ತೆಲುಗು ಚಿತ್ರ ಅರ್ಪಿಸಿದ ಸಚಿವ ಜನಾರ್ದನರೆಡ್ಡಿ

buddhivantadu
ಬೆಂಗಳೂರು, ಮಾ. 16 : ಬಳ್ಳಾರಿ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯ ವೈ ಎಸ್ ರಾಜಶೇಖರರೆಡ್ಡಿ ಹಾಗೂ ಪ್ರವಾಸೋಧ್ಯಮ ಸಚಿವ, ಗಣಿಧಣಿ ಜನಾರ್ದನರೆಡ್ಡಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಮಾಜಿ ಪ್ರಧಾನ ದೇವೇಗೌಡ ಮಾಡುತ್ತಿರುವ ಆರೋಪದಲ್ಲಿ ಸತ್ಯವಿದೆಯೋ ಏನೂ ಗೊತ್ತಿಲ್ಲ. ಆದರೆ, ಮಾನ್ಯ ಸಚಿವರು ತೆಲುಗು ಚಿತ್ರವೊಂದನ್ನು ಅರ್ಪಿಸುತ್ತಿರುವುದು ಸುದ್ದಿ ಮಾತ್ರ ನೂರಕ್ಕೆ ನೂರರಷ್ಟು ಸತ್ಯ.

ರಿಯಲ್ ಸ್ಟಾರ್ ಉಪೇಂದ್ರ ಅಭಿಯನದ 'ಬುದ್ಧಿವಂತ' ಕನ್ನಡ ಚಿತ್ರವನ್ನು ತೆಲುಗಿಗೆ ಡಬ್ ಮಾಡಲಾಗಿದ್ದು. ಆ ಚಿತ್ರವನ್ನು ಅರ್ಪಿಸುತ್ತಿರುವುದು ಪ್ರವಾಸೋಧ್ಯಮ ಸಚಿವ ಜನಾರ್ದನರೆಡ್ಡಿ ಅವರು ಎನ್ನುವುದು ವಿಶೇಷವಾಗಿದೆ. ಈ ವಿಷಯವೇನಾದರೂ ದೇವೇಗೌಡ ಇಲ್ಲ, ಕುಮಾರಸ್ವಾಮಿ ಅವರ ಕಿವಿಗೆ ಬಿದ್ದರೆ, ಇನ್ನೊಂದು ರೌಂಡ್ ಯಡಿಯೂರಪ್ಪ ಅವರ ಜನ್ಮ ಜಾಲಾಡುವುದರಲ್ಲಿ ಸಂಶಯವಿಲ್ಲ.

ಯಡಿಯೂರಪ್ಪ ಸಂಪುಟದ ಇನ್ನೊಬ್ಬ ಪ್ರಭಾವಿ ಮಂತ್ರಿ ಶ್ರೀರಾಮುಲು ಕೂಡಾ ನಟನೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. 'ಜೋಗಿ' ಚಿತ್ರ ಬಳ್ಳಾರಿಯಲ್ಲಿ ಭರ್ಜರಿ ಪ್ರದರ್ಶನ ಕಾಣಲು ಶ್ರೀರಾಮುಲು ಕಾರಣ ಎಂದು ಬಳ್ಳಾರಿ ಜನ ಹೇಳುತ್ತಾರೆ. ಸಿನಿಮಾ ಹುಚ್ಚು ಹಿಡಿಸಿಕೊಂಡಿರುವ ಶ್ರೀರಾಮುಲು ತೆರೆ ಮೇಲೆ ಬರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎನ್ನುತ್ತಾರೆ ಅವರ ವಿರೋಧಿಗಳು.

ಸಂಪುಟ ಯಾವುದೇ ಸಚಿವ ಅಪ್ಪಿತಪ್ಪಿಯೂ ಎಡವಿದರೆ, ಗೌಡರ ಕುಟುಂಬ ಸರ್ಕಾರದ ಮೇಲೆ ಮುಗಿಬೀಳುವುದು ಗ್ಯಾರಂಟಿ. ಜನಾರ್ದನರೆಡ್ಡಿ ತೆಲುಗು ಚಿತ್ರವನ್ನು ಅರ್ಪಿಸುವುದು ಸಾಮಾನ್ಯ ಮಾತೇ........ಅಕಟಕಟಾ................

(ದಟ್ಸ್ ಕನ್ನಡ ವಾರ್ತೆ)
ಎಲ್ಲಾ ಓಕೆ ಮೀಸೆ ಯಾಕೆ ಎಂದ ದುಬೈ ಬಾಬು!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+