ಹಣ ಹಂಚಿಕೆ, ಇದೀಗ ನಟ ಗೋವಿಂದನ ಸರದಿ

ಮುಂಬೈನ ಜುಹೂ ಪ್ರದೇಶದಲ್ಲಿರುವ ನಿವಾಸದಲ್ಲಿ ಹೋಳಿ ಹಬ್ಬ ಆಚರಣೆ ವೇಳೆ ಸಂಸದ ಗೋವಿಂದ ಹಣ ಹಂಚಿರುವುದು ಕಂಡು ಬಂದಿದೆ. ತಕ್ಷಣ ಜಾಗೃತರಾಗಿರುವ ಚುನಾವಣಾ ಆಯೋಗದ ಮುಖ್ಯಸ್ಥ ದೇಬಶೀಸ್ ಚಕ್ರಬರ್ತಿ ಅವರು ಸಬ್ ಅರ್ಬನ್ ಚುನಾವಣೆ ಅಧಿಕಾರಿಗಳಿಗೆ ಪ್ರಕರಣದ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೋವಿಂದ, ಹೋಳಿ ಹಬ್ಬದ ದಿನ ಪ್ರತಿ ವರ್ಷ ಬಡವರಿಗೆ ಹಬ್ಬವನ್ನು ಆಚರಿಸಲು ನನ್ನ ಕೈಲಾದ ಧನಸಹಾಯ ಮಾಡುತ್ತಾ ಬಂದಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಹಿತಾಸಕ್ತಿ ಅಡಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಹೋಳಿ ಹಬ್ಬಕ್ಕೆ ಎಸ್ಪಿಯಿಂದ 100 ರು, ಬಹುಮಾನ












Click it and Unblock the Notifications