ಮೈಸೂರಿನಲ್ಲಿ ವಿಶ್ವಮಾನವ ಕಾವ್ಯಗಾಯನ
ಮೈಸೂರು, ಡಿ. 28: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಡಿ.29 ರಂದು ಬೆಳಿಗ್ಗೆ 10.30 ಕ್ಕೆ ಗನ್‌ಹೌಸ್ ಎದುರಿನ ವಿಶ್ವಮಾನವ ಉದ್ಯಾನವನದಲ್ಲಿ ಮಹಾಕಾವ್ಯಗಳ ಗಾಯನವನ್ನು ರಾಷ್ಟ್ರಕವಿ ಕುವೆಂಪು ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಿದೆ.
ಮಹಾಕಾವ್ಯಗಳ ಗಾಯನವು ಕಾ.ಹಿ. ರಾಧಾಕೃಷ್ಣ ಅವರಿಂದ ನಡೆಯಲಿದ್ದು, ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಪ. ಮಲ್ಲೇಶ್ ಅಧ್ಯಕ್ಷತೆ ವಹಿಸುವರು. ಮುಕ್ತ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ: ಬಿ.ಎ. ವಿವೇಕ ರೈ ಮುಖ್ಯ ಭಾಷಣಕಾರರಾಗಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಿ.ಸಿ. ಜಯಣ್ಣ ಹಾಗೂ ಪಾಲಿಕೆ ಸದಸ್ಯ ಎಂ. ಜಯಶಂಕರಸ್ವಾಮಿ ಅತಿಥಿಗಳಾಗಿ ಭಾಗವಹಿಸುವರು ಎಂದು ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ತಿಳಿಸಿದ್ದಾರೆ.
****
ಕುವೆಂಪು ಸ್ಮರಣೆ
ನಗರ ಕೇಂದ್ರ ಗ್ರಂಥಾಲಯ ಮತ್ತು ಕುವೆಂಪು ವಿಚಾರ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕುವೆಂಪು ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಡಿ.30ರಂದು ಬೆಳಿಗ್ಗೆ 10ಗಂಟೆಗೆ ಕುವೆಂಪುನಗರ ಶಾಖೆ ಜೋಡಿ ರಸ್ತೆಯಲ್ಲಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮವು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ: ಪಿ. ವೆಂಕಟರಾಮಯ್ಯ ಅವರಿಂದ ಉದ್ಘಾಟನೆಯಾಗಲಿದ್ದು, ಕುವೆಂಪು ಅವರನ್ನು ಕುರಿತು ಎಸ್. ಚನ್ನಪ್ಪನವರು ರಚಿಸಿದ ಕುವೆಂಪು ಕಥೆ ಕೃತಿಯನ್ನು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ: ರಾಗೌ ಬಿಡುಗಡೆಗೊಳಿಸುವರು.
ಅಧ್ಯಕ್ಷರಾಗಿ ಮೈಸೂರು ಮಹಾನಗರ ಪಾಲಿಕೆ ಮಹಾಪೌರ ಆಯೂಬ್ ಖಾನ್, ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಗೋಪಿನಾಥ್ ಹಾಗೂ ಕನ್ನಡಪ್ರಭ ಮುಖ್ಯ ವರದಿಗಾರ ಅಂಶಿ ಪ್ರಸನ್ನಕುಮಾರ್ ಆಗಮಿಸುವರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications