತಿಪಕ್ಷದ ಮುಖಂಡ ಸ್ಥಾನದ ರಾಜೀನಾಮೆ ಪತ್ರವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಗುಲಾಮ್ ನಬಿ ಅಜಾದ್ ಅವರಿಗೆ ರವಾನಿಸಿದ್ದಾರೆ. ಏಪ್ರಿಲ್ 16 ರಂದು ಕಾಂಗ್ರೆಸ್ ಪಕ್ಷದ ಮುಖಂಡರು ಸಭೆ ಸೇರಿ ಶಾಸಕಾಂಗ ಸಭೆ ಕರೆಯುವ ದಿನಾಂಕವನ್ನು ನಿಗದಿಪಡಿಸುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆಗಳು ಇರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಶಾಸಕಾಂಗ ಸಭೆ ಕರೆದು ಸಿದ್ದರಾಮಯ್ಯ ಅವರನ್ನು ಸರ್ವಾನುಮತದಿಂದ ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡುವ ಸಂಭವವಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂದು ಸಿದ್ದು, ಕಾಂಗ್ರೆಸ್ ಪಕ್ಷದ ಕೈಬಿಡಲು ತಯಾರಿ ನಡೆಸಿದ್ದರು. ಗೋವಾ, ಕಾರವಾರ, ಬೆಳಗಾವಿ ಹೈದರಾಬಾದ್ ಹೀಗೆ ಅನೇಕ ಕಡೆಗಳಲ್ಲಿ ಬೆಂಬಲಿಗರೊಂದಿಗೆ ಗುಪ್ತಸಭೆ ನಡೆಸಿ ಕಾಂಗ್ರೆಸ್ ಪಕ್ಷಕ್ಕೆ ಏಟು ನೀಡುವ ಬಗ್ಗೆ ಚರ್ಚೆ ನಡೆಸಿದ್ದರು. ಹೈಕಮಾಂಡ್ ಸೂಚನೆ ಮತ್ತು ಸ್ಥಳೀಯ ಮುಖಂಡರ ಗೋಗರೆತ ಕಂಡ ಸಿದ್ದು ಅನಿವಾರ್ಯವಾಗಿ ಕೈ ಪಕ್ಷದಲ್ಲಿ ತಳವೂರಬೇಕಾಯಿತು. ಸದ್ಯದ ರಾಜಕೀಯ ಸ್ಥಿತಿಯಲ್ಲಿ ಸಿದ್ದುಗೆ ಕಾಂಗ್ರೆಸ್ ಪಕ್ಷ ಅನಿವಾರ್ಯ ಕೂಡಾ ಆಗಿತ್ತು.

ಕಳೆದ ಉಪಚುನಾವಣೆಯ ಸಂದರ್ಭದಲ್ಲಿ ಮುನಿಸಿಕೊಂಡಿದ್ದ ಸಿದ್ದರಾಮಯ್ಯ ಕಾಂಗ್ರೆಸ್ ಪರ ಚುನಾವಣೆ ಪ್ರಚಾರಕ್ಕೆ ತೆರಳಿರಲಿಲ್ಲ. ಈ ಕ್ರಮದಿಂದಾಗಿ ಸಿದ್ದು, ಕೆಲ ಗಂಭೀರ ಆರೋಪಗಳನ್ನು ಎದುರಿಸಬೇಕಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಂತೂ ಸಿದ್ದರಾಮಯ್ಯ ಅವರನ್ನು ತೀವ್ರವಾಗಿ ಕುಟುಕಿದ್ದರು. ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೋಲಿಸಲು ಬಿಜೆಪಿಯೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಯಃಕಚಿತ್ ಪ್ರತಿಪಕ್ಷದ ನಾಯಕನ ಸ್ಥಾನಕ್ಕಾಗಿ ಹೈಕಮಾಂಡ್ ಗೆ ಸಲಾಮು ಹೊಡೆಯುವಂತ ದುರ್ಗತಿ ಸಿದ್ದರಾಮಯ್ಯ ಅವರಿಗೆ ಬರಬಾರದಿತ್ತು ಎಂದು ಕುಮಾರಸ್ವಾಮಿ, ದೇವೇಗೌಡ, ರೇವಣ್ಣ ಏಕಕಾಲದಲ್ಲಿ ದಾಳಿ ಮಾಡಿ ಮುಗಿಸಿದ್ದರು.

