ಭಾರತೀಯ ನೌಕಾಪಡೆ, ಭೂಸೇನೆಗೆ ಸೇರಿ
ಮೈಸೂರು, ಡಿ.28: ಭಾರತೀಯ ನೌಕಾ ಪಡೆಯ ಸ್ಟೆವರ್ಡ್ಸ್ , ಕುಕ್ಸ್ ಮತ್ತು ಟೊಪಾಜ್ ಹುದ್ದೆಗಳಿಗಾಗಿ 17 ರಿಂದ 21 ವರ್ಷಗಳ ವಯೋಮಿತಿಯ (01.10.1988 ರಿಂದ 30.09.1992ರ ಒಳಗೆ ಜನಿಸಿದ), 6 ರಿಂದ 10ನೇ ತರಗತಿಯಲ್ಲಿ ಪಾಸಾದ ಅರ್ಹ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ.
ಇಚ್ಚೆಯುಳ್ಳವರು ತಮ್ಮ ದೃಢೀಕರಿಸಿದ ಜನ್ಮ ದಿನಾಂಕ, ಅಂಕಪಟ್ಟಿ, ಹಿಂಬದಿಯಲ್ಲಿ ತಮ್ಮ ಹೆಸರು ಮತ್ತು ಸಹಿಯುಳ್ಳ ಒಂದು ಬಣ್ಣದ ಭಾವಚಿತ್ರ (ಭಾವಚಿತ್ರದ ಹಿನ್ನೆಲೆ ನೀಲಿ ಬಣ್ಣದ್ದಾಗಿರಬೇಕು),ರು.10/ ಅಂಚೆಚೀಟಿ ಅಂಟಿಸಿದ 22 x10 ಅಳತೆಯ ಕಂದು ಬಣ್ಣದ ಎರಡು ಸ್ವವಿಳಾಸವುಳ್ಳ ಲಕೋಟೆ, ವಾಸ ದೃಢೀಕರಣ ಪತ್ರ ಮತ್ತು ಭರ್ತಿ ಮಾಡಿದ ಅರ್ಜಿಯನ್ನು ಪೋಸ್ಟ್ ಬಾಕ್ಸ್ ನಂ.2, ಪೋಸ್ಟ್ ಆಫೀಸ್, ಲೋಧಿ ರೋಡ್, ನವದೆಹಲಿ -100 003 ವಿಳಾಸಕ್ಕೆ ದಿನಾಂಕ 05.01.2009ರೊಳಗೆ ತಲಪುವಂತೆ ಕಳುಹಿಸುವುದು.
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ವೆಬ್‌ಸೈಟ್ www.nausena-bharti.nic.in ಇಲ್ಲಿ ಪಡೆಯಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***
ಸೋಲ್ಜರ್ ಟ್ರೇಡ್ಸ್‌ಮನ್ ಹುದ್ದೆಗೆ ಆಯ್ಕೆ
ಮೈಸೂರು: ಮದ್ರಾಸ್ ರೆಜಿಮೆಂಟ್ ಸೆಂಟರ್, ವೆಲ್ಲಿಂಗ್‌ಟನ್, ತಮಿಳುನಾಡು ಇವರು ಯೂನಿಟ್ ಹೆಡ್ ಕ್ವಾರ್ಟರ್ ಕೋಟಾ ಅಡಿಯಲ್ಲಿ ಮಾಜಿ ಸೈನಿಕರ ಹಾಗೂ ಅವಲಂಬಿತರ ಮಕ್ಕಳ ಸ್ವಂತ ಸಹೋದರರನ್ನು ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗಾಗಿ ಮತ್ತು ಮುಕ್ತ ವರ್ಗದ ಅಡಿಯಲ್ಲಿ ಸೋಲ್ಜರ್ ಟ್ರೇಡ್ಸ್‌ಮನ್ (ಮ್ಯುಜಿಷಿಯನ್) ಹುದ್ದೆಗಾಗಿ ದಿನಾಂಕ 07.01.2009 ರಂದು ಬೆಳಿಗ್ಗೆ 7 ಗಂಟೆಯಿಂದ ಅಯ್ಕೆ ನಡೆಸಲಿದ್ದಾರೆ.
ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ 17 ರಿಂದ 21 ವರ್ಷದೊಳಗಿನ ಎಸ್.ಎಸ್.ಎಲ್.ಸಿ.ಯಲ್ಲಿ ಕನಿಷ್ಟ ಶೇ.45 ಅಂಕ ಗಳಿಸಿ ಪಾಸಾದ ಹಾಗೂ ಸೋಲ್ಜರ್ ಟ್ರೇಡ್ಸ್‌ಮನ್ (ಮ್ಯುಜಿಷಿಯನ್) ಹುದ್ದೆಗೆ 17 ರಿಂದ 23 ವರ್ಷದೊಳಗಿನ, 5ನೇ ತರಗತಿ ಮೇಲ್ಪಟ್ಟು ವಿದ್ಯಾಭ್ಯಾಸ ಹೊಂದಿರುವ ಅರ್ಹ ಅಭ್ಯರ್ಥಿಗಳು ಮೂಲ ಮತ್ತು ಶಾಲಾ ಮುಖ್ಯಸರಿಂದ ದೃಢೀಕರಿಸಿದ ಅಂಕಪಟ್ಟಿ ಮತ್ತು ವರ್ಗಾವಣೆ ಪತ್ರ, ಮೂಲ ನಿವಾಸಿ, ಜಾತಿ, ವಾಸ ದೃಢೀಕರಣ ಪತ್ರ, ನಡವಳಿಕೆ ಪತ್ರ, ಪೋಲೀಸ್ ಇಲಾಖೆಯಿಂದ ಪಡೆದ ಪೂರ್ವ ತಪಾಸಣಾ ವರದಿ ಮತ್ತು ಹಿಂಭಾಗದಲ್ಲಿ ದೃಢೀಕರಿಸಿದ ಇತ್ತೀಚಿನ 7 ಬಣ್ಣದ ಭಾವಚಿತ್ರಗಳೊಂದಿಗೆ ಮೇಲ್ಕಾಣಿಸಿದ ಸ್ಥಳ ಹಾಗೂ ದಿನಾಂಕದಂದು ಹಾಜರಿರಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮೈಸೂರು ಇವರಿಂದ ಹಾಗೂ ದೂರವಾಣಿ ಸಮಖ್ಯೆ 0821-2425240ರ ಮೂಲಕ ಪಡೆಯಬಹುದು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications