ಅಲ್ಪಸಂಖ್ಯಾತರ ಜೀವನ ಭಯದಲ್ಲಿದೆ : ಯುಆರ್ ಎ
ಮೈಸೂರು,
ಮಾ. 16 : ಬಿಜೆಪಿ ಪಕ್ಷದೊಂದಿಗೆ ಕಾಲು ಕೆದರಿ ಜಗಳ ಕಾಯದಿದ್ದರೆ ನಮ್ಮ ಜ್ಞಾನಪೀಠ ಪುರಸ್ಕೃತ ಸಾಹಿತಿ ಅನಂತಮೂರ್ತಿ ಅವರಿಗೆ ನಿದ್ದೆ ಬರುವುದಿಲ್ಲವೇನೂ, ಹಾಗಂತ ಬಿಜೆಪಿ ಕಾರ್ಯಕರ್ತರೊಬ್ಬರು ಕಿಡಿಕಾರುತ್ತಿದ್ದರು. ಲೋಕಸಭೆ ಚುನಾವಣೆಗೆ ಮುನ್ನ ಕೇಸರಿ ಪಡೆಯ ಮುಗಿಬಿದ್ದಿರುವ ಅವರು, ಬಿಜೆಪಿ ಪಕ್ಷದ ಮೇಲೆ ಇದೀಗ ಮತ್ತೊಂದು ಬಾಂಬ್ ಎಸೆದಿದ್ದಾರೆ. ಭಾರತೀಯ ಜನತಾ ಪಕ್ಷ ಭಾರತವನ್ನು ಬಹುಸಂಖ್ಯಾತರ ದೇಶವನ್ನಾಗಿ ಮಾಡಲು ಹೊರಟಿದೆ. ಇದರಿಂದ ಮುಸ್ಲಿಮರು ಹಾಗೂ ದಲಿತರು ಜೀವನ ಮಾಡುವುದು ಕಷ್ಟಸಾಧ್ಯವಾಗಿದೆ ಎನ್ನುವುದು ಅವರ ಅಭಿಮತವಾಗಿದೆ. id="toptextpromo">ಮೈಸೂರು
ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸೆಮಿನಾರ್ ಕಾರ್ಯಕ್ರಮವೊದರಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು. ಕರ್ನಾಟಕದಲ್ಲಿ ಮುಸ್ಲಿಮರ ಸ್ಥಿತಿ ಚಿಂತಾಜನಕವಾಗಿದೆ. ಭಯದ ನೆರಳಲ್ಲಿ ಜೀವನ ಸಾಗಿಸಬೇಕಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದ ಕೆಲ ಘಟನೆಗಳು ನಾಗರಿಕ ಸಮಾಜಕ್ಕೆ ವಿರೋಧಿ ಕೃತ್ಯಗಳು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನಾನು ಕರ್ನಾಟಕದವನು ಎಂದು ಹೇಳಿಕೊಳ್ಳಲು ನಾಚಿಕೆ ಪಡುವಂತಾಗಿದೆ ಎಂದರು. id='are-slot-1' class='oiad oi-axt oiadv'> id='top-searched-articles'>ಮುಸ್ಲಿಮರು
ಹಾಗೂ ದಲಿತರು ಒಟ್ಟಾಗಿ ಹೋರಾಟ ಮಾಡಬೇಕಿದೆ. ಇಂತಹ ಶಕ್ತಿಗಳಿಗೆ ಹೆದರದೆ ಧೈರ್ಯದಿಂದ ಮುನ್ನುಗ್ಗಬೇಕಿದೆ ಎಂದು ಕರೆ ನೀಡಿದರು. ಮಂಗಳೂರು ಘಟನೆ ಗುಜರಾತ ನರಮೇಧವನ್ನು ನೆನಪಿಸಿತು ಎಂದು ಆತಂಕದಿಂದ ಮಾತನಾಡಿದ ಅನಂತಮೂರ್ತಿ, ಬಿಜೆಪಿ ಸರ್ಕಾರ ಅದಕ್ಕೆ ಬೆಂಬಲ ನೀಡಿದ್ದು, ಅತ್ಯಂತ ದುರದೃಷ್ಟಕರ ಸಂಗತಿ ಎಂದು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ ಎಲ್ಲ ರಂಗದಲ್ಲೂ ಮುಸ್ಲಿಮರನ್ನು ಕಡೆಗಣಿಸಲಾಗಿದೆ ಎಂದು ಅವರು ಆರೋಪಿಸಿದರು.











Click it and Unblock the Notifications