233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg208189ಲೋಕಸಭೆ ಚುನಾವಣೆ 2009ಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg208189ಲೋಕಸಭೆ ಚುನಾವಣೆ 2009ಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpg208189ಲೋಕಸಭೆ ಚುನಾವಣೆ 2009ಹಾಸನದಿಂದ ಲೋಕಸಭೆಗೆ ಸ್ಪರ್ಧೆ: ದೇವೇಗೌಡ/news/2009/02/27/deve-gowda-to-contest-from-haasan-for-ls-polls.htmlಪಾಂಡವಪುರ, ಫೆ. 27 : ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ. ಒಂದೊಮ್ಮೆ ಸ್ಪರ್ಧೆ ಅನಿವಾರ್ಯವಾದರೆ ಮಂಡ್ಯದಿಂದ ಕಣಕ್ಕಿಳಿಯುವುದಿಲ್ಲ. ನನ್ನ ತವರು ಕ್ಷೇತ್ರ ಹಾಸನದಿಂದ ಅಖಾಡಕ್ಕಿಳಿಯುವೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಇಲ್ಲಿನ ಬೇಬಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸ್ಪರ್ಧಿಗೆ ಇಳಿಯುವಂತೆ 34892http://kannada.oneindia.com/img/2009/02/27-deve-gowda1.jpg208189ಲೋಕಸಭೆ ಚುನಾವಣೆ 2009ಆಪರೇಷನ್ ಕಮಲ; ಯೋಗೇಶ್ವರ ಬಿಜೆಪಿಗೆ /news/2009/02/28/mla-yogeshwar-basavraju-likely-to-join-bjp.htmlಬೆಂಗಳೂರು, ಫೆ. 28 : ಆಪರೇಷನ್ ಕಮಲವನ್ನು ಮುಂದುವರಿಸಿರುವ ಬಿಜೆಪಿ ಈ ಬಾರಿ ಕಾಂಗ್ರೆಸ್ ಪಕ್ಷದ ಚನ್ನಪಟ್ಟಣದ ಶಾಸಕ ಸಿ ಪಿ ಯೋಗೇಶ್ವರ ಹಾಗೂ ಮಾಜಿ ಸಂಸದ ಜಿ ಎಸ್ ಬಸವರಾಜ್ ಅವರಿಗೆ ಗಾಳ ಹಾಕಿದೆ. ಈ ಇಬ್ಬರು ನಾಯಕರು ಶೀಘ್ರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ವೇದಿಕೆ ಸಿದ್ಧಗೊಂಡಿದೆ ಎನ್ನಲಾಗಿದೆ. ಯೋಗೇಶ್ವರ ಅವರನ್ನು ಬೆಂಗಳೂರು 34915http://kannada.oneindia.com/img/2009/02/28-cp-yogeshwar1.jpg208189ಲೋಕಸಭೆ ಚುನಾವಣೆ 200915 ನೇ ಲೋಕಸಭೆ ಚುನಾವಣೆಗಳ ವೇಳಾಪಟ್ಟಿ/news/2009/03/02/ec-announces-lok-sabha-election2009-dates.htmlನವದೆಹಲಿ, ಮಾ. 2 : ತೀವ್ರ ಕುತೂಹಲ ಸೃಷ್ಟಿಸಿದ್ದ 15 ನೇ ಲೋಕಸಭೆ ಚುನಾವಣೆಗಳ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಐದು ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿರುವ ಆಯೋಗ, ಎಪ್ರಿಲ್ 16, 23, 30, ಮೇ 7 ಮತ್ತು ಮೇ 13 ರಂದು ಮತದಾನ ನಡೆಸಲಾಗುವುದು. ಮೇ 16 ರಂದು ಮತ ಎಣಿಕೆ ಕಾರ್ಯ 34937http://kannada.oneindia.com/img/2009/03/02-gopalaswamy2.jpg464365evmವಿದ್ಯುನ್ಮಾನ ಮತಯಂತ್ರದ ಬಗ್ಗೆ ನಿಮಗೆಷ್ಟು ಗೊತ್ತು?/news/2009/04/06/information-about-electronic-voting-machine.html15ನೇ ಲೋಕಸಭೆ ಚುನಾವಣೆಯಲ್ಲಿ ಏಪ್ರಿಲ್ 23ರಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಕರ್ನಾಟಕದಲ್ಲಿ ದಿನಗಣನೆ ಪ್ರಾರಂಭವಾಗಿದೆ. ಮೊತ್ತಮೊದಲ ಬಾರಿಗೆ ಮತದಾನ ಮಾಡುವವರಿಗೆ, ತಿಳಿವಳಿಕೆ ಇಲ್ಲದವರಿಗೆ ಇಲ್ಲಿದೆ ಎಲೆಕ್ಟ್ರಾನಿಕ್ ವೋಟಿಂಗ್ ಮಶಿನ್ ಅಥವಾ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಸಂಪೂರ್ಣ ಮಾಹಿತಿ. ಮತಚಲಾವಣೆ ಮುನ್ನ ಮತಯಂತ್ರದ ಬಗ್ಗೆ ತಿಳಿದುಕೊಳ್ಳಿ.