ಗಡಿಯುದ್ದ್ದಕ್ಕೂ ಪಾಕ್ ಸೈನಿಕರ ಜಮಾವಣೆ
ಇಸ್ಲಾಮಾಬಾದ್, ಡಿ.26: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣ ಕಾವೇರುತ್ತಿದೆ. ಪಾಕಿಸ್ತಾನದೊಂದಿಗೆ ಯುದ್ಧ ಮಾಡುವುದಿಲ್ಲ ಎಂದು ಪ್ರಧಾನಿ ಮನಮೋಹನ್ ಸಿಂಗ್ ಗುರುವಾರ ಪ್ರಕಟಿಸಿದ್ದರೂ ಪಾಕಿಸ್ತಾನ ಸಮಾಧಾನಗೊಂಡಿಲ್ಲ.ಗಡಿಯಲ್ಲಿ ಅದು ಸೈನಿಕರನ್ನು ಜಮಾಯಿಸುತ್ತಿದ್ದು ಅವರಿಗೆ ಸೈನಿಕ ರಜೆಯನ್ನು ರದ್ದುಗೊಳಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಎಲ್ ಒಸಿ ಅಂತಾರಾಷ್ಟ್ರೀಯ ಗಡಿರೇಖೆಯ ಉದ್ದಕ್ಕೂ ಸೈನ್ಯವನ್ನು ನಿಯೋಜಿಸುತ್ತಿದೆ.ಲಾಹೋರ್ ವಲಯದಲ್ಲಿ ಸೈನ್ಯವನ್ನು ದೊಡ್ಡ ಪ್ರಮಾಣದಲ್ಲಿ ಸನ್ನದ್ದುಗೊಳಿಸಿದೆ ಎಂದು ಪಾಕಿಸ್ತಾನದ ಡೈಲಿ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಇದಿಷ್ಟೆ ಅಲ್ಲದೆ ಆ ದೇಶದ ವಾಯುಪಡೆಯನ್ನು ಪಾಕಿಸ್ತಾನ ಕಟ್ಟೆಚ್ಚರದಲ್ಲಿಟ್ಟಿದೆ ಎಂದು ಪತ್ರಿಕೆ ತಿಳಿಸಿದೆ. ಪಾಕ್ ಆಕ್ರಮಿತ ಕಾಶ್ಮೀರ, ಸಿಯಾಲ್ ಕೋಟ್, ರಾಜೌರಿ, ಪೂಂಚ್,ಲಾಹೋರ್ ಸೆಕ್ಟಾರ್ ಗಳಲ್ಲಿ ಪಾಕಿಸ್ತಾನ ಸೈನ್ಯ ಶಸ್ತ್ರಾಸ್ತ್ರಾಗಳೊಂದಿಗೆ ಸನ್ನದ್ಧವಾಗಿದೆ. ಪಿಒಕೆ ಮತ್ತು ಜೀಲಂ ನಲ್ಲಿ ಪಾಕಿಸ್ತಾನ ಸ್ವತಂತ್ರ ಪೊಲೀಸ್ ಪಡೆಗಳನ್ನು ನಿಯೋಜಿಸಿದೆ.
ಸೇನಾಧಿಪತಿಗಳೊಂದಿಗೆ ಪ್ರಧಾನಿ ಭೇಟಿ
ಪಾಕಿಸ್ತಾನ ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಶುಕ್ರವಾರ ಮಧ್ಯಾಹ್ನ ತ್ರಿವಿಧ ಸೈನ್ಯಾಧಿಕಾರಿಗಳೊಂದಿಗೆ ತುರ್ತು ಸಭೆ ಸೇರಿ ಮಾತುಕತೆ ನಡೆಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ನಾರಾಯಣ್ ಸಹ ಸಭೆಯಲ್ಲಿ ಭಾಗವಹಿಸಿದ್ದರು.
(ಏಜೆನ್ಸೀಸ್)












Click it and Unblock the Notifications