ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್.....ಮಹಿಳಾ ಫಿದಾಯಿನ್ ಗಳು ಎಂಟ್ರಿ

By Staff
|
Google Oneindia Kannada News

ನವದೆಹಲಿ, ಏ. 2 : ಅತ್ಯಂತ ಗಂಭೀರವಾದ ಮತ್ತು ಆಘಾತಕಾರಿ ಮಾಹಿತಿಯೊ೦ದನ್ನು ಗುಪ್ತಚರ ಇಲಾಖೆ ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವಾಲಯಕ್ಕೆ ರವಾನಿಸಿದೆ. 'ಮಿಷನ್ ಟೆರರ್' ಮೂಲಕ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ನುರಿತ ಏಳರಿಂದ ಎಂಟು ಪೈಲಟ್ ಗಳು ಮತ್ತು ಸುಮಾರು ಹನ್ನೆರಡು ಮಹಿಳಾ ಫಿದಾಯಿನ್ ಗಳು ದೇಶದೊಳಗೆ ಪ್ರವೇಶಿಸಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದ್ದು, ಭಾರಿ ಕಟ್ಟೆಚ್ಚರದಲ್ಲಿರುವ೦ತೆ ವಹಿಸುವಂತೆ ಎಚ್ಚರಿಕೆ ನೀಡಿದೆ.

ಮುಂಬೈ ಪೊಲೀಸರಿಗೆ ಈ ಸಂಬಂಧ ಒಂದು ವಾರದ ಹಿಂದೆ ಇಮೇಲ್ ಬೆದರಿಕೆ ಬಂದಿದ್ದು , ಅಲ್ಲದೇ ಮುಂಬೈ ತಾಜ್ ಮಹಲ್ ಮತ್ತು ಚೆನ್ನೈ ತಾಜ್ ಪ್ರಾಪರ್ಟಿ ಹೋಟೆಲ್ ಗಳಿಗೆ ಕೂಡ ಇಮೇಲ್ ಬಂದಿರುವುದನ್ನು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸುಮಾರು 20 ಮಂದಿಯ ತಂಡವೊಂದು ಭಯೋತ್ಪಾದನಾ ಕೃತ್ಯಗಳು ನಡೆಸುವುದು ಮತ್ತು ವಿಮಾನ ಅಪಹರಣ ನಡೆಸಲು ದೇಶದೊಳಗೆ ನುಸುಳಿದ್ದಾರೆ. ಇವರೆಲ್ಲಾ ಪಾಕಿಸ್ತಾನಿ ಪ್ರಜೆಗಳಾಗಿರಬಹುದು ಎಂದು ಇಲಾಖೆ ಎಚ್ಚರಿಸಿದೆ. ಇದುವರೆಗಿನ ಬೆದರಿಕೆಗಳಲ್ಲಿ ಇದು ಅತ್ಯಂತ ಗಂಭೀರವಾದುದಾಗಿದೆ ಎಂದು ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ಬಿಜೆಪಿ ಮುಖಂಡರಾದ ಆಡ್ವಾಣಿ, ನರೇಂದ್ರ ಮೋದಿ, ರಾಜನಾಥ್ ಸಿಂಗ್, ವರುಣ್ ಗಾಂಧಿ ಮತ್ತು ಕಾಂಗ್ರೆಸ್ ಮುಖಂಡರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಉಗ್ರರ ಪಟ್ಟಿಯಲ್ಲಿರುವ ಹಿನ್ನಲೆಯಲ್ಲಿ ಕೇಂದ್ರ ಗೃಹಸಚಿವ ಚಿದಂಬರಂ ಈ ಎಲ್ಲಾ ಮುಖಂಡರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ 'ರೋಡ್ ಶೋ ' ನಡೆಸದಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಡಿ ಗ್ಯಾಂಗ್ ನ ಛೋಟಾ ಶಕೀಲ್ ನಿಂದ ಬೆದರಿಕೆ ಕರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X