* ಜಿ.ಚಂದ್ರಕಾಂತ, ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಗುಲಬರ್ಗಾಭಾರತವು ವಿಶ್ವದ ಅತಿ 35751http://kannada.oneindia.com/img/2009/04/06-electronic-voting1.jpg464365evmಎಲೆಕ್ಟ್ರಾನಿಕ್ ಮತಯಂತ್ರ ನಿಷೇಧಿಸಿ : ಅಡ್ವಾಣಿ/news/2009/07/05/advani-wants-ballot-papers-back.htmlನವದೆಹಲಿ, ಜು. 5 : ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಮುಂದಿನ ಚುನಾವಣೆಗಳ ಹೊತ್ತಿಗೆ ಅವುಗಳ ಬಳಕೆಯನ್ನು ನಿಷೇಧಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಕೇಂದ್ರ ಚುನಾವಣೆ ಆಯೋಗವನ್ನು ಒತ್ತಾಯಿಸಿದ್ದಾರೆ. ಬ್ಯಾಲೆಟ್ ಪೇಪರ್ ಗಳನ್ನು ಮತ್ತೆ ಮರುಜಾರಿಗೊಳಿಸಬೇಕು. ಇದೇ ವರ್ಷ ಮಹಾರಾಷ್ಟ್ರ ಸೇರಿ ಮೂರು ವಿಧಾನಸಭೆ ರಾಜ್ಯಗಳ 37787http://kannada.oneindia.com/img/2009/07/05-advani.jpg464365evmಅಡ್ವಾಣಿ ಬೆನ್ನು ಬಿದ್ದ ಸೋತ ಮುಖಗಳು/news/2009/07/12/losers-second-advanis-shun-evm-call.htmlಮತಯಂತ್ರಗಳಲ್ಲಿ ಮೋಸ ಮಾಡಲು ಸಾಧ್ಯ. ಇದರಿಂದ ಮತ್ತೆ ಬ್ಯಾಲೆಟ್ ಪೇಪರ್ ಮೂಲಕವೇ ಮುಂದಿನ ಚುನಾವಣೆಗಳನ್ನು ನಡೆಸಬೇಕು ಎಂದು ಮೊಟ್ಟಮೊದಲ ಬಾರಿಗೆ ಧ್ವನಿ ಎತ್ತಿದ ರಾಜಕಾರಣಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು. ಇನ್ನೇನು ಪ್ರಧಾನಿ ಆಗೇಬಿಟ್ಟೆ ಎಂಬ ಹುಮ್ಮಸ್ಸಿನಲ್ಲಿದ್ದ ಅಡ್ವಾಣಿ ಅವರಿಗೆ ದೇಶದ ಮತದಾರರ ಕೈಹಿಡಿಯಲಿಲ್ಲ. ಅವರ ಕನಸು ಕನಸಾಗಿಯೇ ಉಳಿಯಿತು. 37934http://kannada.oneindia.com/img/2009/07/12-naveen-chawla1.jpg464365evmಇವಿಎಂಗಳಿಂದ ಮೋಸ ,ಬಿಜೆಪಿ ಕ್ಯಾತೆ /news/2009/10/22/cong-leads-in-assembly-polls-bjp-blames-evms.htmlನವದೆಹಲಿ, ಅ. 22 : ಕುಣಿಯಲು ಬಾರದೆ ನೆಲ ಡೊಂಕು ಎನ್ನುವ ಗಾದೆಯ ಹಾಗೆ ವರ್ತಿಸುತ್ತಿರುವ ಬಿಜೆಪಿ ಇಂದಿನ ಚುನಾವಣೆ ಮೂರು ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಮೂಲಕ ಮತ್ತೆ ಹಳೆಯ ರಾಗ ಹಾಡತೊಡಗಿದೆ. ಎಲೆಕ್ಟ್ರಾನಿಕ್ ಮತಯಂತ್ರ ಮೂಲಕ ಅವ್ಯವಹಾರ ನಡೆಸಿರುವ ಸಾಧ್ಯತೆ ಇದೆ ಎಂದು ಬಿಜೆಪಿ ಆರೋಪಿಸಿದೆ. ಚುನಾವಣೆಯ ಫಲಿತಾಂಶಗಳು ಕಾಂಗ್ರೆಸ್ ಪರ ಹೊರಬೀಳುತ್ತಿದ್ದಂತೆಯೇ ಮಾಧ್ಯಮ 39796http://kannada.oneindia.com/img/2009/10/22-mukhtar-abbas-naqvi1.jpgnews"> ವಿದ್ಯುನ್ಮಾನ ಮತಯಂತ್ರದ ಬಗ್ಗೆ ನಿಮಗೆಷ್ಟು ಗೊತ್ತು? | Electronic voting machine | EVM | lok sabha election 2009 - ವಿದ್ಯುನ್ಮಾನ ಮತಯಂತ್ರದ ಬಗ್ಗೆ ನಿಮಗೆಷ್ಟು ಗೊತ್ತು? - Kannada Oneindia

ವಿದ್ಯುನ್ಮಾನ ಮತಯಂತ್ರದ ಬಗ್ಗೆ ನಿಮಗೆಷ್ಟು ಗೊತ್ತು?

Electronic voting machine
15ನೇ ಲೋಕಸಭೆ ಚುನಾವಣೆಯಲ್ಲಿ ಏಪ್ರಿಲ್ 23ರಂದು ನಡೆಯಲಿರುವ ಮೊದಲ ಹಂತದ ಮತದಾನಕ್ಕೆ ಕರ್ನಾಟಕದಲ್ಲಿ ದಿನಗಣನೆ ಪ್ರಾರಂಭವಾಗಿದೆ. ಮೊತ್ತಮೊದಲ ಬಾರಿಗೆ ಮತದಾನ ಮಾಡುವವರಿಗೆ, ತಿಳಿವಳಿಕೆ ಇಲ್ಲದವರಿಗೆ ಇಲ್ಲಿದೆ ಎಲೆಕ್ಟ್ರಾನಿಕ್ ವೋಟಿಂಗ್ ಮಶಿನ್ ಅಥವಾ ವಿದ್ಯುನ್ಮಾನ ಮತಯಂತ್ರದ ಬಗ್ಗೆ ಸಂಪೂರ್ಣ ಮಾಹಿತಿ. ಮತಚಲಾವಣೆ ಮುನ್ನ ಮತಯಂತ್ರದ ಬಗ್ಗೆ ತಿಳಿದುಕೊಳ್ಳಿ.

