ಹಣಕ್ಕಾಗಿ ಮತ ಮಾರಿಕೊಳ್ಳುವ ಕನ್ನಡಿಗರು

ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ಎನ್ನುವ ದೆಹಲಿ ಮೂಲದ ಸಂಸ್ಥೆ ದೇಶದ 19 ರಾಜ್ಯಗಳಲ್ಲಿ ಸಂಚರಿಸಿ ಸುಮಾರು 41,000 ಮತದಾರರರನ್ನು ಸಮೀಕ್ಷೆಗೆ ಒಳಪಡಿಸಿ ಈ ಅಂಕಿ ಅಂಶ ಹೊರತಂದಿದೆ. ಮತಕ್ಕಾಗಿ ಲಂಚ ಪಡೆಯುವವರನ್ನು ಸಾಮಾನ್ಯ ಮತ್ತು ಬಿಪಿಎಲ್ ಎಂದು ಎರಡು ವಿಭಾಗಗಳಾಗಿ ವಿಂಗಡಿಸಿದೆ.
ಸಾಮಾನ್ಯ ವಿಭಾಗದಲ್ಲಿ ಶೇಕಡಾವಾರು 47 ರಷ್ಟು ಜನ ಮತಕ್ಕಾಗಿ ಹಣ ಪಡೆಯುವದರಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದ್ದರೆ, ತಮಿಳುನಾಡು ಶೇ. 34 ಹಾಗೂ ಮಧ್ಯಪ್ರದೇಶದ ಶೇ. 33 ರಷ್ಟು ಮಂದಿ ಹಣ ಪಡೆದು ಮತ ಹಾಕುವ ಮೂಲಕ ಎರಡು ಮತ್ತು ಹಣ ಪಡೆದು ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿದೆ.
ಬಡತನ ವರ್ಗಕ್ಕಿಂತ ಕೆಳಗಿನ (ಬಿಪಿಎಲ್) ವರ್ಗದಲ್ಲಿ ಶೇ. 94 ರಷ್ಟು ಹಣ ಪಡೆದು ಆಂಧ್ರಪ್ರದೇಶ ಮೊದಲನೇ ಸ್ಥಾನದಲ್ಲಿದ್ದರೆ, ಶೇ. 78 ರಷ್ಟು ಹಣ ಪಡೆದು ತಮಿಳುನಾಡು ಎರಡನೇ ಸ್ಥಾನದಲ್ಲಿ ಮತ್ತು ಶೇ. 73 ರಷ್ಟು ಹಣ ಪಡೆದು ಕರ್ನಾಟಕ ಮೂರನೆ ಸ್ಥಾನದಲ್ಲಿದೆ.
ಸಮೀಕ್ಷೆಯಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಎನ್ ಡಿ ಎ ಪ್ರಭಾವ ಇರುವ ರಾಜ್ಯಗಳಲ್ಲಿ ಮತದಾರರು ಮತ ಹಾಕಲು ಹೆಚ್ಚಾಗಿ ಹಣ ಪಡೆಯುತ್ತಾರೆ. ಎನ್ ಡಿ ಎ ಪ್ರಭಾವವಿರುವ ರಾಜ್ಯಗಳಲ್ಲಿ ಶೇಕಡಾ 27, ಯುಪಿಎ ಪ್ರಭಾವ ಇರುವ ರಾಜ್ಯಗಳಲ್ಲಿ ಶೇಕಡಾ 21 ಮತ್ತು ಎಡಪಕ್ಷಗಳ ಪ್ರಭಾವದ ರಾಜ್ಯಗಳಲ್ಲಿ ಶೇಕಡಾ 13 ರಷ್ಟು ಮತದಾರರು ಮತ ಹಾಕಲು ಲಂಚ ಪಡೆಯುತ್ತಾರೆ ಎಂದು ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications