ಕನ್ನಡ ವಿರೋಧಿ ಸಂಸದ ಸುರೇಶ ಅಂಗಡಿ
ಬೆಳಗಾವಿ,
ಮಾ. 17 : ಭಾರತೀಯ ಜನತಾ ಪಕ್ಷದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಕನ್ನಡಗರಿಗೆ ಭಾರಿ ಅಘಾತ ನೀಡಿದ್ದಾರೆ. ಸಂಸದ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬಹಿರಂಗವಾಗಿಯೇ ಬೆಂಬಲ ನೀಡುವ ಮೂಲಕ ಮರಾಠಿ ಮತಗಳ ಬೇಟೆಗೆ ಮುಂದಾಗಿ ಕನ್ನಡಿಗರಿಗೆ ದ್ರೋಹ ಎಸಗಿದ್ದಾರೆ. id="toptextpromo">ಮತಕ್ಕಾಗಿ
ಮರಾಠಿಗಳನ್ನು ಓಲೈಸಿ, ಕನ್ನಡನಾಡು, ನುಡಿ, ಸಂಸ್ಕೃತಿಗಳನ್ನೇ ಬಲಿ ಕೊಡುವುದಕ್ಕೂ ಹಿಂಜರಿಯುವುದಿಲ್ಲ ಎನ್ನುವ ಪ್ರವೃತ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಈ ಹಿಂದೆ ಎಪಿಎಂಸಿ ನಾಮಕರಣ, ಮರಾಠಿ ಸಾಹಿತ್ಯ ಸಮ್ಮೇಳನ ಮತ್ತಿತರ ಸಂದರ್ಭದಲ್ಲಿ ಎಂಇಎಸ್ ಬೆಂಬಲಕ್ಕೆ ನಿಂತು ವಿವಾದಕ್ಕೊಳಗಾಗಿದ್ದ ಅಂಗಡಿ, ಸೋಮವಾರ ಬೆಳಗಾವಿ ಪಾಲಿಕೆ ಮೇಲಿನ ಭಗವಾಧ್ವಜ ವಿವಾದದಲ್ಲಿ ಪುನಃ ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆ ಸೇರಿ ಪ್ರತಿಭಟನೆಗಿಳಿಯುವ ಮೂಲಕ ಮತ್ತೊಮ್ಮೆ ಇಡೀ ಕನ್ನಡ ನಾಡು ದಿಗ್ಭ್ರಮೆಗೊಳ್ಳುವಂತೆ ಮಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)ಬೆಳಗಾವಿ ಪಾಲಿಕೆ ಮೇಲೆ ಕನ್ನಡ ಧ್ವಜ ಹಾರಿಸಿ: ಕರವೇ












Click it and Unblock the Notifications