* ಜಿ.ಚಂದ್ರಕಾಂತ, ಸಹಾಯಕ ನಿರ್ದೇಶಕರು, ವಾರ್ತಾ ಇಲಾಖೆ, ಗುಲಬರ್ಗಾ

ಭಾರತವು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆಗಳು ಮಹತ್ತರ ಪಾತ್ರವಹಿಸಲಿವೆ. ಕೋಟ್ಯಾಂತರ ಮತದಾರರಿರುವ ನಮ್ಮ ರಾಷ್ಟ್ರದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವುದು ಹರಸಾಹಸದ ಕೆಲಸ. ಅನಕ್ಷರಸ್ಥ ಮತದಾರರು, ಗುಡ್ಡಗಾಡುಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸುವ ಪರಿಸ್ಥಿತಿ, ತಿರಸ್ಕೃತ ಮತಗಳು, ಅಕ್ರಮ ಮತದಾನ ಹೀಗೆ ಮುಕ್ತ, ನ್ಯಾಯಸಮ್ಮತ, ಸಮರ್ಪಕ ಚುನಾವಣೆ ನಡೆಸುವಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಈ ಎಲ್ಲ ಸವಾಲುಗಳಿಗೆ ಪರಿಹಾರವೆಂಬಂತೆ ಈಗ ಮತಗಟ್ಟೆಗೆ ಬಂದಿದೆ ವಿದ್ಯುನ್ಮಾನ ಮತಯಂತ್ರ. ಜೀವನದ ಎಲ್ಲ ಕ್ಷೇತ್ರಗಳಲ್ಲೂ ವ್ಯಾಪಿಸಿರುವ ವಿದ್ಯುನ್ಮಾನ ಸಾಧನಗಳು ಈಗ ಮತಗಟ್ಟೆ ಪ್ರವೇಶಿಸಿದೆ. ಈ ವಿದ್ಯುನ್ಮಾನ ಮತಯಂತ್ರದ ಕಾರ್ಯನಿರ್ವಹಣೆಯ ಪರಿಚಯ ಇಲ್ಲಿದೆ.

ಹಿನ್ನೆಲೆ ಮತ್ತು ವಿವರಣೆ:

ನಮ್ಮ ದೇಶದಲ್ಲಿ 1952ರಿಂದ 1999ರವರೆಗೆ ನಡೆದ ಎಲ್ಲ ಸಾರ್ವತ್ರಿಕ ಚುನಾವಣೆ ಹಾಗೂ ಉಪಚುನಾವಣೆಗಳಲ್ಲಿ ಮತಪತ್ರಗಳ ಮೂಲಕ ಮತದಾನ ಮಾಡುವ ವ್ಯವಸ್ಥೆ ಇತ್ತು. ನಂತರ ನಡೆದ ಕೆಲ ಸಾರ್ವತ್ರಿಕ ಹಾಗೂ ಉಪಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯಾದರೂ 2004ರಲ್ಲಿ ಜರುಗಿದ ಲೋಕಸಭಾ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಯಿತು. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಜರುಗಿದ 2008ರ ವಿಧಾನಸಭಾ ಚುನಾವಣೆಯಲ್ಲಿಯೂ ಈ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಯಿತು. ದೇಶದಾದ್ಯಂತ ಈಗ 15ನೇ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗಿದ್ದು, ಈ ಚುನಾವಣೆಯಲ್ಲಿಯೂ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುವುದು. ರಾಜ್ಯದ ಮತದಾರರು ಈ ವಿದ್ಯುನ್ಮಾನ ಮತಯಂತ್ರಗಳ ಮಾಹಿತಿ ಪಡೆಯುವುದು ಅತ್ಯಗತ್ಯವಾಗಿದೆ.

ಎಲೆಕ್ಟ್ರಾನಿಕ್ಸ್ ವೋಟಿಂಗ್ ಮೆಷಿನ್ ಎಂಬ ವಿದ್ಯುನ್ಮಾನ ಮತಯಂತ್ರವು ದೊಡ್ಡದಾದ ಕ್ಯಾಲ್‌ಕ್ಯೂಲೇಟರ್ ಮಾದರಿಯಲ್ಲಿದೆ. ಬೆಂಗಳೂರಿನ ಬಿ.ಇ.ಎಲ್. ಮತ್ತು ಹೈದ್ರಾಬಾದಿನ ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ 1989-90ರಲ್ಲಿ ರೂಪಿಸಿದ ಈ ವಿದ್ಯುನ್ಮಾನ ಮತಯಂತ್ರ ಎರಡು ಘಟಕಗಳನ್ನು ಹೊಂದಿರುತ್ತದೆ. ಮತದಾರರು ತಮ್ಮ ಮತ ಚಲಾಯಿಸಲು ಬಳಸುವ ಮತದಾನ ಘಟಕವೇ (ಬ್ಯಾಲೇಟ್ ಯೂನಿಟ್) ಮೊದಲನೇ ಘಟಕ. ಮತಗಟ್ಟೆಯಲ್ಲಿ ಪ್ರಿಸೈಡಿಂಗ್ ಅಧಿಕಾರಿಗಳ ನಿಯಂತ್ರಣದಲ್ಲಿರುವ ನಿಯಂತ್ರಣ ಘಟಕವೇ (ಕಂಟ್ರೋಲ್ ಯೂನಿಟ್) ಎರಡನೆಯದು.

ಮತದಾನ ಘಟಕ (ಬ್ಯಾಲೆಟ್ ಯೂನಿಟ್):

ಮತದಾನ ಘಟಕದ ನಿರ್ವಹಣೆ ಅತ್ಯಂತ ಸರಳವಾಗಿದೆ. ಆಯತಾಕಾರದ ಹಲಗೆಯ ಮಾದರಿಯಲ್ಲಿರುವ ಈ ಉಪಕರಣದಲ್ಲಿ ಒಟ್ಟು 16 ಉಮೇದುವಾರರ ಹೆಸರು ಮತ್ತು ಅವರಿಗೆ ಚುನಾವಣಾ ಆಯೋಗ ನೀಡಿರುವ ಚಿಹ್ನೆಗಳನ್ನು ದಾಖಲಿಸಿಕೊಳ್ಳಬಹುದು. ಉಮೇದುವಾರರು 16ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಇದರೊಂದಿಗೆ ಇನ್ನೊಂದು ಬ್ಯಾಲೆಟ್ ಯೂನಿಟ್‌ನ್ನು ಸೇರಿಸಿಕೊಳ್ಳಲಾಗುವುದು. ಒಂದು ಮತಯಂತ್ರ ಗರಿಷ್ಠ 3840 ಮತಗಳನ್ನು ದಾಖಲಿಸುವ ಸಾಮರ್ಥ್ಯ ಹೊಂದಿದೆ. ಒಂದುವೇಳೆ ಮತಯಂತ್ರ ಮಧ್ಯದಲ್ಲೇ ಕೈಕೊಟ್ಟರೆ ಪರ್ಯಾಯ ಯಂತ್ರವನ್ನು ಬಳಸಲಾಗುತ್ತದೆ. ಅಲ್ಲಿಯವರೆಗೆ ಚಲಾವಣೆಯಾದ ಮತಗಳು ಹಾಳಾದ ಯಂತ್ರದಲ್ಲಿಯೇ ಸುರಕ್ಷಿತವಾಗಿರುತ್ತವೆ. ಈ ಮತಯಂತ್ರಕ್ಕೆ ವಿದ್ಯುತ್ ಬೇಕಿಲ್ಲ. ಆರು ವೋಲ್ಟಿನ ಸಾಮಾನ್ಯ ಬ್ಯಾಟರಿ ಶೆಲ್ ಸಾಕು. ಶೆಲ್ ಮುಗಿದರೆ ಅಥವಾ ಹಾಳಾದರೆ ಮತದಾಖಲೆ ಹೊಂದಿರುವ ಚಿಪ್‌ಗೆ ಯಾವುದೇ ಧಕ್ಕೆ ಆಗುವುದಿಲ್ಲ. ಪ್ರತಿ ಉಮೇದುವಾರನ ಗುರುತಿನ ಬಲಭಾಗದಲ್ಲಿ ಒಂದು ಒತ್ತುಗುಂಡಿ ಇರುತ್ತದೆ. ಮತದಾರರು ಮತಹಾಕಲು ಬಯಸುವ ಅಭ್ಯರ್ಥಿಯ ಚಿಹ್ನೆ (ಗುರುತು) ಪಕ್ಕದಲ್ಲಿರುವ ನೀಲಿ ಗುಂಡಿಯನ್ನು ಒತ್ತಿದರೆ ಸಾಕು. ಮತದಾರರ ಮತವು ಈ ಬ್ಯಾಲೆಟ್ ಯೂನಿಟ್‌ನಲ್ಲಿ ದಾಖಲಾಗುವುದು.

ಕಂಟ್ರೋಲ್ ಯೂನಿಟ್:

ಉಮೇದುವಾರರ ಕ್ರಮ ಸಂಖ್ಯೆ ಮತ್ತು ದಾಖಲಾದ ಒಟ್ಟು ಮತಗಳನ್ನು ಅಂಕಿಗಳಲ್ಲಿ ತೋರಿಸುವ ವ್ಯವಸ್ಥೆಯನ್ನು ಈ ನಿಯಂತ್ರಣ ಘಟಕ (ಕಂಟ್ರೋಲ್ ಯೂನಿಟ್)ಹೊಂದಿದೆ. ಕಂಟ್ರೋಲ್ ಯೂನಿಟ್ಟಿನ ಕೆಳಭಾಗದಲ್ಲಿ ಯಾರಿಗೆ ಎಷ್ಟು ಮತಗಳು ಲಭಿಸಿವೆ ಎಂದು ತಿಳಿದುಕೊಳ್ಳಲು ಹಾಗೂ ಮತದಾನ ಪ್ರಾರಂಭವಾಗುವ ಮೊದಲು ಬ್ಯಾಲೆಟ್ ಯೂನಿಟ್‌ನಲ್ಲಿ ಯಾರಿಗೂ ಒಂದು ಮತವೂ ದಾಖಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರತ್ಯೇಕ ಗುಂಡಿಗಳಿವೆ.

ಕಾರ್ಯನಿರ್ವಹಣೆ:

ಬ್ಯಾಲೆಟ್ ಯೂನಿಟ್‌ನ್ನು ಕಂಟ್ರೋಲ್ ಯೂನಿಟ್‌ದೊಂದಿಗೆ ಸಂಪರ್ಕ ಕಲ್ಪಿಸಿದ ಬಳಿಕ ಮತಯಂತ್ರ ಕಾರ್ಯನಿರ್ವಹಿಸಲು ಸಿದ್ಧವಾಗಿರುತ್ತದೆ. ಮತದಾನ ಪ್ರಾರಂಭವಾಗುವ ಮೊದಲು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಕರೆದು ಅವರ ಸಮ್ಮುಖದಲ್ಲಿ ಮತಯಂತ್ರದಲ್ಲಿನ 'ಕ್ಲಿಯರ್' ಗುಂಡಿ ಒತ್ತಿ ತೋರಿಸಲಾಗುತ್ತದೆ. ಅದುವರೆಗೆ ಯಾವ ಚಿಹ್ನೆಗೂ ಮತದಾನವಾಗಿಲ್ಲವೆಂದು ಖಾತರಿಯಾದ ಮೇಲೆ ಪಕ್ಷದ ಪ್ರತಿನಿಧಿಗಳಿಂದ ಪರಿಶೀಲಿಸಿದ ಬಗ್ಗೆ ಹಾಳೆಯಲ್ಲಿ ಸಹಿ ಪಡೆದು ಈ ಹಾಳೆಯನ್ನು ಕ್ಲಿಯರ್ ಗುಂಡಿಯಿರುವ ಭಾಗದಲ್ಲೇ ಮುಚ್ಚಿಟ್ಟು ಸೀಲ್ ಮಾಡಿದ ನಂತರ ಮತದಾನ ಮಾಡುವ ಪ್ರಕ್ರಿಯೆ ಪ್ರಾರಂಭವಾಗುವುದು.

ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಭಾರತ ಚುನಾವಣಾ ಆಯೋಗವು ಸೂಚಿಸಿದ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಪರಿಶೀಲಿಸಿದ ನಂತರ ನೋಂದಣಿ ಪುಸ್ತಕದಲ್ಲಿ ಸಹಿ ಅಥವಾ ಹೆಬ್ಬೆಟ್ಟು ಒತ್ತಿಸಿಕೊಂಡು ಅವರನ್ನು ಬ್ಯಾಲೆಟ್ ಯೂನಿಟ್ ಇರುವ ಸ್ಥಳಕ್ಕೆ ಕಳುಹಿಸಲಾಗುವುದು. ಮತಗಟ್ಟೆ ಅಧಿಕಾರಿ ತನ್ನ ಬಳಿಯಿರುವ ಕಂಟ್ರೋಲ್ ಯೂನಿಟ್‌ದಲ್ಲಿ 'ವೋಟ್' ಎಂಬ ಗುಂಡಿ ಒತ್ತಿದ ಕೂಡಲೇ ಬ್ಯಾಲೆಟ್ ಯೂನಿಟ್‌ನಲ್ಲಿ 'ರೆಡಿ' ಎಂದು ಸೂಚಿಸುವ ಹಸಿರು ದೀಪ ಉರಿಯುವುದು. ಮತದಾರರು ಮತಹಾಕಲು ಬ್ಯಾಲೆಟ್ ಯೂನಿಟ್ ಇರುವ ವಿಭಾಗಕ್ಕೆ (ಕಂಪಾರ್ಟ್‌ಮೆಂಟ್) ಹೋದಕೂಡಲೇ ಅಲ್ಲಿರುವ ಮತದಾನ ಯಂತ್ರ (ಬ್ಯಾಲೆಟ್ ಯೂನಿಟ್)ದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಮೇಲ್ಭಾಗದಲ್ಲಿ 'ಹಸಿರು' ದೀಪ ಉರಿಯುತ್ತಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಹಸಿರು ದೀಪ ಉರಿಯುತ್ತಿದ್ದಲ್ಲಿ ಸದರಿ ವಿದ್ಯುನ್ಮಾನ ಯಂತ್ರ ಸುಸ್ಥಿಯಲ್ಲಿದ್ದು, ಮತಚಲಾವಣೆಗೆ ಸಿದ್ಧವಾಗಿದೆ ಎಂದು ತಿಳಿಯಬೇಕು. ನಂತರ ತಮಗೆ ಬೇಕಾದ ಅಭ್ಯರ್ಥಿಯ ಹೆಸರಿನ ಮುಂದಿರುವ ಗುರುತಿನ ಚಿತ್ರದೆದುರಿನ ನೀಲಿ ಗುಂಡಿಯನ್ನು ಒತ್ತಬೇಕು. ನೀಲಿ ಗುಂಡಿ ಒತ್ತಿದ ಕೂಡಲೇ ಹಸಿರು ದೀಪ ಆರಿಹೋಗಿ ಮತದಾರ ಆಯ್ಕೆ ಮಾಡಿದ ಗುರುತಿನ ಬಲಭಾಗದಲ್ಲಿ ಕೆಂಪು ದೀಪ ಉರಿಯುವುದು. ನಂತರ 10 ಸೆಕೆಂಡುಗಳ ಕಾಲ 'ಬೀಪ್' ಎಂಬ ಶಬ್ದ ಕೇಳಿಬರುವುದು. ಕೆಂಪು ದೀಪ ಆರಿಹೋಗಿ 'ಬೀಪ್' ಶಬ್ದವೂ ನಿಂತುಹೋದರೆ ಆಗ ನಿಮ್ಮ ಮತ ಚಲಾವಣೆಯಾಗಿದೆ ಎಂದು ತಿಳಿಯಬೇಕು. 'ಬೀಪ್' ಶಬ್ದ ಬಾರದಿದ್ದಲ್ಲಿ ಕೂಡಲೇ ಮತಗಟ್ಟೆ ಅಧಿಕಾರಿಯನ್ನು ಸಂಪರ್ಕಿಸಬೇಕು. ನಂತರ ಸರದಿಯಂತೆ ಇನ್ನೊಬ್ಬ ಮತದಾರರು ಮತದಾನ ಮಾಡಲು ಹೋಗಬಹುದು. ಒಬ್ಬ ಮತದಾರ ಎಷ್ಟೇ ಗುಂಡಿಗಳನ್ನು ಒತ್ತಿದರೂ ದಾಖಲಾಗುವುದು ಒಂದೇ ಒಂದು ಮತ ಮಾತ್ರ . ಅರ್ಧ ಗಂಟೆಗೊಮ್ಮೆ ಮತದಾರರ ಸಹಿಯನ್ನೊಳಗೊಂಡ ನೋಂದಣಿ ಪುಸ್ತಕದ ಸಂಖ್ಯೆಯನ್ನು ದಾಖಲಾದ ಒಟ್ಟು ಮತಗಳ ಸಂಖ್ಯೆಯನ್ನು ಟೋಟಲ್ ವೋಟ್ಸ್ ಎಂಬ ಗುಂಡಿ ಒತ್ತಿ ತಾಳೆ ನೋಡಿಕೊಳ್ಳಬಹುದು.