ಅಷ್ಟಾದರೂ ಸಹನೆ ಕಳೆದುಕೊಳ್ಳದ ಸಿದ್ದು, ಕಾಂಗ್ರೆಸ್ ಪಕ್ಷ ಸೇರಿ ಮೂರು ವರ್ಷಕ್ಕೂ ಅಧಿಕ ದಿನಗಳ ಕಾಲ ತಮ್ಮ ಒಡಲಾಳದ ನೋವನ್ನು ಅದುಮಿಟ್ಟುಕೊಂಡು ಬಂದಿದ್ದರು. ಒಂದು ಕಾಲನ್ನು ಹೊರಗಿಟ್ಟು ಕಾಂಗ್ರೆಸ್ ಪಕ್ಷದೊಂದಿಗೆ ವ್ಯವಹಾರ ಶುರುವಿಟ್ಟುಕೊಂಡಿದ್ದ ಸಿದ್ದು, ಎರಡು ದಿನಗಳ ಹಿಂದಷ್ಟೇ ಮತ್ತೊಮ್ಮೆ ಗುಟುರು ಹಾಕಿದ್ದರು. ಸ್ಥಾನಮಾನ ನೀಡಿ, ಇಲ್ಲದಿದ್ದರೆ ಸ್ಪಷ್ಟವಾಗಿ ಆಗುವುದಿಲ್ಲ ಎಂದು ಹೇಳಿ ಎಂಬ ಸಂದೇಶವನ್ನು ಸೋನಿಯಾ ಗಾಂಧಿ ಅವರಿಗೆ ರವಾನಿಸಿದ್ದರು.

ಸಿದ್ದುಗೆ ಸ್ಥಾನ ನೀಡುವ ಸಲುವಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುಲ್ಬರ್ಗಾ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಸಿದ ಸೋನಿಯಾಗಾಂಧಿ, ಆ ಸ್ಥಾನಕ್ಕೆ ಸಿದ್ದು ನೇಮಿಸುವ ಐಡಿಯಾ ಮಾಡಿ ಅದರಲ್ಲಿ ಯಶ ಕಂಡಿದೆ. ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆ ನೀಡಿರುವುದಕ್ಕೆ ಸಂತಸಗೊಂಡಂತಿರುವ ಸಿದ್ದರಾಮಯ್ಯ, ಶನಿವಾರ ಗುಲ್ಬರ್ಗಾ ಜಿಲ್ಲೆಯ ಜೀವರ್ಗಿ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪ್ರಚಾರ ಕಾರ್ಯದಲ್ಲಿ ಯಡಿಯೂರಪ್ಪ, ಎಲ್ ಕೆ ಅಡ್ವಾಣಿ, ಎನ್ ಡಿಎ, ಸಂಘ ಪರಿವಾರ, ಅದರ ಅಂಗ ಸಂಘಟನೆಗಳ ಮೇಲೆ ತೀವ್ರ ವಾಗ್ದಾಳಿ ನಡೆಸಿದ ದೃಶ್ಯ ಕಂಡುಬಂದಿತು. ಸಿದ್ದು ನೇತೃತ್ವದ ಹಳೆ ಮುದುಕಿ ಕಾಂಗ್ರೆಸ್ ಪಕ್ಷ (ನರೇಂದ್ರ ಮೋದಿ ಹೇಳಿಕೆ) ಹದಿನೇಳರ ಬಾಲೆಯಾಗುವಳೆ ? ಲೋಕಸಭೆ ಚುನಾವಣೆಯಲ್ಲಿ ಮತದಾರರನ್ನು ಒಲಿಸಿಕೊಳ್ಳುವಳೆ ? ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+