ದುಶ್ಚಟ ನಿವಾರಣಾ ಕೇಂದ್ರಗಳಿಗೆ ಪರವಾನಿಗೆ ಕಡ್ಡಾಯ
ಬೆಂಗಳೂರು, ಮಾ.21: ಖಾಸಗಿ ಮಾನಸಿಕ ಆಸ್ಪತ್ರೆ/ ಪುನರ್ವಸತಿ/ದುಶ್ಚಟ ನಿವಾರಣಾ ಕೇಂದ್ರಗಳು ಮಾನಸಿಕ ಆರೋಗ್ಯ ಕಾಯ್ದೆ 1987ರ ಪ್ರಕಾರ ಆಯಾ ಜಿಲ್ಲಾಧಿಕಾರಿಗಳಿಂದ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು ಹಾಗೂ ಕನಿಷ್ಠ ಸೌಲಭ್ಯವನ್ನು ಹೊಂದಿರಬೇಕು. ಪರವಾನಿಗೆ ಪಡೆಯದೇ ನಡೆಸುವ ಸಂಸ್ಥೆಗಳ ವಿರುದ್ಧ ಶಿಸ್ತಿನ ಕ್ರಮವನ್ನು ಜಗುಗಿಸಲಾಗುವುದು ಎಂದು ರಾಜ್ಯದ ಮಾನಸಿಕ ಆರೋಗ್ಯ ಪ್ರಾಧಿಕಾರವು ಅಧಿಸೂಚನೆ ಮೂಲಕ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಹಲವಾರು ಪುನರ್ವಸತಿ/ದುಶ್ಚಟ ನಿವಾರಣಾ ಕೇಂದ್ರಗಳಲ್ಲಿ ಮಾನಸಿಕ ಅಸ್ವಸ್ಥರಿಗೆ ಕಿರುಕುಳ ಹಾಗೂ ಕ್ರೂರವಾಗಿ ಹಿಂಸೆ ನೀಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು ಇಂತಹ ಮಾನಸಿಕ ಆರೋಗ್ಯ ಕಾಯ್ದೆ 1987 ರ ಪ್ರಕಾರ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರ ಎಚ್ಚರಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications