ಕಲ್ಪನಾ ಸಿದ್ದರಾಜುಗೆ ಮದ್ದೂರು ವಡೆ
ಮದ್ದೂರು, ಡಿ. 30 : ಕೊನೆಗೂ ಮದ್ದೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಕಲ್ಪನಾ ಸಿದ್ದರಾಜು ನಿರೀಕ್ಷಿತ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಡಿಸಿ ತಮ್ಮಣ್ಣ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಎಸ್ ಎಂ ಕೃಷ್ಣ ಅವರ ಸಹೋದರನ ಪುತ್ರ ಗುರುಚರಣ್ ಸೋತು ಮುಖಭಂಗಕ್ಕಿಡಾಗಿದ್ದಾರೆ. ಮೂರು ಪಕ್ಷಗಳಿಗೆ ಭಾರಿ ಪ್ರತಿಷ್ಠೆಯ ಕಣವಾಗಿದ್ದ ಮದ್ದೂರು ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಜೆಡಿಎಸ್ ಮುಖಂಡರು ಯಶಸ್ವಿಯಾಗಿದ್ದಾರೆ.
ದೇವೇಗೌಡರಿಗೆ ಮದ್ದೂರು ಕ್ಷೇತ್ರ ಭಾರಿ ಪ್ರತಿಷ್ಠೆಯಾಗಿ ಪರಿಣಮಿಸಿತ್ತು. ಒಂದಡೆ ತಮ್ಮ ಸಂಬಂಧಿ ಡಿಸಿ ತಮ್ಮಣ್ಣ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೇರ್ಪಡೆಯಾಗಿ ಕಮಲ ಚಿಹ್ನೆಯಡಿ ಸ್ಪರ್ಧಿಗಳಿದಿದ್ದರೆ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಬೆಂಬಲದೊಂದಿಗೆ ಅವರ ತಮ್ಮ ಮಗ ಗುರುಚರಣ್ ಅಖಾಡದಲ್ಲಿದ್ದರು.
ಇಲ್ಲಿ ಅಕ್ಷರಶಃ ತ್ರಿಕೋನ ಸ್ಪರ್ಧೆ, ಮೂವರು ಅಭ್ಯರ್ಥಿಗಳು ಕೂಡ ಘಟಾನುಘಟಿಗಳೆ, ಆದರೆ ಕಲ್ಪನಾ ಸಿದ್ದರಾಜು ಅವರನ್ನು ಮದ್ದೂರಿನ ಜನ ಕೈಬಿಡಲಿಲ್ಲ. ಇದೇ ಕಾರಣಕ್ಕಾಗಿ ಗೌಡರು ಕೂಡಾ ಮದ್ದೂರಿನಲ್ಲಿ ಪಕ್ಷ ಗೆಲುವು ಸಾಧಿಸಲಿದೆ ಎನ್ನುವ ಲೆಕ್ಕಾಚಾರದಲ್ಲಿಯೇ ಇದ್ದರು. ಅನುಕಂಪದ ಅಲೆ ಉತ್ತಮ ಕೆಲಸ ಮಾಡಿದ್ದು. ಕೊನೆಗೂ ಜೆಡಿಎಸ್ ಮದ್ದೂರು ತನ್ನ ವಶಕ್ಕೆ ತೆಗೆದುಕೊಳ್ಳುವ ಮೂಲಕ ತನ್ನ ಸಾಮರ್ಥ್ಯವನ್ನು ಮೆರೆದಿದೆ ಎನ್ನಬಹುದಾಗಿದೆ.
ರ
ಕಲ್ಪನಾ ಸಿದ್ದರಾಜು ಅವರು ಒಟ್ಟು 69,317 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಡಿ ತಮ್ಮಣ್ಣ 49,923 ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗುರುಚರಣ್ 13,468 ಮತಗಳನ್ನು ಪಡೆದುಕೊಂಡಿದ್ದಾರೆ. ಇದರೊಂದಿಗೆ 19,394 ಮತಗಳ ಅಂತರದಿಂದ ಕಲ್ಪನಾ ಸಿದ್ದರಾಜು ಗೆಲುವು ಸಾಧಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮಧುಗಿರಿ, ಮದ್ದೂರಿನ ಜೆಡಿಎಸ್ ಗೆಲುವಿನ ನಗೆ?
ಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು












Click it and Unblock the Notifications