ದೇಶಪಾಂಡೆ 0; ಗೌಡ 2; ಯಡ್ಡಿ 6
ಬೆಂಗಳೂರು, ಡಿ. 25: ಅತ್ಯಂತ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭಾ ಉಪಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳ ಸೋಲು ಗೆಲುವುಗಳನ್ನು ಊಹಿಸುವ ಒಂದು ಚುನಾವಣಾ ಪೂರ್ವ ಸಮೀಕ್ಷೆ ಗುರುವಾರ ಹೊರಬಿದ್ದಿದೆ. ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ಸಿಗೆ ಸೊನ್ನೆ ಜೆಡಿಎಸ್ ಗೆ 2 ಮತ್ತು ಭಾರತೀಯ ಜನತಾ ಪಕ್ಷಕ್ಕೆ 6 ಸ್ಥಾನಗಳಲ್ಲಿ ಗೆಲವು ಉಂಟಾಗಲಿದೆ.
ಆಡಳಿತಾರೂಢ ಬಿಜೆಪಿ ಸರಕಾರದ ಸಾಧನೆ - ವೈಫಲ್ಯ, ದೇವೇಗೌಡರ ಕುಟುಂಬ ರಾಜಕೀಯ ದಾಳ, ಕಾಂಗ್ರೆಸ್ ಪಕ್ಷದ ಅಳಿದುಳಿದ ಪ್ರತಿಷ್ಠೆಯನ್ನು ಪಣಕ್ಕೆ ಒಡ್ಡಲಾಗಿರುವ ಈ ಚುನಾವಣೆ ರಾಜ್ಯದಲ್ಲಿ ಬರಲಿರುವ ರಾಜಕೀಯ ಆಗುಹೋಗುಗಳಿಗೆ ದಿಕ್ಸೂಚಿಯಾಗಲಿದೆ.
ಕ್ರಿಯೇಟಿವ್ ಸೆಂಟರ್ ಫಾರ್ ಪೊಲಿಟಿಕಲ್ ಸ್ಟಡೀಸ್ ( ಕಾಪ್ಸ್ )ಸಂಸ್ಥೆ ನಡೆಸಿರುವ ಮತದಾನ ಪೂರ್ವ ಸಮೀಕ್ಷೆ ಪ್ರಕಾರ ಜನಾಭಿಪ್ರಾಯ ಸಂಗ್ರಹಣೆಯ ಸಾರಾಂಶ ಕೆಳಕಂಡಂತಿದೆ. ಕಾಪ್ಸ್ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪೂರ್ವ ಸಮೀಕ್ಷೆಯನ್ನು ಕೈಗೊಂಡಿತ್ತು.
ಮದ್ದೂರು, ಬಿ.ಜೆ.ಪಿ; ಮಧುಗಿರಿ, ಜೆ.ಡಿ.ಎಸ್; ತುರುವೇಕೆರೆ, ಜೆ.ಡಿ.ಎಸ್;ಅರಭಾವಿ, ಬಿ.ಜೆ.ಪಿ ; ಹುಕ್ಕೇರಿ, ಬಿ.ಜೆ.ಪಿ; ದೇವದುರ್ಗ, ಬಿ.ಜೆ.ಪಿ;ದೊಡ್ಡ ಬಳ್ಳಾಪುರ, ಬಿ.ಜೆ.ಪಿ ;ಕಾರವಾರ, ಬಿ.ಜೆ.ಪಿ; ಇದೇ ಫಲಿತಾಂಶವನ್ನು ಅಭ್ಯರ್ಥಿಗಳ ಹೆಸರುಗಳಲ್ಲಿ ಪ್ರತಿಬಿಂಬಿಸಿದಾಗ ಹಣಾಹಣಿ ತ್ರಿಕೋಣ ಸ್ಪರ್ಧೆ ನಡೆದಿರುವ ಮಧುಗಿರಿಯಲ್ಲಿ ಅನಿತಾ ಜಯಭೇರಿ, ಚೆನ್ನಿಗಪ್ಪ ಸೋಲು; ಮದ್ದೂರಿನಲ್ಲಿ ಕಲ್ಪನಾ ಸಿದ್ದರಾಜು ಸೋಲು, ತಮ್ಮಣ್ಣ ಗೆಲುವು.
ಕಾಪ್ಸ್ ಸಮೀಕ್ಷಕರು 8 ವಿಧಾನಸಭಾ ಕ್ಷೇತ್ರಗಳ 183 ಮತಗಟ್ಟೆಗಳ 8,371 ಮತದಾರರನ್ನು Probability Proportionate to Size (PPS) Method ಮೂಲಕ ಸಮೀಕ್ಷೆಗೆ ಆಯ್ದುಕೊಂಡು ಪ್ರಶ್ನಾವಳಿಗಳ ಮೂಲಕ ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ.
ಮತಗಟ್ಟೆಗಳ ವ್ಯಾಪ್ತಿಗಳಲ್ಲಿ 90 ರಿಂದ 100 ಮತದಾರರನನ್ನು Random ಮಾದರಿಯಲ್ಲಿ ಸಮೀಕ್ಷೆಗೆ ಆರಿಸಿಕೊಂಡು ವೈಜ್ಞಾನಿಕವಾದ Systematic Random Sampling Technique ಮುಖೇನ ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿತು.
ಕಾಪ್ಸ್ ಚುನಾವಣಾ ಪೂರ್ವ ಮತದಾರರ ಸಮೀಕ್ಷೆಯಲ್ಲಿ 130 ಜನ ಸಮೀಕ್ಷಕರು ಭಾಗವಹಿಸಿದ್ದು ಒಟ್ಟು ಮತದಾರರ ಅಭಿಪ್ರಾಯಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ 18 ಪ್ರಶ್ನೆಗಳ ಪ್ರಶ್ನಾವಳಿಗಳನ್ನು ಮತದಾರರಿಗೆ ಕೊಡಲಾಗಿತ್ತು. ಇದೆಲ್ಲದರ ಒಟ್ಟು ಸಾರಾಂಶವಾಗಿ 8 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿ.ಜೆ.ಪಿ. ಜಯಗಳಿಸಲಿದ್ದು ಇನ್ನುಳಿದ 2 ಕ್ಷೇತ್ರಗಳಲ್ಲಿ ಜೆ.ಡಿ.ಎಸ್. ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಸಮೀಕ್ಷೆಯಲ್ಲಿ ಗೋಚರವಾದಂತೆ ಕಾಂಗ್ರೆಸ್ ಯಾವುದೇ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಿಲ್ಲ.
ಸಮೀಕ್ಷೆಯ ಸಾರಾಂಶ:
ರಾಜ್ಯದಲ್ಲಿ ಸ್ಥಿರತೆ ಕಾಪಾಡಲು ಯಾವ ರಾಜಕೀಯ ಪಕ್ಷದಿಂದ ಸಾಧ್ಯ ?
ಬಿಜೆಪಿ-43%
ಕಾಂಗ್ರೆಸ್-35%
ಜೆಡಿಎಸ್-23%
ಶಾಸಕರ ಪಕ್ಷಾಂತರ ಪ್ರಹಸನದಿಂದ ರಾಜ್ಯದ ಅಭಿವೃದ್ಧಿಯಲ್ಲಿ ಸ್ಥಿರತೆ ಉಂಟಾಗಿದೆಯೇ ?
ಹೌದು-40%
ಇಲ್ಲ-60 %
(ದಟ್ಸ್ ಕನ್ನಡ ವಾರ್ತೆ)
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications