ಬೆಂಗಳೂರು ಹಬ್ಬ ಕೆಂಪೇಗೌಡ ಹಬ್ಬವನ್ನಾಗಿ ಆಚರಣೆ
ಬೆಂಗಳೂರು, ಫೆ. 12 : ಬೆಂಗಳೂರು ಹಬ್ಬವನ್ನು ಕೆಂಪೇಗೌಡ ಹಬ್ಬವನ್ನಾಗಿ ತಿಂಗಳ ಕೊನೆಯಲ್ಲಿ ಆಚರಿಸಲಾಗುವುದು ಎಂದು ಸಾರಿಗೆ ಸಚಿವ ಆರ್ ಅಶೋಕ್ ತಿಳಿಸಿದರು. ಪದ್ಮನಾಭನಗರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಯಡಿಯೂರು ಹಾಗೂ ಇತರೆಡೆ 2.46 ಕೋಟಿ ರುಪಾಯಿ ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ರದ್ದಾಗಿರುವ ಬೆಂಗಳೂರು ಹಬ್ಬಕ್ಕೆ ಮತ್ತೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಈ ಕುರಿತು ಜನಪ್ರತಿನಿಧಿಗಳು ಸಮಿತಿಯೊಂದನ್ನು ರಚಿಸಲಾಗುವುದು. ಈ ಸಮಿತಿ ಹಬ್ಬದ ರೂಪುರೇಷೆಯನ್ನು ಸಿದ್ಧಗೊಳಿಸುತ್ತದೆ. ಕೆಂಪೇಗೌಡ ಹಬ್ಬ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯಾದ್ಯಂತ ನಡೆಯಬೇಕು. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು ಎಂದು ಅಶೋಕ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications