ಇಂದಿನಿಂದ ಬೆಂಗಳೂರು ಹಬ್ಬ ಆರಂಭ
ಬೆಂಗಳೂರು, ಫೆ. 15 : ಸಿಲಿಕಾನ್ ಸಿಟಿ ಸಂಸ್ಕೃತಿ ಮತ್ತು ಸಂಭ್ರಮವನ್ನು ಪ್ರತಿ ಬಿಂಬಿಸುವ ಬೆಂಗಳೂರು ಹಬ್ಬ (ಭಾನುವಾರ, ಫೆ 15) ಇಂದಿನಿಂದ ಆರಂಭಗೊಳ್ಳಲಿದ್ದು, ಒಂಬತ್ತು ದಿನಗಳ ಕಾಲ ನಡೆಯಲಿದೆ.
ಕಲೆಗಾಗಿ ಕಲಾವಿದರ ಪ್ರತಿಷ್ಠಾನ (ಆಫಾ) ಏರ್ಪಡಿಸಿರುವ ಬೆಂಗಳೂರು ಹಬ್ಬ ನಗರದ 15 ಪ್ರಮುಖ ಸ್ಥಳಗಳಲ್ಲಿ ನಡೆಯಲಿದ್ದು, 50ಕ್ಕೂ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದೆ. ಖಾತ ಸಂಗೀತಗಾರರಾದ ಶಂಕರ್ ಎಹಸಾನ್ ಲಾಯ್, ಅನೂಷ್ಕಾ ಶಂಕರ್, ಗುಂಡೇಚಾ ಸಹೋದರರು, ಪಂಡಿತ್ ರಾಜೀವ್ ತಾರಾನಾಥ್, ಪಂಡಿತ್ ಮಾಧವ ಗುಡಿ, ಗುರುಕಿರಣ್, ಪ್ರವೀಣ್ ಗೋಡ್ಖಿಂಡಿ ಮತ್ತಿತರು ಸಂಗೀತ ಪ್ರೇಮಿಗಳ ಮನ ತಣಿಸಲಿದ್ದಾರೆ.
ಎಂ ಎಸ್ ಶೀಲಾ, ಸಂಗೀತ ಕಟ್ಟಿ ಮತ್ತಿತರರು ಗಾಯನ ಲೋಕದಲ್ಲಿ ತೇಲಿಸಲಿದ್ದಾರೆ. ನಾಟಕ, ಕವಿಗೋಷ್ಠಿ ಹಾಗೂ ಮಾತುಕತೆ ಎಲ್ಲವೂ ರಂಜಿಸಲಿದೆ. ಅರಮನೆ ಮೈದಾನ, ಚೌಡಯ್ಯ ಭವನ, ರಂಗಶಂಕರ, ಸೇವಾ ಸದನ, ಗಾಯನ ಸಮಾಜ, ಕಬ್ಬನ್ ಉದ್ಯಾನ, ಮ್ಯಾಕ್ಸ್ ಮುಲ್ಲರ್ ಭವನ, ಲಕ್ಷ್ಮಿದೇವಿ ಉದ್ಯಾನ, ಎಂ ಎನ್ ಕೃಷ್ಣರಾವ್ ಉದ್ಯಾನ, ಬಿಬಿಎಂಪಿ ಉದ್ಯಾನ, ಯುವನಿಕಾ, ಕರ್ನಾಟಕ ಚಿತ್ರಕಲಾ ಪರಿಷತ್, ಸದಾಶಿವನಗರ ಮತ್ತು ರಾಜಾಜಿನಗರದಲ್ಲಿ ಕಾರ್ಯಕ್ರಮ ನಡೆಯಲಿವೆ ಎಂದು ಆಫಾ ಸಂಸ್ಥೆಯ ಟ್ರಸ್ಟಿ ನಂದಿನಿ ಅಳ್ವಾ ತಿಳಿಸಿದ್ದಾರೆ.
ಪ್ರತಿ ದಿನ ಸಂಜೆ 6.30ರ ಸುಮಾರಿಗೆ ಕಾರ್ಯಕ್ರಮ ನಡೆಯಲಿದ್ದು, ವಿವಿಧ ಸ್ಥಳಗಳಲ್ಲಿ ಸಾರ್ವಜನಿಕರು ವೀಕ್ಷಿಸುಬಹುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ, www.bengaluruhabba.co.in
(ದಟ್ಸ್ ಕನ್ನಡ ವಾರ್ತೆ)
ಬೆಂಗಳೂರು ಹಬ್ಬ ಕೆಂಪೇಗೌಡ ಹಬ್ಬವನ್ನಾಗಿ ಆಚರಣೆ












Click it and Unblock the Notifications