ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಪಾಲಿಕೆ ಮೇಲೆ ರಾಷ್ಟ್ರದ್ವಜ ಮಾತ್ರ

By Staff
|
Google Oneindia Kannada News

ಬೆಳಗಾವಿ, ಮಾ 28: ಮಾರ್ಚ್ 16ರಿಂದ ಬೆಳಗಾವಿ ಮಹಾನಗರ ಪಾಲಿಕೆ ಕಟ್ಟಡವನ್ನು ಹೊಸ ಕಟ್ಟಡಕ್ಕೆ ಸ್ಥಳಾ೦ತರಿಸಲಾಗಿದೆ.ಈ ಕಟ್ಟಡದಲ್ಲಿ ರಾಷ್ಟ್ರದ್ವಜ ಮಾತ್ರ ಹಾರಿಸಲಾಗುವುದು ಮತ್ತು ಭಗವಾಧ್ವಜ ಸೇರಿದಂತೆ ಯಾವುದೇ ಬೇರೆ ಧ್ವಜಗಳಿಗೆ ಅವಕಾಶವಿಲ್ಲ ಎಂದು ಪಾಲಿಕೆ ಆಯುಕ್ತರು ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಬೆಳಗಾವಿ ಪಾಲಿಕೆ ಕಛೇರಿಯಲ್ಲಿ ಹರಿಸಿರುವ ಭಗವಾಧ್ವಜ ತೆರವು ಕೋರಿ ಭೀಮಪ್ಪ ಗುಂಡಪ್ಪ ಗಡಾದ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾ. ದಿನಕರನ್ ಮತ್ತು ನ್ಯಾ. ಸಭಾಹಿತ್ ಅವರಿದ್ದ ವಿಭಾಗಿಯ ಪೀಠ ಮುಕ್ತಾಯಗೊಳಿಸಿತು. ಇದರಿಂದ ಹಲವು ವರ್ಷಗಳಿಂದ ಕನ್ನಡಿಗರು ಮತ್ತು ಮರಾಠಿಗರ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದ ಬೆಳಗಾವಿ ಪಾಲಿಕೆ ಮೇಲಿನ ಭಗವಾಧ್ವಜ ವಿವಾದಕ್ಕೆ ಮುಕ್ತಿ ಸಿಕ್ಕಂತಾಗಿದೆ. ಭಗವಾಧ್ವಜವನ್ನು ತೆರವುಗೊಳಿಸಿ, ಕನ್ನಡ ಬಾವುಟ ಹಾರಿಸಬೇಕೆಂದು ಕನ್ನಡ ಪರ ಸಂಘಟನೆಗಳು ಪಾಲಿಕೆಯನ್ನು ಅಗ್ರಹಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ: ಅಂಗಡಿಗೆ ಟಿಕೆಟ್ ನೀಡದಂತೆ ಕರವೇ ಪ್ರತಿಭಟನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X