ಬ್ಯಾಂಕರ್ ಮೀರಾ ಸನ್ಯಾಲ್ ಮುಂಬೈದಿಂದ ಕಣಕ್ಕೆ

ದೇಶದ ಪ್ರತಿಷ್ಠಿತ ಬ್ಯಾಂಕ್ ನಲ್ಲಿ ಒಂದಾಗಿರುವ ಎಬಿಎನ್ ಅಮ್ರೋ ಬ್ಯಾಂಕ್ ನ ಮುಖ್ಯಸ್ಥೆ ಮೀರಾ ಸನ್ಯಾಲ್ ಮುಂಬೈ ದಕ್ಷಿಣ ಲೋಕಸಭೆ ಕ್ಷೇತ್ರದಿಂದ ನೂತನವಾಗಿ ಉದಯವಾಗಿರುವ ಪ್ರೋಪೆಷನಲ್ ಪಾರ್ಟಿ ಆಫ್ ಇಂಡಿಯಾದಿಂದ ಕಣಕ್ಕಿಳಿಯಲಿದ್ದಾರೆ. ಸನ್ಯಾಲ್ ಅವರು ಕಾಂಗ್ರೆಸ್ ನ ಮಿಲಿಂದ್ ದಿಯೋರಾ, ಶಿವಸೇನೆಯ ಮೋಹನ್ ರಾವಲೇ ಎದುರು ಸ್ಪರ್ಧಿಸಲಿದ್ದಾರೆ.
ಸನ್ಯಾಲ್ ಅವರು ದೇಶದ ಪ್ರತಿಷ್ಠಿತ ಕಾಲೇಜ್ ಎನಿಸಿರುವ ಐಎಂಎಂನಲ್ಲಿ ವಿದ್ಯಾಬ್ಯಾಸ ಪೂರೈಸಿದ್ದಾರೆ. ನಾಲ್ಕು ಅಂಶಗಳ ಸೂತ್ರವನ್ನು ಮುಂದಿಟ್ಟುಕೊಂಡು ಅವರು ಚುನಾವಣೆಗೆ ಧುಮುಕಿದ್ದು, ಮುಖ್ಯವಾಗಿ ಮುಂಬೈ ನಗರದ ಸಮಗ್ರ ಬೆಳವಣಿಗೆ, ಕೈಗಾರಿಕೆಗಳಿಗೆ ಉತ್ತೇಜನ, ಮೂಲಭೂತ ಸೌಕರ್ಯಗಳಿಗೆ ಆದ್ಯತೆಗಳು ಪ್ರಮುಖವಾಗಿವೆ. ಮುಂಬೈನಲ್ಲಿ ನಡೆದ ಭಯೋತ್ಪಾದನೆ ಹಾಗೂ ದೇಶದ ಆರ್ಥಿಕ ದರ ಕುಸಿತ ತಮ್ಮನ್ನು ರಾಜಕೀಯಕ್ಕೆ ಪ್ರವೇಶಿಸಲು ಪ್ರೆರೇಪಿಸಿತು ಎಂದು ಸನ್ಯಾಲ್ ಹೇಳಿದ್ದಾರೆ.
ಕರ್ನಾಟಕದ ಚಿತ್ರದುರ್ಗ ಕ್ಷೇತ್ರದಿಂದ ಸಾಫ್ಟವೇರ್ ಇಂಜಿನಿಯರ್ ಜನಾರ್ದನಸ್ವಾಮಿ ಕಣಕ್ಕಿಳಿಯುವುದು ಖಚಿತವಾಗಿದ್ದು, ಐಎಂಎಂ ಕಾಲೇಜಿನ ಪ್ರೊಪೆಸರ್ ರಾಜೀವ್ ಗೌಡ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಗಳಿವೆ. ಲೀಡ್ ಇಂಡಿಯಾದ ಮುಖಂಡ ಆರ್ ಕೆ ಮಿಶ್ರಾ ಈಗಾಗಲೇ ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ:
ಕನಸುಕಂಗಳ 'ರಾಜಕಾರಣಿ' ರಾಜೀವ್ ಗೌಡ
ಚೇಂಜ್ ಇಂಡಿಯಾ ಸಭೆಗೆ ಅರುಣ್ ಜೇಟ್ಲಿ, ಅನಂತ್
ಬೆಂಗಳೂರಿನ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ












Click it and Unblock the Notifications