ತುರುವೇಕೆರೆ ತಿರುಗುಮುರುಗಾದ ಫಲಿತಾಂಶ

ತುಮಕೂರು, ಡಿ. 30 : ತಾಂತ್ರಿಕ ಕಾರಣಗಳಿಂದ ಬಿಜೆಪಿ ಅಭ್ಯರ್ಥಿ ಎಂ ಡಿ ಲಕ್ಷ್ಮಿನಾರಾಯಣ ಗೆಲುವು ಎಂದು ಹೇಳಲಾಗಿತ್ತು. ಆದರೆ ಇದೀಗ ಬಂದಿರುವ ಮಾಹಿತಿ ಪ್ರಕಾರ ತುರುವೇಕೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ ಟಿ ಕೃಷ್ಣಪ್ಪ ವಿಜಯಮಾಲೆ ಧರಿಸಲಿದ್ದಾರೆ ಎನ್ನಲಾಗಿದೆ. ಇದು ಅಧಿಕೃತವಾಗಿ ಚುನಾವಣೆ ಆಯೋಗ ಸ್ಪಷ್ಟಪಡಿಸಬೇಕಿದೆ. ಎಂ ಟಿ ಕೃಷ್ಣಪ್ಪ 3600 ಮತಗಳ ಮುಂದಿದ್ದು, ಬಹುತೇಕ ಗೆಲುವು ಖಚಿತ ಎನ್ನಲಾಗಿದೆ.

ಜಗ್ಗೇಶ್ ಮಾಡಿಕೊಂಡ ಅನೇಕ ಅವಾಂತರಗಳಿಂದ ತುರುವೇಕೆರೆಯಲ್ಲಿ ಬಿಜೆಪಿಗೆ ಗೆಲುವು ಕಷ್ಟಸಾಧ್ಯ ಎಂದೇ ಹೇಳಲಾಗಿತ್ತು. ಆದರೆ ಇದೆನ್ನೆಲ್ಲಾ ಹುಸಿಗೊಳಿಸಲು ಬಿಜೆಪಿ ಅಭ್ಯರ್ಥಿ ಎಂ ಡಿ ಲಕ್ಷ್ಮಿನಾರಾಯಣ ಭಾರಿ ಸಾಹಸ ಮಾಡಿದರೂ ಏನೂ ಗಿಟ್ಟಲಿಲ್ಲ. ಈ ಮೂಲಕ ಅನೇಕ ವರ್ಷಗಳಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನ ಕಮಲ ತನ್ನ ವಶಕ್ಕೆ ತೆಗೆದುಕೊಳ್ಳಲು ಶತಪ್ರಯತ್ನ ವಿಫಲವಾಗುವ ಸಾಧ್ಯತೆಗಳಿವೆ. ಅಂತಿಮ ಸುತ್ತಿನ ಮತ ಎಣಿಕೆ ಆರಂಭವಾಗಿದೆ, ಜೆಡಿಎಸ್ ಭದ್ರಕೋಟೆ ಎನ್ನಲಾದ ಸಿ ಎಸ್ ಪುರ ಹೋಬಳಿಯ ಮತಗಳ ಕಾರ್ಯ ಆರಂಭವಾಗಿದೆ. ಇಲ್ಲಿ ಎಲ್ಲ ಮತಗಳೂ ಕೂಡಾ ಜೆಡಿಎಸ್ ಗೆ ಎನ್ನಲಾಗಿದೆ.

ಅಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜಗ್ಗೇಶ್ ಬಿಜೆಪಿ ಸೇರ್ಪಡೆಗೊಂಡಿದ್ದರು. ಬಿಜೆಪಿ ಪಕ್ಷ ಅವರನ್ನು ಕೆಎಸ್ ಆರ್ ಟಿಸಿ ಉಪಾಧ್ಯಕ್ಷ ಹುದ್ದೆಯಲ್ಲಿ ನೇಮಿಸಲಾಗಿದೆ. ಆದರೆ ಜಗ್ಗೇಶ್ ತುರುವೇಕೆರೆ ಕಾಂಗ್ರೆಸ್ ನಾಯಕರನ್ನು ಹಿಗ್ಗಾಮುಗ್ಗಾ ಟೀಕೆಯ ಜೊತೆಗೆ ಜನರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರು. ಇದರಿಂದ ಜಗ್ಗೇಶ್ ಮೇಲಿರುವ ಕೋಪವನ್ನು ಬಿಜೆಪಿ ಅಭ್ಯರ್ಥಿ ಲಕ್ಷ್ಮಿನಾರಾಯಣ ಮೇಲೆ ತೀರಿಸಿಕೊಳ್ಳುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಈ ಮಾತು ಮತಗಳಾಗಿ ಪರಿವರ್ತನೆಯಾಗಿದೆಯೇ ?

(ದಟ್ಸ್ ಕನ್ನಡ ವಾರ್ತೆ)
ಕಲ್ಪನಾ ಸಿದ್ದರಾಜುಗೆ ಮದ್ದೂರು ವಡೆ
ಜಯದ ಹಾದಿಯಲ್ಲಿ ಅನಿತಾ ಕುಮಾರಸ್ವಾಮಿ
ಕಮಲ ಪಕ್ಷಕ್ಕೆ ಪ್ಲೇವಿನ್ ಲಾಟರಿ ಹೊಡಿತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+