ಸತ್ಯಂ ಉದ್ಯೋಗಿಗಳ ಸೆಳೆಯುವುದಿಲ್ಲ:ಇನ್ಫಿ
ನವದೆಹಲಿ, ಜ. 12 : ಹಗರಣದಲ್ಲಿ ಮುಳುಗಿ ಒದ್ದಾಡುತ್ತಿರುವ ಸತ್ಯಂ ಕಂಪನಿಯ ನುರಿತ ಉದ್ಯೋಗಿಗಳ ಸೆಳೆಯುವ ಪ್ರಯತ್ನವನ್ನು ಇನ್ಫೋಸಿಸ್ ಹಾಗೂ ವಿಪ್ರೋ ಕಂಪನಿಗಳು ಮಾಡುತ್ತಿವೆ ಎಂಬ ಗಾಳಿ ಸುದ್ದಿಯೊಂದು ಕಾರ್ಪೋರೇಟ್ ವಲಯದಲ್ಲಿ ದಟ್ಟವಾಗಿ ಹಬ್ಬಿದೆ. ಆದರೆ, ಇದನೆಲ್ಲಾ ಅಲ್ಲಗೆಳೆದಿರುವ ಇನ್ಫೋಸಿಸ್ ಹಾಗೂ ವಿಪ್ರೋ ಕಂಪನಿಯ ಎಚ್ ಆರ್ ಡಿ ಮುಖ್ಯಸ್ಥರು, ಸತ್ಯಂ ಉದ್ಯೋಗಿಗಳು ಸೆಳೆಯುವ ಕೆಲಸಕ್ಕೆ ಕೈಹಾಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಸತ್ಯಂ ನೌಕರರು ನಮ್ಮ ಸಂಸ್ಥೆ ಮಾನವ ಸಂಪನ್ಮೂಲ ವಿಭಾಗಕ್ಕೆ ಅರ್ಜಿ ಸಲ್ಲಿಸಿದ್ದಲ್ಲಿ ಆ ಅರ್ಜಿಯ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸತ್ಯಂ ಕಂಪನಿಯ ಉದ್ಯೋಗಿಗಳು, ಕಸ್ಟಮರ್ಸ್ ಹಾಗೂ ಕ್ಲಯೆಂಟ್ ಗಳನ್ನು ಸೆಳೆದುಕೊಳ್ಳುತ್ತಿಲ್ಲ. ಅವರು ಇಷ್ಟಪಟ್ಟು ನಮ್ಮೊಂದಿಗೆ ಕೆಲಸ ಮಾಡಲು ಇಚ್ಛಿಸಿದಲ್ಲಿ ಈ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸುವುದಾಗಿ ಇನ್ಫೋಸಿಸ್ ಎಚ್ ಆರ್ ಡಿ ಮುಖ್ಯಸ್ಥ ಮೋಹನ್ ದಾಸ್ ಪೈ ಸ್ಪಷ್ಟಪಡಿಸಿದ್ದಾರೆ. ವಿಪ್ರೋ ಹಣಕಾಸು ವಿಭಾಗದ ಮುಖ್ಯಸ್ಥ ಸುರೇಶ್ ಸೇನಾಪತಿ ಕೂಡ ಅದೇ ರಾಗ ಹಾಡಿದ್ದು, ನಮ್ಮೊಂದಿಗೆ ಕಾರ್ಯನಿರ್ವಹಿಸಲು ಮುಂದಾದರೆ ಬೇಡ ಅನ್ನಲು ಸಾಧ್ಯವಿಲ್ಲ. ಅವರಿಂದ ನಮ್ಮ ವ್ಯಾಪಾರ-ವಹಿವಾಟು ವೃದ್ಧಿಯಾಗಲಿದೆ ಎನ್ನುವುದಾದರೆ ನಿರಾಕರಿಸುವ ಮಾತೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಸತ್ಯಂ ಒಪ್ಪಂದಗಳ ವರದಿಗೆ ಸಿಎಂ ಸೂಚನೆ
ಸತ್ಯಂ ನೂತನ ಅಡಳಿತ ಮಂಡಳಿ ನೇಮಕ











Click it and Unblock the Notifications