ಉಪಯುಕ್ತತೆ:

ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಂಟ್ರೋಲ್ ಯೂನಿಟ್‌ನ್ನು ಮಾತ್ರ ಮತ ಎಣಿಕೆ ಕೇಂದ್ರಗಳಿಗೆ ಕೊಂಡೊಯ್ದರೆ ಸಾಕು. ಮತಗಳನ್ನು ತ್ವರಿತವಾಗಿ ಎಣಿಕೆ ಮಾಡಬಹುದು. ಸಾಮಾನ್ಯವಾಗಿ ಮತ ಚೀಟಿಗಳಂತೆ ಕಂಟ್ರೋಲ್ ಯೂನಿಟ್‌ಗಳನ್ನು ಸಹ 3 ವರ್ಷಗಳಿಗೆ ಭದ್ರಪಡಿಸಬಹುದು. ವಿದ್ಯುನ್ಮಾನ ಮತಯಂತ್ರವು ಅನಕ್ಷರಸ್ಥ ಮತದಾರರಿಗೆ ಒಂದು ವರದಾನವಾಗಿದೆ. ಉಮೇದುವಾರನ ಚಿಹ್ನೆಯ ಪಕ್ಕದಲ್ಲಿರುವ ನೀಲಿ ಗುಂಡಿ ಒತ್ತಲು ಯಾರಿಗೂ ಕಷ್ಟವಾಗದು. ಒಬ್ಬರಿಗೆ ಒಂದೇ ಒಂದು ಮತ ಚಲಾಯಿಸಲು ಅವಕಾಶವಿರುವುದರಿಂದ ಅಕ್ರಮ ಮತದಾನಕ್ಕೆ ಹಾಗೂ ತಿರಸ್ಕೃತ ಮತಗಳಿಗೆ ಅವಕಾಶವಿರುವುದಿಲ್ಲ. ಮುಕ್ತ , ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನ ಕಾರ್ಯಕ್ಕೆ ಈ ವಿದ್ಯುನ್ಮಾನ ಮತಯಂತ್ರಗಳು ನಂಬಿಕೆಗೆ ಅರ್ಹವಾಗಿರುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+