ಮಾಲೇಗಾಂವ್ ಸ್ಫೋಟ ಆರೋಪಪಟ್ಟಿ ಸಲ್ಲಿಕೆ

ಮುಂಬೈ, ಜ. 20 : ಮಾಲೇಗಾಂವ್ ಸ್ಫೋಟಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಪಡೆಯ (ಎಟಿಎಸ್) ಪೊಲೀಸರು ಇಂದು 400 ಪುಟಗಳ ಸಮಗ್ರ ಮಾಹಿತಿ ಹೊಂದಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್ ಮಾಲೇಗಾಂವ್ ಸ್ಫೋಟದ ಪ್ರಮುಖ ಆರೋಪಿ ಎಂದು ಬಿಂಬಿಸಲಾಗಿದೆ.

ಮುಂಬೈ ಭಯೋತ್ಪಾದನೆಯಲ್ಲಿ ನಿಧನರಾದ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ಅವರು ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕರ್ನಲ್ ಪುರೋಹಿತ್ ನೀಡಿರುವ ತಪ್ಪೊಪ್ಪಿಗೆಯ ಸಮಗ್ರ ಮಾಹಿತಿ ವರದಿಯಲ್ಲಿದೆ. ಹಾಲಿ ಸೇನಾಧಿಕಾರಿಯಾಗಿದ್ದ ಪುರೋಹಿತ್ ಅವರು ಮಾಲೇಗಾಂವ್ ಸ್ಫೋಟಕ್ಕೆ ಸ್ಫೋಟಕ ಸಾಮಗ್ರಿಗಳು ಸೇರಿದಂತೆ ಹಣಕಾಸಿನ ನೆರವು ನೀಡಿರುವುದನ್ನು ತಪ್ಪೊಪ್ಪಿಕೆ ಹೇಳಿಕೆಯಲ್ಲಿ ಬಹಿರಂಗಪಡಿಸಿದ್ದರು.

ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಒಟ್ಟು 11 ಮಂದಿಯ ಮೇಲೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಪ್ರಮುಖವಾಗಿ ಸಾಧ್ವಿ ಪ್ರಗ್ಯಾಸಿಂಗ್ ಠಾಕೂರ್, ಲೆಫ್ಟಿನೆಂಟ್ ಪ್ರಸಾದ ಪುರೋಹಿತ್, ಶಿವನಾರಾಯಣ ಕಾಳಸಂಗ್ರ ಸಿಂಗ್, ಶಾಲ್ಮಲಾ ಸಾಹು, ಅಭಿನವ್ ಭರತ್, ಸಮೀರ್ ಕುಲಕರ್ಣಿ, ನಿವೃತ್ತ ಮೇಜರ್ ರಮೇಶ ಉಪಾಧ್ಯಯ, ಅಜಯ್ ರಾಹಿರ್ ಕರ್, ರಾಕೇಶ್ ದಾವಡೆ, ಜಗದೀಶ್ ಮಹಾತ್ರೆ ಮತ್ತು ದಯಾನಂದ ಪಾಂಡೆ ಅವರ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಪ್ರಗ್ಯಾಸಿಂಗ್ ಜ 6ವರೆಗೆ ನ್ಯಾಯಾಂಗ ಬಂಧನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+